logo

ಅಕ್ರಮ ಅಕ್ಕಿ ಅಧಿಕಾರಿಗಳ ವಶಕ್ಕೆ; ಜಯ ಕರ್ನಾಟಕ ಶ್ಲಾಘನೆ

ಗುರುಮಠಕಲ್ : ಗುರುಮಠಕಲ್ ಪಟ್ಟಣದ ಮಾರ್ಗವಾಗಿ ತೆಲಂಗಾಣ ರಾಜ್ಯಕ್ಕೆ ಸಾಗಿಸುತ್ತಿದ್ದ ಅಕ್ರಮ ಅಕ್ಕಿಯ ಲಾರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡ ಅವರ ಕಾರ್ಯಕ್ಕೆ ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ಶ್ಲಾಘಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಸರಕಾರದ ವಿವಿಧ ಯೋಜನೆಯ ಬಡವರ ಕಲ್ಯಾಣಕ್ಕಾಗಿ ಅನುಕೂಲವಾಗಬೇಕಾಗಿದ್ದ ಅಕ್ಕಿಯನ್ನು ರಾಯಚೂರು ಜಿಲ್ಲೆಯಿಂದ ಗುರುಮಠಕಲ್ ಮಾರ್ಗವಾಗಿ ತೆಲಂಗಾಣದ ವಿಕರಾಬಾದ ಗೆ ಸಾಗಿಸುತ್ತಿದ್ದ ಅನುಮಾಸ್ಪದ ಲಾರಿಯನ್ನು ಕಂಡು ನಮ್ಮ ಸಂಘಟನೆ ಸಂಭಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ಮನವಿ ನೀಡಿದ ಹಿನ್ನಲೆ ಆಹಾರ ನಿರೀಕ್ಷಕರು ಹಾಗೂ ಪೊಲೀಸ್ ಅಧಿಕಾರಿಗಳು ತಕ್ಷಣವೇ ಲಾರಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿ ಈ ಕುರಿತು ಪ್ರಕರಣವನ್ನು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ನಮ್ಮ ಸಂಘಟನೆಯ ಹೋರಾಟದ ಫಲವಾಗಿದೆ ಎಂದು ಅವರು ತಿಳಿಸಿದರು. ಲಾರಿಯಲ್ಲಿ 220 ಕ್ವಿಂಟಲ್ ಅಕ್ಕಿಯನ್ನು ಜಪ್ತಿಮಾಡಿದ್ದಾರೆ, ಸರಕಾರದ ಯೋಜನೆಗಳು ಜನರಿಗೆ ತಲುಪಿಸಲು ಹಾಗೂ ಇನ್ನಷ್ಟು ಅಕ್ರಮ ಅಕ್ಕಿ ಸಾಗಾಟಣೆ ಆಗುವುದನ್ನು ತಡೆಯಲು ನಮ್ಮ ಸಂಘಟನೆ ನಿರಂತರ ಹೋರಾಟ ಮಾಡಲಾಗುವುದೆಂದು ಅವರು ತಿಳಿಸಿದರು. ಇದೇ ವೇಳೆ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಧಾ, ತಾಲೂಕು ಕಾರ್ಯಾಧ್ಯಕ್ಷರಾದ ನರಸಿಂಹಲು ಗಂಗನೋಳ, ಕಾಶಪ್ಪ ದೊರೆ, ಎಸ್. ಪಿ ಮಹೇಶಗೌಡ, ರಾಮುಲು ಕೋಡಿಗಂಟಿ, ಉದಯಕುಮಾರ, ನಿಖಿಲ್, ನಾಗೇಶ್ ಮಡೆಪಲ್ಲಿ, ಅಯಾಝ್ ಅಲಿ, ನರೇಶ್ ಸೇರಿದಂತೆ ಇತರರು ಇದ್ದರು.​

17
1472 views