logo

ಕಲಬುರಗಿ ನಗರದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ , ಕೂಡಲೇ ಸರಿಪಡಿಸಲು ಕ್ರಮಕ್ಕೆ ಜನ ಆಗ್ರಹ

ಕಲಬುರಗಿ ನಗರದ ಪ್ರಮುಖ ರಸ್ತೆಗಳಾದ ಸೂಪರ್ ಮಾರ್ಕೆಟ್, ಹುಮ್ನಾಬಾದ್ ರಸ್ತೆಯ ಟಿವಿ ಸ್ಟೇಷನ್ ವರ್ತುಲ, ಮಹಬೂಬ್ ನಗರ್ ಹಾಗರಗಾ ರಸ್ತೆ , ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್ ವರ್ತುಲ ರಸ್ತೆ , ಜೇವರ್ಗಿ ರಸ್ತೆಯ ರಾಮ ಮಂದಿರ ವರ್ತುಲ ರಸ್ತೆ , ಹೀಗೆ ಬಹುತೇಕ ರಸ್ತೆಗಳಲ್ಲಿ ವಾಹನ ಚಾಲಕರು ಸಂಚಾರ ನಿಯಮ ಪಾಲಿಸದೆ ಬೇಗ ಹೋಗುವ ಅವಸರದಲ್ಲಿ ಸಿಗ್ನಲ್ ಜಂಪ್ ಮಾಡುತ್ತಾರೆ. ಗ್ರೀನ್ ದೀಪದ ಸಿಗ್ನಲ್ ಬಿದ್ದಾಗ, ವಾಹನಗಳು ಚಲಿಸುತ್ತಿರುವಾಗ ಮಧ್ಯದಲ್ಲಿ ಪಾದಚಾರಿಗಳು ನುಸುಳಿ ಸಂಚಾರಕ್ಕೆ ಅಡೆತಡೆ ತನ್ದೊಡ್ಡುತ್ತಾರೆ ಎಂದು ಮೆಹಬೂಬ್ ನಗರ್ ಬಡಾವಣೆಯ ನಿವಾಸಿ ಶೇರ್ ಅಬ್ದುಲ್ ಮನ್ನಾ ನ್ ಮತ್ತಿತರರು ಸಂಚಾರಿ ನಿಯಮದ ಅವಸ್ಥೆಯ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಇದು ಕೇವಲ ಸಂಚಾರಿ ಪೊಲೀಸರ ಕೆಲಸ ಅಷ್ಟೇ ಅಲ್ಲ ಸಾರ್ವಜನಿಕರು ಸಹ ಇದಕ್ಕೆ ಸಹಕರಿಸಬೇಕು. ಜನಸಂದಣಿ ಸ್ಥಳಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಇತರ ಓಡಾಡುವ ವಾಹನಗಳಿಗೆ ತೊಂದರೆ ಮಾಡುತ್ತಾರೆ. ವಾಹನ ನಡೆಸುವಾಗ ಮೊಬೈಲ್ ಬಳಸಬಾರದೆಂದು ನಿಯಮ ಇದೆ, ಇದನ್ನು ಗಾಳಿಗೆ ತೂರಿದ್ದಾರೆ. ಸವಾರರು ಪುನಃ ಪುನಃ ನಿಯಮ ಮುರಿಯುವ ಯಾರೇ ಆಗಿರಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸುವುದು ಅತ್ಯಗತ್ಯ. ಮಾತು ಮುಂದು ವರಿಸಿದ ಅಬ್ದುಲ್ ಮನ್ನಾ ನ್ ನಗರದಲ್ಲಿ ಸಾಕಷ್ಟು ಎಂಜಿಓ ಗಳಿವೆ. ಪೊಲೀಸ್ ಇಲಾಖೆ ಅವರ ಸಹಯೋಗದಲ್ಲಿ ಸಂಚಾರಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಂಡು ಪ್ರತಿಯೊಂದು ವೃತ್ತದಲ್ಲಿಯೂ ಜನರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ಹಂತ ಹಂತವಾಗಿ ಜನರಲ್ಲಿ ಸಂಚಾರಿ ನಿಯಮದ ಅರಿವು ಮೂಡಿಸಲು ಸಾಧ್ಯ ಆದ ಕಾರಣ ನಮ್ಮ ಕಲಬುರಗಿಯ ಜನಪ್ರಿಯ ಪೊಲೀಸ್ ಆಯುಕ್ತರಾದ ಶ್ರೀ ಶರಣಪ್ಪ ಎಸ್ ಡಿ ಯವರು ಈ ವಿಷಯದತ್ತ ಗಮನಹರಿಸಿ ಜನರ ಹಿತದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಶೇಕ್ ಅಬ್ದುಲ್ ಮನ್ನಾ ನ್ ಹಾಗೂ ಇತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

13
536 views