ಮಾದರಿ ಪ್ರೌಢಶಾಲೆ ಹುನಗುಂದ.
ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಹುನಗುಂದ
ಮಾದರಿ ಪ್ರೌಢಶಾಲೆ ಹುನಗುಂದ
ದಿನಾಂಕ 17/11/2025 ರಂದು ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ವೈಯಕ್ತಿಕ ಕ್ರೀಡಾಕೂಟದಲ್ಲಿ ನಮ್ಮ ಮಾದರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ
ಕುಮಾರ್ ಆದರ್ಶ್ ಮುಂಡೇವಾಡಿ ಸರಪಳಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ ಹಾಗೂ ಮಹಮ್ಮದ್ ತೋಷಿಪ್ ಹೊರಗಿನ ಮನಿ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ
ದಿನಾಂಕ 2 ನವಂಬರ್ ದಿಂದ 9 ನವಂಬರ್ ವರೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ 4 ಮಿನಿ ಒಲಂಪಿಕ್
ಕ್ರೀಡಾಕೂಟದಲ್ಲಿ ನಮ್ಮ ಪ್ರೌಢಶಾಲೆಯ ಕುಮಾರ್ ಮಹಮ್ಮದ್ ಫರಾನ್ ಪೀರಜಾದೆ ಹಾಗೂ ಶಿವರಾಜ್ ಜಗ್ಗಲ್ ಈ ವಿದ್ಯಾರ್ಥಿಗಳು ಕಬಡ್ಡಿ ಸ್ಪರ್ಧೆಯಲ್ಲಿ
ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ
ಈ ಮೇಲಿನ ನಾಲ್ಕು ವಿದ್ಯಾರ್ಥಿಗಳಿಗೆ ವಿ ಮ ವಿ ವ ಸಂಘದ ಕಾರ್ಯಧ್ಯಕ್ಷರಾದ ಡಾಕ್ಟರ್ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಡಾ. ಮಹಾಂತೇಶ್ ಕಡಪಟ್ಟಿ ಹಾಗೂ ಆಡಳಿತ ಮಂಡಳಿ ಸದಸ್ಯರು ಶಾಲಾ ಆಡಳಿತ ಅಧಿಕಾರಿಗಳು ಮುಖ್ಯ ಗುರುಗಳು ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ವಿ.ಸಾಲಿಮಠ ಗುರುಗಳು ಶಿಕ್ಷಕ ಸಿಬ್ಬಂದಿ ಹಾಗೂ ಶಿಕ್ಷೇತರ ಸಿಬ್ಬಂದಿ ಸಾಧನೆ ತೋರಿದ ಈ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ
ವರದಿ ದಾವಲ್ ಶೇಡಂ