
*ನಾಳೆ ಇಳಕಲ್ ಬಜಾರ್ ಬಸವೇಶ್ವರನ ಅದ್ದೂರಿ ರಥೋತ್ಸವ*
*ನಾಳೆ ಇಳಕಲ್ ಬಜಾರ್ ಬಸವೇಶ್ವರನ ಅದ್ದೂರಿ ರಥೋತ್ಸವ*
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಬಜಾರ್ ಬಸವೇಶ್ವರನ ಜಾತ್ರಾ ಮಹೋತ್ಸವ ಇದೆ ದಿನಾಂಕ 4/12/25 ರಂದು ಜರುಗಲಿದೆ ಬೆಳಗ್ಗೆ ಬಸವೇಶ್ವರನ ಮೂರ್ತಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಮಹಾಭಿಷೇಕ ನೆರವೇರಲಿದೆ, ಈ ಅಭಿಷೇಕವು ವೇದಮೂರ್ತಿ ಶ್ರೀ ವಿಜಯಕುಮಾರ್ ಹಿರೇಮಠ ಶಾಸ್ತ್ರಿಗಳವರಿಂದ ಮತ್ತು ದೇವಸ್ಥಾನದ ಅರ್ಚಕರಾದ ಶ್ರೀ ವಿರೂಪಾಕ್ಷಯ್ಯ ಗೋನಾಳಮಠವರಿಂದ ನೆರವೇರಲಿದೆ, ನಂತರ ಧ್ವಜಾರೋಹಣ ಪಲ್ಲಕ್ಕಿ ಉತ್ಸವ ಮತ್ತು ಒಂಬತ್ತು ಗಂಟೆಗೆ ಹುಚ್ಚಯ್ಯ ರಥೋತ್ಸವ ಜರುಗಲಿದೆ, ನಂತರ ಮಧ್ಯಾಹ್ನ ಶ್ರೀ ಬಜಾರ್ ಬಸ್ವೇಶ್ವರನ ಅನ್ನಪ್ರಸಾದ ಇದ್ದು ಭಕ್ತಾದಿಗಳು ಪ್ರಸಾದ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ ಬಸವೇಶ್ವರ ದರ್ಶನ ಪಡೆದು ಕೃಪೆಗೆ ಪಾತ್ರರಾಗಬೇಕೆಂದು ಬಸವೇಶ್ವರನ ಆಡಳಿತ ಮಂಡಳಿಯ ವಿನಂತಿ ಇದೆ, ನಂತರ ಸಾಯಂಕಾಲ 5 ಗಂಟೆಗೆ ಸಿಡಿಗುಂಡು ಮದ್ದುಗಳ ನಡುವೆ ವಾದ್ಯ ಮೇಳಗಳ ನಡುವೆ ಶ್ರೀ ಬಜಾರ್ ಬಸವೇಶ್ವರನ ರಥೋತ್ಸವವು ಅದ್ದೂರಿಯಾಗಿ ಜರುಗಲಿದೆ ಆದಕಾರಣ ಭಕ್ತಾದಿಗಳು ಶ್ರೀ ಬಜಾರ್ ಬಸವೇಶ್ವರನ ಜಾತ್ರಾ ಮಹೋತ್ಸವಕ್ಕೆ ನಗರದ ಜನತೆ ಮತ್ತು ಸುತ್ತಮುತ್ತಲ ಗ್ರಾಮದ ಜನತೆ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಬಸವೇಶ್ವರ ದರ್ಶನ ಪಡೆದು ಪುನೀತರಾಗಬೇಕೆಂದು ಶ್ರೀ ಬಸವೇಶ್ವರನ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಪರತ ಗೌಡ ತೋಟಪ್ಪ ಗೌಡ ಪಟ್ಟಣಶೆಟ್ಟಿಯವರು, ಹಾಗೂ ಶ್ರೀ ಬಜಾರ್ ಬಸವೇಶ್ವರ ಮಂಡಳಿಯ ಸರ್ವ ಸದಸ್ಯರು ಮತ್ತು ಪಟ್ಟಣಶೆಟ್ಟಿಯ ಬಂಧುಗಳು ವಿನಂತಿಸಿದ್ದಾರೆ,