logo

ಇಂಡಿ: ನಿಜಶರಣ ಹೂಗಾರ ಮಾದಯ್ಯ ೧೨ನೇ ಶತಮಾನದ ಬಸವಣ್ಣನವರ ಕಾಲದ ಶರಣರಾಗಿದ್ದು, ಹೂ ಕಟ್ಟುವ 'ಹೂಗಾರ' ಕಾಯಕವನ್ನು ಮೂರ್ತಿ ಪ್ರತಿಷ್ಠಾಪನ

ಇಂಡಿ: ನಿಜಶರಣ ಹೂಗಾರ ಮಾದಯ್ಯ
೧೨ನೇ ಶತಮಾನದ ಬಸವಣ್ಣನವರ ಕಾಲದ ಶರಣರಾಗಿದ್ದು, ಹೂ ಕಟ್ಟುವ 'ಹೂಗಾರ' ಕಾಯಕವನ್ನು ನಿರ್ವಹಿಸುತ್ತಿದ್ದ ಕಾಯಕಯೋಗಿ. ಇವರು ನಿಷ್ಠೆಯಿಂದ ಕಾಯಕ ಮಾಡಿ, ವಚನಗಳನ್ನು ಪಠಿಸುತ್ತಾ, ಹೂಮಾಲೆ ಕಟ್ಟಿ ಶರಣರ ಮನೆಗಳಿಗೆ ತಲುಪಿಸುತ್ತಿದ್ದರು. ಇವರ ಪತ್ನಿ ಮಾದೇವಿ ಕೂಡ ಶರಣೆಯಾಗಿ ಕಾಯಕ ನಿಷ್ಠೆಯ ಆದರ್ಶ ಮೆರೆದರು. ಇವರು ಸಕಳೇಶ ಮಾದರಸರನ್ನು ಗುರುವಾಗಿ ಗೌರವಿಸುತ್ತಿದ್ದರು, ಮತ್ತು ಬಸವ ಕಲ್ಯಾಣದಲ್ಲಿಯೇ ಲಿಂಗೈಕ್ಯರಾದರು. ಇಂಡಿ ಜನಪ್ರಿಯ ಶಾಸಕರು ಅಭಿವೃದ್ಧಿ ಹರಿಕಾರ ಯಶವಂತರಾಯಗೌಡ ವಿ ಪಾಟೀಲ್ ಅವರು ಉದ್ದೇಶಿಸಿ ಮಾತನಾಡಿದರು. ಈ ಒಂದು ಸಂದರ್ಭದಲ್ಲಿ ಜಟೆಪ್ಪಾ ರವಳಿ,ಕಾಸುಗೌಡ ಬಿರಾದಾರ್, ಬಿ.ಡಿ. ಪಾಟೀಲ್,ಇಲಿಯಾಸ್ ಬೋರಮಣಿ, ದೇವೇಂದ್ರ ಕುಂಬಾರ್,ಮಹೇಶ್ ಹೂಗಾರ,ಸೋಮು ಹೂಗಾರ,ಗಂಗಾಧರ್ ಹೂಗಾರ, ಸಂಜುದಾದಾ ರಾಠೋಡ್, ಮಹಿಬೂಬ್ ಅರಬ್, ಶ್ರೀಕಾಂತ್ ಕೂಡಿಗನೂರ್,ಬಾಳು ಮುಳಜಿ,ಪ್ರಭುಗೌಡ ಪಾಟೀಲ್, ವಿಜೂಗೌಡ ಪಾಟೀಲ್, ಜಗದೀಶ್ ಕುಂಬಾರ, ಮಂಜು ದೇವರ,ಪ್ರಶಾಂತ್ ಹೂಗಾರ,ಸಿದ್ದು ಹೂಗಾರ, ಮತ್ತು ಇಂಡಿಯ ಹೂಗಾರ ಬಂದು ಮಿತ್ರಗಳು ಇತರರು ಉಪಸ್ಥಿತರಿದ್ದರು.

22
5158 views