logo

ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ - ಡಾ. ಮುದ್ದು ಗಂಗಾಧರ್ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷರು

ಬೆಂಗಳೂರಿನ ಪ್ರತಿಷ್ಠಿತ St. Claret College ನಲ್ಲಿ ಅಂತರರಾಷ್ಟ್ರೀಯ ಮಣ್ಣು ದಿನಾಚರಣೆಯನ್ನು ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಅಧ್ಯಕ್ಷರಾದ ಶ್ರೀ ಡಾ. ಬಿ.ಸಿ ಮುದ್ದು ಗಂಗಾಧರ್ ರವರು ಮಾತನಾಡುತ್ತಾ ನಮ್ಮ ಪ್ರಕೃತಿಯಲ್ಲಿರುವ ಮಣ್ಣು ನಮ್ಮ ಮಾತೃಭೂಮಿ ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಪ್ರಕೃತಿ ವಿಕೋಪಗಳಿಗೆ ನಾವೇ ಕಾರಣಕರ್ತರಾಗುತ್ತಿದ್ದೇವೆ ಈ ದೇಶದ ಆಶಾಕಿರಣವಾಗಿರುವಂತಹ ಯುವ ಶಕ್ತಿಯು ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಪ್ರೊಫೆಸರ್ ರಾಜು ಗೌಡ. ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಪ್ರಭಾಕರ್ ಮತ್ತು ಶ್ರೀ. ನಟರಾಜ್ ಗೌಡ, ಶ್ರೀ ಬಿ. ಆರ್ ನಾಯ್ಡು ಮುಂತಾದವರು ಉಪಸ್ಥಿತರಿದ್ದರು

5
990 views