ಅಕ್ರಮ ಮಧ್ಯ ಮಾರಾಟಕ್ಕೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಕುಮ್ಮಕ್ಕು ಸಂತೋಷ್ ರಾಣಿ ಪಾಟೀಲ್ ಆರೋಪ
ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮತಕ್ಷೇತ್ರದ ಸೇಡಂ ತಾಲೂಕಿನ ನಿಡುಗುಂದ ಜಿಲ್ಲಾ ಪಂಚಾಯತಿ ಅಡಿಯಲ್ಲಿ ಕರ್ಚಖೇಡ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಅಕ್ರಮ ಮಧ್ಯದ ಅಂಗಡಿ ನಡೆಸುತ್ತಿದ್ದು ಅಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದು ಇದರಿಂದ ಅಕ್ರಮ ಚಟುವಟಿಕೆಗಳಾದ ಮಹಿಳೆಯರಿಗೆ ಚೂಡಾಯಿಸುವುದು ನಿತ್ಯ ಜಗಳಗಳು ನಡೆಯುತ್ತಿವೆ. ಈ ವಿಷಯ ಸಚಿವರ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸಮಾಜ ಸೇವಕಿ ಸಂತೋಷಿರಾಣಿ ತೇಲ್ಕೂರ್ ಆರೂಪಿಸಿದ್ದಾರೆ.