logo

ಬಾಗಲವಾಡ ಗ್ರಾಮದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ, ಮಟ್ಕಾ ದಂಧೆ..

ಡಿಸೆಂಬರ್ ೨೨,
ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಬಾಗಲವಾಡ ಗ್ರಾಮದಲ್ಲಿ ಮಟ್ಕಾ ದಂಧೆ ಮಿತಿ ಮೀ ರಿದ್ದು, ಬಡ ಕೂಲಿ ಕಾರ್ಮಿಕರ ಬದುಕು ಬೀದಿಗೆ ಬರುತ್ತಿದೆ. ಸಾರ್ವಜನಿಕವಾಗಿ ಗ್ರಾಮ ದ ಬಸಯ್ಯ ತಾತಾ ಹೋಟೆಲ್ ನಲ್ಲಿ ಖುಲಂ ಖುಲಂ ಆಗಿ ಈ ಮಟ್ಕಾ @ ಓಸಿ ದಂಧೆ ನಡೆಯುತ್ತಿದೆ,ಪ್ರಮುಖ ಸ್ಥಳವಾದ ಹೋಟೆಲ್ ನಲ್ಲಿ ಈಕಾನೂ ನು ಬಾಹಿರಚಟುವಟಿಕೆ ನಡೆಯುತ್ತಿದ್ದ ರೂ ಪೊಲೀಸರು ಕಣ್ಮುಚ್ಚಿ ಕುಳಿತಿರು ವುದು ಅನುಮಾನಕ್ಕೆ ಎಡೆ ಮಾಡಿಕೊ ಟ್ಟಿದೆ ಎಂದುಕರ್ನಾಟಕ ರಕ್ಷಣಾ ಪಡೆ (ನೋಂ) ರಾಯಚೂರು ಜಿಲ್ಲಾ ಅಧ್ಯ ಕ್ಷರಾದ ಸಿ.ಮೌನೇಶ ದೊರೆ, ಗಂಭೀರ ವಾಗಿ ಅರೋಪಿಸಿದ್ದಾರೆ,

ಬಾಗಲವಾಡ ಗ್ರಾಮದ ಮುಖ್ಯ ರಸ್ತೆ ಯಲ್ಲಿರುವ ಈ ಹೋಟೆಲ್ ಗೆ ಸುತ್ತ ಮುತ್ತಲಿನ ಗ್ರಾಮಗಳಿಂದ ಬೆಳಗ್ಗೆ ಯಿಂದ ಸಂಜೆವರೆಗೆ ಜನರು ಬಂದು ಐವತ್ತು ರೂಪಾಯಿಯಿಂದ ಪ್ರಾರಂಭಿ ಸಿ ಐದು ಸಾವಿರವರೆಗೂ ಮಟ್ಕಾ ಬರೆ ಯಿಸಿ ಹೋಗುತ್ತಾರೆ,ಬಸಯ್ಯ ತಾತನ ಹೋಟೆಲ್ ಗೆ ಗ್ರಾಹಕರಿಗಿಂತ ಮನೆ ಹಾಳು ಮಾಡುವ ಮಟ್ಕಾ ದಂಧೆಯ ಅಡ್ಡೆಯಾಗಿ ಮಾರ್ಪಟ್ಟಿದೆ. ಹೇಳಿ ಕೊ ಳ್ಳಲು ಇದು ಹೋಟೆಲ್ ಅದರೂ, ಇ ಲ್ಲಿ ನಡೆಯುತ್ತಿರುವುದು ಮಾತ್ರ ಅಪ್ಪ ಟ OC ದಂಧೆ.

ವೀರಯ್ಯ ತಾತ ಎಂಬಾತನೇ ಈ ದಂ ಧೆಯ ಕಿಂಗ್‌ ಪಿನ್ ಆಗಿದ್ದು,ಈತನ ಸಹೋದರ ವೀರಭದ್ರಯ್ಯ ತಾತ ಮ ಟ್ಕಾ ಚೀಟಿಗಳನ್ನು ಬರೆಯುತ್ತಾನೆ.

ಹತ್ತಕ್ಕೆ ಸಾವಿರ, ಸಾವಿರಕ್ಕೆ ಲಕ್ಷ ಎಂಬ ಆಸೆ ತೋರಿಸಿ ದಿನವಿಡೀ ಕಷ್ಟಪಟ್ಟು ದುಡಿಯುವ ಕೂಲಿ ಕಾರ್ಮಿಕರನ್ನು ಈ ಜಾಲ ಸೆಳೆಯುತ್ತಿದೆ. ಬಡವರು ತಮ್ಮ ರಕ್ತ ಸುರಿಸಿ ಸಂಪಾದಿಸಿದ ಹಣ ವನ್ನು ಈ ಜೂಜಿನ ಅಡ್ಡೆಗೆ ಸುರಿಯು ತ್ತಿದ್ದಾರೆ.

ಈತನ ವ್ಯವಹಾರದ ಬಗ್ಗೆ ಸ್ವತಃ ಮೌ ನೇಶ ದೊರೆ ಅವರು ಪ್ರಶ್ನೆ ಮಾಡಿದರೆ, ಅದಕ್ಕೆ ವೀರಯ್ಯ ತಾತನ ಕಡೆಯಿಂದ ಬಂದ ಉತ್ತರ ನಾನು ಈ ಕೆಲಸವನ್ನು ಹಲವು ವರ್ಷ ಗಳಿಂದ ಮಾಡುತ್ತಿದ್ದೇ ನೆ,ಅದನ್ನು ಕೇಳಲು ನೀನು ಯಾವ ನು? ಎಂದು ಏಕವಚನದಲ್ಲಿ ಮಾತ ನಾಡಿ,ಇಲ್ಲಿ ಎಲ್ಲರಿಗೂ ನಾನು ಮಾ ಮೂಲಿ ಕೊಡುತ್ತೇನೆ,ನೀನು ಎಸ್.ಪಿ ಗೆ ಅಲ್ಲ,ಹೋಮ್ ಮಿನಿಸ್ಟರ್ ಗೆ ಹೋಗಿ ದೂರು ನೀಡಿದರು, ನಾನು
ಅಂಜುವುದಿಲ್ಲ, ಎಂದು ಹೇಳಿ,ಇದರ ಬಗ್ಗೆ ವೀಡಿಯೋ ಮಾಡಿದ ಕಾರಣಕ್ಕೆ
ಇಡೀ ಜಗತ್ತಿನಲ್ಲಿ ಈ ದಂಧೆ ನಡೆಯು ತ್ತಿದೆ,ಮೊದಲು ಅವರನ್ನು ಕೇಳಿಆಮೇ ಲೆ ನನ್ನ ಹತ್ತಿರ ಬಾ ಎಂದು,ಜೀವಬೆದ ರಿಕೆ ಸಹ ಹಾಕುವ ಮಟ್ಟದಲ್ಲಿ ಮಾತ ನಾಡಿದರೆ ಎಂದು ಸಿ ,ಮೌನೇಶ ದೊರೆ ಅವರು ತಿಳಿಸಿದರು.

ಈ ವ್ಯವಹಾರ ರಾಜಾ ರೋಷವಾಗಿ ನಡೆಯುತ್ತಿದ್ದರೂ ಯಾವುದೇ ದಾಳಿ ನಡೆಯುತ್ತಿಲ್ಲ. ಪೊಲೀಸರ ಲಂಚ ಕರ್ಮಕಾಂಡದ ಬಗ್ಗೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ, ಮಟ್ಕಾ ಆಡಿಸುವು ದು ಕಾನೂನು ಬಾಹಿರ ಎಂದು ಗೊತ್ತಿ ದ್ದ ರೂ, ಪೊಲೀಸರು ಏಕೆ ಸೈಲೆಂಟ್ ಆಗಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ರನ್ನು ಕಾಡುತ್ತಿದೆ.
ಅದ್ದರಿಂದ ರಾಯಚೂರು ಜಿಲ್ಲೆಯ ಪೋಲಿಸ್ ವರಿಷ್ಠ ಅಧಿಕಾರಿಗಳು (ಎಸ್.ಪಿ)ಎಂ.ಪುಟ್ಟ ಮಾದಯ್ಯ ನವ ರು ಈ ಕೂಡಲೇ ಮಟ್ಕಾ ದಂಧೆ ನಡೆ ಸುವ ಬಸಯ್ಯತಾತ ಮತ್ತು ಆತನ ಸಹೋದರ ವೀರಭದ್ರಯ್ಯ ತಾತ ಇವ ರ ಮೇಲೆ ಕಾನೂನು ಬಾಹಿರ ಚಟುವ ಟಿಕೆ ಆರೋಪದ ಮೇಲೆ ಬಂಧಿಸ ಬೇ ಕು ಎಂದು ಸಿ.ಮೌನೇಶ ದೊರೆ ಜಿಲ್ಲಾ ಅಧ್ಯಕ್ಷರು ಕರ್ನಾ ಟಕ ರಕ್ಷಣಾ ಪಡೆ (ನೋಂ) ಎಸ್.ಪಿ ಅವರಿಗೆ ಆಗ್ರಹಿಸಿ ದ್ದಾರೆ.


ವರದಿ: ಎಸ್.ಎನ್. ವೀರೇಶ.

65
1668 views