logo

ಹೊನ್ನಾಳಿ: ನಕಲಿ ಬಂಗಾರ ನೀಡಿ ವಂಚನೆ : ಇಬ್ಬರ ಬಂಧನ, 5.90 ಲಕ್ಷ ರೂ ನಗದು ವಶ

ದಾವಣಗೆರೆ: ಪಟ್ಟಣದ ಮಠದ ಸರ್ಕಲ್ ಬಳಿ ಇರುವ ಆರ್ಚ ಬಳಿ ಕರೆದುಕೊಂಡು ಹೋಗಿದ್ದ ಮಳವಳ್ಳಿ ತಾಲ್ಲೂಕಿನ ಮೂರ್ತಿ ಕೆ.ವಿ ಎಂಬುವರಿಗೆ ಆರೋಪಿಗಳಾದ ಪರಶುರಾಮ 43 ವರ್ಷ, ಹಾಡೋನಹಳ್ಳಿ ಗ್ರಾಮ ಶಿವಮೊಗ್ಗ ತಾಲ್ಲೂಕು ಹಾಗೂ ಮನೋಜ್ 28 ವರ್ಷ, ದಾನಿಹಳ್ಳಿ ಗ್ರಾಮ, ನ್ಯಾಮತಿ ತಾಲ್ಲೂಕು, ಇವರುಗಳು ನನ್ನ ನಂಬಿಸಿ 06 ಲಕ್ಷ ರೂಗಳನ್ನು ಹಾಗು ನನ್ನ ಮೊಬೈಲ್‌ನ್ನು ಪಡೆದುಕೊಂಡು ನನಗೆ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಮೋಸ ಮಾಡಿದ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ದೂರು ನೀಡಿದ್ದರ ಮೇಲೆ ಗುನ್ನೆನಂ;323/2025 ಕಲಂ;-318(4).ಸಹಿತ 3(5).ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದರು.

ಆರೋಪಿಗಳಿAದ ರೂ. 5 ಲಕ್ಷದ 90 ಸಾವಿರ ನಗದು ಹಣ,ಒಂದು ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ಮೋಟಾರ್ ಸೈಕಲ್ಲನ್ನು ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸರು ವಶಪಡಿಸಿಕೋಂಡಿದ್ದಾರೆ.

56
1358 views
2 comment