logo

ನಾಗರಾಜ ಪ್ರಭಾ ಕಿ.ಅ.ಅವರ ವಿರುದ್ಧ ಜೆ ಜೆ ಎಮ್ ಕಳಪೆ ಕಾಮಗಾರಿ,ಸೇರಿದಂತೆ ನಾನಾ ರೀತಿಯ ಅಕ್ರಮ ಅವ್ಯವಹಾರಗಳ ಆರೋಪ ಇದ್ದು ಇವರನ್ನು ಅಮಾನತು ಮಾಡುವಂತೆ ಕ.ದ.ವೇದಿಕೆ ಒತ್ತಾಯ.


ಸಿಂಧನೂರು ಡಿಸೆಂಬರ್ 13

ನಾಗರಾಜ ಪ್ರಭಾ ಕಿರಿಯ ಅಭಿಯಂ ತರರು,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಸಿಂ ಧನೂರು ಇವರ ವಿರುದ್ಧ ಜೆಜೆಎಮ್ ಕಳಪೆ ಕಾಮಗಾರಿ ಕುರಿತು ಹಾಗೂ ಇ ತ್ಯಾದಿ‌ ಬೇರೆ ಬೇರೆ ಯೋಜನೆಯ ಕು ಡಿಯುವ ನೀರು ಕಾಮಗಾರಿಗಳ ಸರಿ ಯಾಗಿ ನಿರ್ವಹಣೆ ಮಾಡದೆ ಗುತ್ತಿಗೆ ದಾರ ಜೊತೆ ಶಾಮೀಲಾಗಿ ,ದುರ್ನಡ ತೆ ಅಕ್ರಮ ಅವ್ಯವಹಾರ ಹಾಗೂ ಕಾ ಮಗಾರಿಗಳ ಕಳಪೆ‌‌ ಗುಣಮಟ್ಟದಲ್ಲಿ ನಿರ್ವಹಣೆ ಮಾಡಿದ ಕುರಿತು ಗಂಭೀ ರವಾದ ಇಲಾಖೆ ಇಲಾಖೆ ವಿಚಾರಣೆ ಹಾಗೂ ಸಾಕಷ್ಟು ದೂರುಗಳು ಲೋ ಕಾಯುಕ್ತರ ಕಛೇರಿ ಯಲ್ಲಿ ವಿಚಾರಣೆ ಬಾಕಿ ಇದ್ದು, ಇವರಿಗೆ ಹಣಕಾಸು ವ್ಯ ವಹಾರ ಇರದ ಕೆಲಸಕ್ಕೆ ಸೀಮಿತಗೊ ಳಿಸುವ ಸಾರ್ವಜನಿಕ ಹಾಗೂ ಆಡಳಿ ತಾತ್ಮಕ ಹಿತದೃಷ್ಟಿಯಿಂದ ನೀಡಲಾದ ಮನವಿ.
ನಾಗರಾಜ ಪ್ರಭಾ ಕಿ.ಅ.ಇವರು ಮಾ ನವಿ ತಾಲೂಕಿನ ಜೆಜೆಎಮ್ ಕಾಮಗಾ ರಿಗಳ ಕಳಪೆ‌ ಗುಣಮಟ್ಟದಲ್ಲಿ ನಿರ್ವ ಹಣೆ ಮಾಡಿದ ಕಾರಣದಿಂದಾಗಿ ಜಿ ಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಸೇವಯಿಂ ದ ಅಮಾನತ್ತುಗೊಳಿಸಿ ಆದೇಶ ಜಾರಿ ಮಾಡಿದ್ದರು,ನಂತರ ಕೆಲವು ತಿಂಗಳು ಗತಿಸಿದ ನಂತರ ನಿಯಮಾನುಸಾರ ಅ ಮಾನತ್ತು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸಿ ಸಿಂಧನೂರು ಉಪ-ವಿಭಾಗಕ್ಕೆ ಸ್ಥ ಳ ನಿಯುಕ್ತಿಗೊಳಿಸಿ ಆ ದೇಶ ನೀಡಲಾಗಿದೆ.

ನಾಗರಾಜ ಪ್ರಭಾ ಅವರ ಕಾರ್ಯ ವೈ ಖರಿ ತೃಪ್ತಿಕರವಾಗಿರುವುದಿಲ್ಲ,ತನ್ನ ಸ್ವ ಹಿತಾಸ ಕ್ತಿಗೆ ಅನುಗುಣವಾಗಿ ಸಹಕರಿ ಸುವ ಗುತ್ತಿಗೆದಾರರಿಗೆ ಕೆಟಿಪಿಪಿ ನಿಯ ಮಾವಳಿಗಳ ಉಲ್ಲಂಘನೆ ಇಲಾಖೆ ಯ ಕಾಮಗಾರಿಗಳ ಗುತ್ತಿಗೆ‌ ಕೊಡಿಸು ವಲ್ಲಿ ಪ್ರಭಾವ ಬೀರುವುದು,(ಉದಾ:- ಪವನಕುಮಾರ ಬಿರಾದರ ಬೀದರ್ ಮೂಲದ ಗುತ್ತಿಗೆದಾರ) ಅವರುಗಳು ಜೊತೆ ಶಾಮೀಲಾಗಿ ಕಳಪೆ ಹಾಗೂ ಬೋಗಸ್ ಕಾಮಗಾರಿಗಳ ಮೂಲಕ ಸರಕಾರದ ಅನುದಾನವನ್ನು ಕೊಳ್ಳೆ ಹೊಡೆಯುವುದು. ಆ ಹಣದಿಂದ ಸಕ್ಷ ಮ ಪ್ರಾಧಿಕಾರ ಅನುಮತಿ ಪಡೆಯದೆ ಕೇಂದ್ರ‌ಸ್ಥಾನವನ್ನು ಬಿಟ್ಟು ಮೋಜು ಮಸ್ತಿಗಾಗಿ ಅಂತರರಾಜ್ಯ ಪ್ರವಾಸ( ಗೋವಾ,ರಾಜಸ್ಥಾನ, ಮಹಾರಾಷ್ಟ್ರ ‌ಇ ತ್ಯಾದಿ) ನಿಯಮಬಾಹಿರವಾಗಿ ಕೈಗೊ ಳ್ಳುವ ಅವರ ಫೋಟೋಗಳನ್ನು ವಾ ಟ್ಸಪ್ ಸ್ಟೇಟಸ್ ಇತರೆ ಸಾಮಾಜಿಕ ಜಾಲತಾಣದಲ್ಲಿ ಇಟ್ಟು ತೀರಾ ದುರ್ನ ಡತೆ ತೋರುತ್ತಿದ್ದಾರೆ, ಕಛೇರಿಯ ಇ ರುವ ಬೇರೆ ಬೇರೆ ಪ್ರಾಮಾಣಿಕ ಹಾ ಗೂ ದಕ್ಷ ಇಂಜಿನಿಯರ್ ಗಳ ಮೇಲೆ ನಕಾರಾತ್ಮಕ ಹಾಗೂ ವ್ಯತಿರಿಕ್ತವಾದ ಪರಿ ಣಾಮ ಬೀರುವ ಹಾಗೂ ಭ್ರಷ್ಟಾ ಚಾರಕ್ಕೆ ಕೈ ಹಾಕುವಂತಹ ಅಡ್ಡದಾರಿ ಹಿಡಿಯುವಂತಹ ಅಕ್ರಮ ಅವ್ಯವಹಾ ರದಂತಹ ಕೆಲಸಗಳನ್ನು ಮಾಡುವಂತ ಹ ಕೆಟ್ಟ ಮನಸ್ಥಿತಿಯನ್ನುಂಟುಮಾಡು ತ್ತಿದ್ದಾರೆ.

ಇವರು ಕೇಂದ್ರಸ್ಥಾನದಲ್ಲಿ ಲಭ್ಯವಿರು ವುದಿ ಲ್ಲ ಅನುಮತಿ ಪಡೆಯದೆ ಬೇರೆ ಬೇರೆ ಜಿಲ್ಲೆ ಗಳಿಗೆ ಹಾಗೂ ರಾಜ್ಯಗಳ ಲ್ಲಿ ಪ್ರವಾಸ ಕೈಗೊಳ್ಳುತ್ತಾರೆ,ಇವರ ಮೊಬೈಲ್ ನಂಬರ್ ನ ಜಿ. ಪಿ.ಎಸ್. ಲೋಕೆಷನ್ ಕಳೆದ ಒಂದು ವರ್ಷದ ಅವಧಿಗೆ ತೆಗೆಸಿದರೆ ನಿಮಗೆ ಸಂಪೂ ರ್ಣ ಸತ್ಯಾಂಶ ತಿಳಿಯುತ್ತದೆ.

ಇವರು ಸ್ಥಳೀಯ ಕೆಲ ಪುಡಾರಿ ರಾಜ ಕಾರಣಿಗಳ ಜೊತೆ ಬೆರೆಯುವುದು ಹೋಟೆಲ್‌ಗಳಲ್ಲಿ ಪಾರ್ಟಿ ಮಾಡಿಸು ವುದು,ಹರಟೆ ಹೊಡೆಯುವುದು ಮಾ ಡುತ್ತಾರೆ,ಗುತ್ತಿಗೆದಾರರ ಜೊತೆ ಹಣ ಕೀಳುವ ವಿಷಯದಲ್ಲಿ ಕಿರಿಕಿರಿ ಉಂ ಟುಮಾಡಿಕೊಂಡು,ಗುತ್ತಿಗೆದಾರರಿಂದ ಮಾನಸಿಕ ಕಿರುಕುಳ ಇತ್ಯಾದಿ ಬೆದರಿಕೆ ಇದೆ ಅಂತ ಸುಳ್ಳು ದೂರುಗಳನ್ನು ಸ ಲ್ಲಿಸುತ್ತಿದ್ದಾರೆ,ಇವರ ಕಿರುಕುಳದಿಂದ ಮಾನವಿ, ಸಿಂಧನೂರು,ಲಿಂಗಸೂಗು ರುನಲ್ಲಿ ಹೊರಗುತ್ತಿಗೆ,ಕ್ಷೇಮಾಭಿವೃದ್ಧಿ ಹಾಗೂ ಸರ್ಕಾರಿ ಇಂಜಿನಿಯರ್ ಗಳಿ ಗೆ ಸಾಕಷ್ಟು ಮಾನಸಿಕ ಹಿಂಸೆಯಾಗು ತ್ತಿರುವುದು ನೊಂದು-ಬೆಂದು ಅವರು ಗಳೆಲ್ಲರೂ ತಮ್ಮ ಅಳಲನ್ನು ಸಾರ್ವಜ ನಿಕರಲ್ಲಿ ಹೇಳಿಕೊಳ್ಳುತ್ತಿದ್ದಾರೆ,

ಇವರಿಗೆ ಬಹಶ ವಿಶೇಷವಾಗಿ ಕೇವಲ ಹಣ ಕಾಸು ವಹಿವಾಟು ನಿರಂತರವಾ ಗಿ ಇರುವಂತಹ ಬಹುಕೋಟಿ ಯೋ ಜನೆಗಳ ಕಾಮಗಾರಿಗಳಾದ ಜಲಧಾ ರೆ,ಓ& ಎಮ್, ಬಹುಗ್ರಾಮ ಕುಡಿ ಯುವ ನೀರಿನ ಯೋಜನೆ, ಗ್ರಾ.ಪಂ. /ತಾ.ಪಂ./ಜಿ.ಪಂ./ಇತರೆ ಯೋಜನೆ ಗಳ ಕಾಮಗಾರಿಗಳ ನಿರ್ವಹಣೆ ಕೆಲ ಸವನ್ನು ಸಿಂಧನೂರು ಮೂಲ ಕರ್ತ ವ್ಯ ಸ್ಥಳ ಸೇರಿದಂತೆ ಹೆಚ್ಚುವರಿಯಾಗಿ ಮಾನವಿ, ಲಿಂಗಸೂಗೂರುನಲ್ಲಿ ನೀಡಿ ರುವುದು ಇನ್ನಷ್ಟು ಭ್ರಷ್ಟಾಚಾರಕ್ಕೆ ಸಹ ಕರಿಸುವ ಹಾಗೂ ಭ್ರ ಷ್ಟಾಚಾರವೆಸಗು ವ ವಾತಾವರಣ ನಿರ್ಮಾಣಮಾಡಿ ಕೊಟ್ಟಂತಾಗಿದೆ.

ನಿರಂತರವಾಗಿ ಕರ್ತವ್ಯ ಲೋಪ, ಬೇ ಜವಾಬ್ದಾರಿತನ,ಮೇಲಾಧಿಕಾರಿಗಳ ಆ ದೇಶಗಳನ್ನು ಪಾಲನೆ ಮಾಡುವಲ್ಲಿ ತೀ ರಾನಿರಾಸಕ್ತಿ, ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ,ಅನಧಿಕೃತವಾಗಿ ಕೇಂ ದ್ರ ಸ್ಥಾನವನ್ನು ಮೋಜು-ಮಸ್ತಿಗಾಗಿ ಬಿಟ್ಟು ಹೋಗುವ, ಸಾರ್ವಜನಿಕರ ಧೂಮಪಾನವನ್ನು ಮಾಡುತ್ತಾದುರ್ನ ಡತೆ ಎಸಗುವ,ಅಷ್ಟೇ ಅಲ್ಲದೆ ತನ್ನ ಸೇವಾ ಅವಧಿಯಲ್ಲಿ ಸಾಕಷ್ಟು ದೂ ರುಗಳನ್ನು ಲೋಕಾಯುಕ್ತರ ಕಛೇರಿ ಯಲ್ಲಿ ವಿಚಾರಣೆ ಬಾಕಿ ಉಳಿಸಿ ಕೊಂ ಡಿರುವ ಹಾಗೂ ಅಮಾನತ್ತು ತೆರವು ಗೊಳಿಸಿರುವುದು ಸೇವೆಗೆ ಪುನರ್ ಸ್ಥಾ ಪಿಸಿರುವುದನ್ನು ಇಲಾಖೆ ವಿಚಾರಣೆ ಇಂದ ಕೈಬಿಡಲಾಗಿದೆಂದು ಕಛೇರಿ ಹಾ ಗೂ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಾ ಇನ್ನೂ ಗಂಭೀರ ಸ್ವರೂಪ ದ ಇಲಾಖೆ ವಿಚಾರಣೆ ಬಾಕಿ ಉಳಿಸಿ ಕೊಂಡಿರುವ,ಅಧಿಕಾರ ದುರ್ಬಳಕೆ ಮಾಡಿ ಕೊಂಡು ತನ್ನ ಸ್ವ ಹಿತಾಸಕ್ತಿಗೆ ಸಹಕರಿಸುವ ಪವನ ಕುಮಾರ ಬಿರಾ ದರ ಎಂಬ ಬೀದರ ಮೂಲದ ಗುತ್ತಿಗೆ ದಾರನಿಗೆ ಅಕ್ರಮ ಪ್ರಕ್ರಿಯೆಗಳ ಮೂ ಲಕ ಕಾಮಗಾರಿಗಳ ಗುತ್ತಿಗೆಕೊಡಿಸು ವಲ್ಲಿ ಪ್ರಭಾವ ಬೀರುವ ಸಂಪೂರ್ಣ ವಾಗಿ ತನ್ನ ಕೆಲಸ ಕಾರ್ಯಗಳನ್ನು ಪ್ರಾ ಮಾಣಿಕವಾಗಿ ಮಾಡದೆ ಇರುವ ನಾಗ ರಾಜ ಪ್ರಭಾ ಕಿರಿಯ ಅಭಿಯಂತರ ರಾದ ಇವರಿಗೆ ಹಣಕಾಸು ವ್ಯವಹಾರ ಇರುವಂತಹ ಕಾಮಗಾರಿಗಳ ನಿರ್ವ ಹಣೆ ಹಾಗೂ ಮೇಲುಸ್ತುವಾರಿ ಕೆಲಸ ಗಳ ಹಂಚಿಕೆ ಮಾಡಿರುವುದನ್ನು ಸಾ ರ್ವಜನಿಕ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದ ತೆಗೆಯುವುದು ತಮ್ಮ ಆ ದ್ಯ ಕರ್ತವ್ಯ ಹಾಗೂ ನೈತಿಕ ಜವಾಬ್ದಾ ರಿಯಾಗಿರುತ್ತದೆ,ಕಾರಣ ಕೂಡಲೇಅಂ ತಹ ಕೆಲಸಗಳ ಹಂಚಿಕೆಯಿಂದ ಇವರ ನ್ನು ಕೈಬಿ ಟ್ಟು ಹಣಕಾಸು ವ್ಯವಹಾರ ಇರದ ಕೆಲಸ ಗ ಳಿಗೆ ಇವರನ್ನು ಬಳಸಿ ಕೊಳ್ಳಬೇಕೆಂದು ಹಾಗೂ ಇವರು ಕ ಡ್ಡಾಯವಾಗಿ ಕರ್ತವ್ಯ ನಿರತ ಕೇಂದ್ರ ಸ್ಥಾನದಲ್ಲಿರುವುದನ್ನು ನಿರಂತರವಾಗಿ ಖಚಿತಪಡಿಸಿಕೊಳ್ಳುವ ಹಾಗೂ ನಿಶ್ಚಿತ ಪಡಿಸಿಕೊಳ್ಳುವ ಕೆಲಸವನ್ನು ಮಾಡ ಬೇಕೆಂದು ಈ ಮೂಲಕ ಸಾರ್ವಜನಿಕ ಸೇವೆ ಯಲ್ಲಿ ಸದಾ ಸ್ವಚ್ಛ- ಭ್ರಷ್ಟಾ ಚಾ ರ ರಹಿತವಾದ ಪ್ರಾಮಾಣಿಕ ಆಡಳಿತ ದ ವಾತಾವರಣ ನಿರ್ಮಾಣ ಇರಬೇ ಕೆಂಬ ಸಾಮಾಜಿಕ ಕಳ ಕಳಿಯಿಂದ ಸದರಿ ಮನವಿಯನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈ ರ್ಮಲ್ಯ,ಉಪವಿಭಾಗ, ಇವರಿಗೆ ಮನವಿ ಸಲ್ಲಿಸಿಲಾಗಿದೆ ಎಂದು ವಿರು ಪಾಕ್ಷಿ ,ತಾಲೂಕ ಅಧ್ಯಕ್ಷರು, ಕರ್ನಾಟ ಕ ದಲಿತ ರಕ್ಷಣಾ ವೇದಿಕೆ (ರಿ)ಸಿಂಧ ನೂರು ಇವರು ಪತ್ರಿಕೆ ಹೇಳಿಕೆ ನೀಡಿ ದರು, ಈ ಸಂದರ್ಭದಲ್ಲಿ ಜಾವೀದ್ ನಗರ ಘಟಕ, ಅಧ್ಯಕ್ಷರು ಗೌತಮ್ ಬುದ್ಧ, ಅಯ್ಯಪ್ಪ ಮತ್ತು ದಲಿತ ಮು ಖಂಡರಾ ದ ಸುರೇಶ ಗೋರೆಬಾಳ ಹಾಜರಿದ್ದರು.






1
13 views