logo

ಮಾನ್ಯ ಶಾಮನೂರು ಶಿವಶಂಕರಪ್ಪನವರ ಪಾರ್ಥಿವ ಶರೀರ ಮೆರವಣಿಗೆ ಮಾರ್ಗ ಪ್ರಕಟ

ನಗರದಲ್ಲಿ ಸಂಚಾರ ನಿಯಂತ್ರಣ; ಸಾರ್ವಜನಿಕರಿಗೆ ಸಹಕಾರ ಕೋರಿಕೆ

ದಾವಣಗೆರೆ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಮಾನ್ಯ ಶಾಮನೂರು ಶಿವಶಂಕರಪ್ಪನವರ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಲಿದೆ ಎಂದು ಜಿಲ್ಲಾಡಳಿತ ಪ್ರಕಟಿಸಿದೆ. ಸಾರ್ವಜನಿಕರು ಶಿಸ್ತು ಹಾಗೂ ಸಹಕಾರ ವಹಿಸುವಂತೆ ಮನವಿ ಮಾಡಲಾಗಿದೆ.

ಮಾರ್ಗ–1: ಜಿಲ್ಲಾ ಉಸ್ತುವಾರಿ ಸಚಿವರ ಮನೆಯಿಂದ ಹೈಸ್ಕೂಲ್ ಮೈದಾನದವರೆಗೆ
ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದಿಂದ ಮೆರವಣಿಗೆ ಆರಂಭವಾಗಿ ಸಾಯಿಬಾಬ ದೇವಸ್ಥಾನ, ರೆಡ್ಡಿ ಬಿಲ್ಡಿಂಗ್, ಚರ್ಚ್ ಮುಂಭಾಗ, ರಾಂ ಅಂಡ್ ಕೋ ಸರ್ಕಲ್, ಎವಿಕೆ ಕಾಲೇಜ್ ರಸ್ತೆ, ಮಹಾತ್ಮ ಗಾಂಧಿ ಶಾಲೆ, ಹಳೆ ಕೋರ್ಟ್ ರಸ್ತೆ ಮೂಲಕ ಹೈಸ್ಕೂಲ್ ಮೈದಾನ ತಲುಪಲಿದೆ.

ಮಾರ್ಗ–2: ಹೈಸ್ಕೂಲ್ ಮೈದಾನದಿಂದ ಕಲ್ಲೇಶ್ವರ ರೈಸ್‌ಮಿಲ್‌ವರೆಗೆ
ಹೈಸ್ಕೂಲ್ ಮೈದಾನದಿಂದ ಹೊರಟ ಮೆರವಣಿಗೆ ಹಳೆ ಕೋರ್ಟ್ ಮೈದಾನ, ಎಸಿ ಕ್ರಾಸ್ (ಬಲಕ್ಕೆ ತಿರುಗಿ), ರೈಲ್ವೆ ಅಂಡರ್ ಬ್ರಿಡ್ಜ್, ಲಕ್ಷ್ಮಿ ಸರ್ಕಲ್, ಗಡಿಯಾರ ಕಂಬ, ಕಾಯಿಪೇಟೆ, ಬಸವೇಶ್ವರ ದೇವಸ್ಥಾನ ಮುಂಭಾಗ, ದೊಡ್ಡಪೇಟೆ ಗಣೇಶ ದೇವಸ್ಥಾನ, ಎಸ್.ಕೆ.ಪಿ ರಸ್ತೆ, ದುರ್ಗಾಂಬಿಕ ದೇವಾಲಯ, ಹಗೆದಿಬ್ಬ ಸರ್ಕಲ್ (ಬಲಕ್ಕೆ ತಿರುಗಿ), ಕಾಳಿಕಾಂಬ ದೇವಸ್ಥಾನ ರಸ್ತೆ, ಗ್ಯಾಸ್ ಕಟ್ಟೆ ಸರ್ಕಲ್ (ಎಡಕ್ಕೆ ತಿರುಗಿ), ಬಕ್ಕೆಶ್ವರ ದೇವಸ್ಥಾನ ಮುಂಭಾಗ, ಎಂ.ಜಿ ಸರ್ಕಲ್, ಹಾಸಭಾವಿ ಸರ್ಕಲ್, ಮದೀನಾ ಆಟೋ ಸ್ಟ್ಯಾಂಡ್, ಹಳೆ ಬೇತೂರು ರಸ್ತೆ, ಅರಳಿ ಮರ ಸರ್ಕಲ್, ವೆಂಕಟೇಶ್ವರ ಸರ್ಕಲ್ ಮೂಲಕ ಬಲಕ್ಕೆ ತಿರುಗಿ ಕಲ್ಲೇಶ್ವರ ರೈಸ್‌ಮಿಲ್‌ಗೆ ತಲುಪಲಿದೆ.

ಮೆರವಣಿಗೆ ವೇಳೆ ಭಾರಿ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಹಾಗೂ ಪೊಲೀಸ್ ಹಾಗೂ ಆಡಳಿತ ಸಿಬ್ಬಂದಿಗೆ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

236
13497 views