ಸಿದ್ದಾರ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೃದ್ಧರಿಗೆ ಉಚಿತ ಬೆಡ್‌ಶೀಟ್ ವಿತರಣೆ
ದೇವನಹಳ್ಳಿ: ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿಯ ಚಂದೇನಹಳ್ಳಿ ಗೇಟ್ ಬಳಿಯ ಸರ್ವೋದಯ ಸರ್ವೀಸ್ ಸೊಸೈಟಿಯಲ್ಲಿ ಸಿದ್ದಾರ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಯೋವೃದ್ಧರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೯ನೇ ಪರಿನಿರ್ವಣಾ ದಿನದ ಪ್ರಯುಕ್ತ ಉಚಿತ ಬೆಡ್‌ಶೀಟ್(ಹೊದಿಕೆ) ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಿವಿಸಿ ಸಮತಾವಾದ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ದಾಸರಬೀದಿ ಮುರಳಿ ಅವರನ್ನು ಅಭಿನಂದಿಸಲಾಯಿತು.
ಈ ವೇಳೆ ಸಿದ್ದಾರ್ಥ ಚಾರಿಟೇಬಲ್ ಟ್ರಸ್ಟ್ ಗೌರವ ಅಧ್ಯಕ್ಷ ಕೆ.ವಿ.ಸ್ವಾಮಿ, ಅಧ್ಯಕ್ಷ ಎ.ತ್ರಿಮೂರ್ತಿ, ಉಪಾಧ್ಯಕ್ಷರಾದ ವೈ.ಎಂ.ಮುನಿಕೃಷ್ಣ, ಜೆ.ಡಿ.ಜಗದೀಶ್, ಖಜಾಂಚಿ ಮುನಿರಾಜು, ಕಾರ್ಯದರ್ಶಿ ಶ್ರೀನಿವಾಸ್‌ಗಾಂಧಿ, ನಿರ್ದೇಶಕರಾದ ನಾರಾಯಣಸ್ವಾಮಿ, ದೇವರಾಜು, ಮುನಿಶಾಮಪ್ಪ, ಗೋವಿಂದರಾಜು, ಕಾರಹಳ್ಳಿ ಕೆಂಪಣ್ಣ, ಲಾವಣ್ಯ, ವೇದ, ರಾಕೇಶ್, ನಾಗೇಶ್, ವೆಂಕಟೇಶಪ್ಪ ಮತ್ತಿತರರು ಇದ್ದರು.
ಚಿತ್ರ: