ಕೆ. ಬೇವಿನಹಳ್ಳಿಯಲ್ಲಿ ಭಕ್ತಿಭಾವದಿಂದ ಆರಂಭವಾದ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ.
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಸುಕ್ಷೇತ್ರ ಕಾಶಿಬೇವಿನಹಳ್ಳಿ ಗ್ರಾಮದಲ್ಲಿ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಡಿಸೆಂಬರ್ 13ರಿಂದ 17ರವರೆಗೆ ವೈಭವದಿಂದ ಜರುಗುತ್ತಿದೆ. ಜಾತ್ರೆಯ ಮೊದಲ ದಿನ ದೊಡ್ಡಬಾತಿ ಗ್ರಾಮದಿಂದ ಶ್ರೀ ರೇವಣ ಸಿದ್ದೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರ ಸ್ವಾಮಿಗಳನ್ನು ಡೊಳ್ಳು–ಭಜನೆ–ವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಗ್ರಾಮಕ್ಕೆ ಕರೆತರಲಾಯಿತು. ಗಂಗಾಪೂಜೆ ನೆರವೇರಿಸಿ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಿಸಲಾಯಿತು. ರಥೋತ್ಸವದ ಗಾಲಿಯನ್ನು ಹೊರಹಾಕಲಾಗಿದ್ದು, ಭಕ್ತರಿಗೆ ದೋಸೆ ಪ್ರಸಾದ ವಿತರಿಸಲಾಯಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.