ಆಳಂದ ಸಕ್ಕರೆ ಕಾರ್ಖಾನೆ ಚುನಾವಣೆ ಮತಗಳ್ಳತನ ಆರೋಪ ಪ್ರತಿಭಟನೆ
ಆಳಂದ್ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರ ಚುನಾವಣೆಯಲ್ಲಿ ಮತಪತ್ರ ಬೇರೆ ನೀಡಿ ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿಸಿದ್ದಕ್ಕೆ ಬಿಜೆಪಿ ಮುಖಂಡ ಹರ್ಷಾನಂದ್ ಗುತ್ತೇದಾರ್ ಅಪಾರ ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಸೋಲಿನ ಭಯದಿಂದ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಮತ ಪತ್ರಗಳನ್ನು ಬದಲಾಯಿಸಿದ್ದಾರೆಂದು ಗುತ್ತೇದಾರ್ ಆರೋಪಿಸಿದ್ದಾರೆ.