logo

ಅಥಣಿ : ಕಿಲ್ಲರ್ ಯಂತ್ರಕ್ಕೆ ಸಿಲುಕಿ ಇಬ್ಬರು ಮಹಿಳೆಯರು ಸಾವು ; ಮುಂದುವರಿದ ಕಬ್ಬು ಉತ್ತರಿಸುವ ಯಂತ್ರಗಳ ಅವಾಂತರ..!


ಅಥಣಿ : ಕಬ್ಬು ಸಾಗಿಸುವ ಡಂಪಿಂಗ್ ಮಶೀನ್ ಚಾಲಕ ಕೂಲಿ ಕೆಲಸದಲ್ಲಿ ನಿರತವಾಗಿದ್ದ ಮಹಿಳೆಯರನ್ನು ಗಮನಿಸದೆ ಹಿಮ್ಮುಖವಾಗಿ ವಾಹನ ಚಲಾಯಿಸಿದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಸತ್ತಿ ಗ್ರಾಮದಲ್ಲಿ ಜರುಗಿದೆ.

ಬೌರವ್ವ ಲಕ್ಷ್ಮಣ ಕೋಬಡಿ (60) ಹಾಗೂ ಲಕ್ಷ್ಮಿಬಾಯಿ ಮಲ್ಲಪ್ಪ ರುದ್ರಗೌಡರ (65) ಸಾವಿಗೀಡಾದ ನತದೃಷ್ಟ ಮಹಿಳೆಯರಿದ್ದಾರೆ. ತಾಲೂಕಿನ ಸತ್ತಿ ಗ್ರಾಮದ ಹೊರವಲಯದಲ್ಲಿ ಇಬ್ಬರು ರೈತ ಮಹಿಳೆಯರು ಕಬ್ಬು ಕಟಾವು ಮಾಡುವ ಮಶೀನ್ ಜೊತೆ ಇರುವ ಕಬ್ಬಿನ ಡಂಪಿಂಗ್ ಟ್ರ್ಯಾಕ್ಟರ್ ಡಬ್ಬಿ ಹಿಂಬದಿಯಿಂದ ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರೂ ಮಹಿಳೆಯರು ಮೃತಪಟ್ಟಿದ್ದಾರೆ.

ಇವರು ಪ್ರತಿದಿನದಂತೆ ಕೆಲಸದಲ್ಲಿ ಮಹಿಳೆಯರು ನಿರತರಾಗಿದ್ದಾರೆ. ಇಳಿ ವಯಸ್ಸಿನಲ್ಲಿ ತಮ್ಮ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಲು ದಿನ ನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ಮಹಿಳೆಯರ ಧಾರುಣ ಸಾವು ಕುಟುಂಬ ಸದಸ್ಯರಿಗೆ ಬರಸಿಡಿಲು ಬಡಿದಂತಾಗಿದೆ.

ಇಬ್ಬರೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಇವರ ಸಾವು ಕಂಡು ಇಡೀ ಗ್ರಾಮಸ್ಥರೇ ಕಂಬನಿ ಮಿಡಿದಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪ್ರಕರಣದ ದಾಖಲಿಕೊಂಡು ತನಿಖೆ ನಡೆಸಿದ್ದಾರೆ.

0
46 views