logo

ಸಾರ್ವತ್ರಿಕ ಆರೋಗ್ಯ ರಕ್ಷಣೆ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ



ಸಿಂಧನೂರು: ಡಿ 13, ತಾಲೂಕು ಕಾ ನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಸನ್‌ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ (ಡಿ. ಫಾರ್ಮಸಿ, ನರ್ಸಿಂಗ್, ಪ್ಯಾರಾಮೆಡಿ ಕಲ್ ಕಾಲೇಜು) ಹಾಗೂ ತಾಲೂಕು ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆ ದಿನದ ಕಾನೂನು ಅರಿವು ನೆರ ವು ಕಾರ್ಯಕ್ರಮವನ್ನುವನ್ನು ಅದ್ದೂ ರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಸನ್ಮಾನ್ಯ ನ್ಯಾಯಾಧೀ ಶರು ಶ್ರೀಮತಿ ರೂಪ, ಪ್ರಧಾನಸಿವಿಲ್ ನ್ಯಾಯಾಧೀಶರು, ಹಾಗೂ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕೆ. ಭೀಮನಗೌಡ ಅಧ್ಯಕ್ಷರು – ತಾ ಲೂಕು ನ್ಯಾಯವಾದಿಗಳ ಸಂಘ ಸಿಂಧನೂರು ಹಾಗೂ ಎಲ್ಲಾ ಮುಖ್ಯ ಅತಿಥಿಗಳಿಗೆ ಪುಷ್ಪಾರ್ಚನೆ ಮೂಲಕ ಆತ್ಮೀಯ ಸ್ವಾಗತ ನೀಡಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಗಿಡ ಕ್ಕೆ ನೀರು ಹಾಕುವ ಮೂಲಕ ಆರೋ ಗ್ಯ ದಿನದ ಕಾರ್ಯಕ್ರಮಕ್ಕೆ ಸಂಕೇತಾ ತ್ಮಕ ಆರಂಭ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ರೂಪ ಅವರು, “ದೇವರು ಪ್ರತಿಯೊಬ್ಬರಿಗೂ ನೀಡಿರುವ ದೇಹವ ನ್ನು ಸರಿಯಾದ ಕ್ರಮಗಳು, ನಿಯಮಿ ತ ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಕಾಪಾಡಿಕೊಂ ಡಾಗ ಮಾತ್ರ ‘ಆರೋಗ್ಯವೇ ಭಾಗ್ಯ’ ಎಂಬ ನುಡಿ ಸಾರ್ಥಕವಾಗುತ್ತದೆ” ಎಂದು ತಿಳಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಕೆ. ಭೀಮ ನ ಗೌಡ ವಕೀಲರು ಮಾತನಾಡಿ ದಿನ ದ 24 ಗಂಟೆಗಳನ್ನು ಸರಿಯಾಗಿ ಮೂ ರು ಭಾಗಗಳಾಗಿ ಹಂಚಿಕೊಂಡು –ಕೆಲ ಸ, ವಿಶ್ರಾಂತಿ ಮತ್ತು ಕುಟುಂಬದೊಂ ದಿಗೆ ಗುಣಮಟ್ಟದ ಸಮಯ ಕಳೆಯು ವ ಮೂಲಕ ಶಾರೀರಿಕ ಮತ್ತು ಮಾನ ಸಿಕ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕೆಂದು ಸಲಹೆ ನೀಡಿದರು.

ವಿಜಯಚಂದ್ರ ಪ್ರಭು ಬಿ, ಸಹಾಯಕ ಸರಕಾರಿ ಅಭಿಯೋಜಕರು, ಆರೋ ಗ್ಯ ಕಾರ್ಯಕರ್ತರ ಹಕ್ಕು–ರಕ್ಷಣೆ ಹಾ ಗೂ ಕಾನೂನು ಪ್ರೋವಿಷನ್ಸ್ ಕುರಿತು ಮಾಹಿತಿ ನೀಡಿ, ಗುಣಮಟ್ಟದ ಸಾರ್ವ ಜನಿಕ ಆರೋಗ್ಯ ಸೇವೆಯನ್ನು ನಿಷ್ಠೆ ಯಿಂದ ಒದಗಿಸುವ ಅಗತ್ಯವನ್ನು ವಿ ವರಿಸಿದರು. ಶ್ರೀ ಶೇಖರಪ್ಪ ಗಡೆದ್, ಖಜಾಂಚಿ – ತಾಲೂಕು ನ್ಯಾಯವಾ ದಿಗಳ ಸಂಘ, ಇವರು ಮಾತನಾಡಿ “ಸಾಲವಿಲ್ಲದವನೂ, ಆರೋಗ್ಯವಂತ ನೂ ಆದವನೇ ನಿಜವಾದ ಶ್ರೀಮಂತ” ಎಂದು ಆರೋಗ್ಯದ ಮಹತ್ವವನ್ನು ಒತ್ತಿಹೇಳಿದರು,
ಮುಖ್ಯ ಉಪನ್ಯಾಸಕರಾಗಿ ಆಗಮಿಸಿ ದ ಶ್ರೀಮತಿ ಗೀತಾ ಹಿರೇಮಠ, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ, ತಾಯಿ–ಮಗು ಆರೋಗ್ಯ, ನವಜಾತ ಶಿಶು ಆ ರೋಗ್ಯ, ಲಸಿಕಾ ಕಾರ್ಯಕ್ರಮ, ಕುಷ್ಠ ರೋಗ ನಿರ್ಮೂಲನೆ, ಇಂದ್ರಧನುಷ್, ಬಾಯಿ ಆರೋಗ್ಯ ಸೇರಿದಂತೆ ಅನೇಕ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗ ಳ ಬಗ್ಗೆ ಪ್ರಬೋಧನಾತ್ಮಕ ಉಪನ್ಯಾ ಸ ನೀಡಿ ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸಿದರು,

ಕಾರ್ಯಕ್ರಮದಲ್ಲಿ ಶ್ರೀ ಲಾಜರ್ ಸಿರಿ ಲ್ ಜಿ, ನರ್ಸಿಂಗ್ ಪ್ರಾಚಾರ್ಯರು, ಆರೋಗ್ಯ–ಸರ್ಕಾರಿ ಯೋಜನೆಗಳಾ ದ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ, ಅನೀಮಿಯಾ ಮುಕ್ತ ಭಾ ರತ, ಆರ್.ಬಿ.ಎಸ್.ಕೆ, ಜೆ.ಎಸ್.ಎಸ್ ವೈ, ಪಿ.ಎಂ.ಎಂ.ಎಸ್.ವೈ, ಕಾಯಕಲ್ಪ ಲಕ್ಷ್ಯ ಹಾಗೂ ಸಾಂಕ್ರಾಮಿಕ–ಅಸಾಂ ಕ್ರಾಮಿಕ ರೋಗ ತಡೆ ಕಾರ್ಯಕ್ರಮ ಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.ಕಾರ್ಯಕ್ರಮದ ಕುರಿತು ತಯಾರಿಸಲಾದ ಆರೋಗ್ಯ ಜಾಗೃತಿ ಫಲಕ ಮತ್ತು ರಂಗೋಲಿಗಳ ನ್ನು ಪ್ರಧಾನ ನ್ಯಾಯಾಧೀಶರು, ಕಾರ್ಯಕ್ರಮದ ಅಧ್ಯಕ್ಷರಾದ ಭೀಮ ನಗೌ ಡರು ಹಾಗೂ ಎಲ್ಲಾ ಗಣ್ಯರು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ದರು.
ಕಾರ್ಯಕ್ರಮದಲ್ಲಿ ಸನ್ಮಾನ್ಯ ನ್ಯಾಯಾ ಧೀಶರು ಶ್ರೀಮತಿ ರೂಪ, ಕೆ. ಭೀಮನ ಗೌಡ,ಅಧ್ಯಕ್ಷ, ತಾಲೂಕು ನ್ಯಾಯವಾ ದಿ ಗಳ ಸಂಘ,ಹಿರಿಯ ವಕೀಲರು ಖಾ ಜಿ ಮಲಿಕ್ ,ಸಹಾಯಕ ಸರಕಾರಿ ಅಭಿ ಯೋಜಕರು, ವಿಜಯಚಂದ್ರ ಪ್ರಭು ಬಿ, ಖಜಾಂಚಿ ಶ್ರೀ ಶೇಖರಪ್ಪ ಗಡೆದ್ ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಗೀತಾ ಹಿರೇ ಮಠ, ಸನ್‌ರೈಸ್ ಗ್ರೂಪ್ ಆಫ್ಇನ್ಸ್ಟಿ ಟ್ಯೂಶನ್ ಕಾರ್ಯದರ್ಶಿ ಇರ್ಷಾದ್ ಕೆ. ಅತ್ತಾರ್,ಆಡಳಿತ ಮಂಡಳಿ ಸದ ಸ್ಯ ಆಸಿಫ್,ಪ್ರಾಚಾರ್ಯರಾದ ಚಕ್ರ ವರ್ತಿ, ವಾಸಿಂ ಹುಸೇನ್,ನರ್ಸಿಂಗ್ ಪ್ರಾಚಾರ್ಯ ಲಾಜರ್ ಸಿರಿಲ್ ಉಪ ನ್ಯಾಸಕರಾದ ಆಶು ಪಾಷ, ರಾಜೇಶ್, ವೀರೇಶ್, ಕುಮಾರಿ ಶೋಭಾ, ಕುಮಾ ರಿ ವೀರೇಶ್ವರಿ, ಶ್ರೀಮತಿ ರಾಧಿಕಾ, ಕು ಮಾರಿ ಚೈತ್ರ,ಎಲ್ಲಾ ವಿಭಾಗದ ವಿದ್ಯಾ ರ್ಥಿಗಳು ಭಾಗವಹಿಸಿ ಕಾರ್ಯ ಕ್ರಮ ವನ್ನು ಯಶಸ್ವಿಗೊಳಿಸಿದರು.

1
58 views