logo

ಅಮೀನಗಡ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನ ದಡಿ ಈ ದಿನಾಚರಣೆ ನಿಮಿತ್ತವಾಗಿ ರಾಜ್ಯ ಪ್ರಶಸ್ತಿಯನ್ನು ಈ ಎಲ್ಲಾ ಸಾಧಕರಿಗೆ ನೀಡಲಾಯಿತು

ಅಮೀನಗಡ

ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನ ದಡಿ ಈ ದಿನಾಚರಣೆ ನಿಮಿತ್ತವಾಗಿ ರಾಜ್ಯ ಪ್ರಶಸ್ತಿಯನ್ನು ಈ ಎಲ್ಲಾ ಸಾಧಕರಿಗೆ ನೀಡಲಾಯಿತು

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಇಂಡಿಯನ್ ಜರ್ನಲಿಸ್ಟ್ ಯುನಿಯನ್ ದೆಹಲಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಬೆಳಗಟವಿ, ಬೆಂಗಳೂರ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಬಿ.ಬಿ ನ್ಯೂಸ್ ಡಿಜಿಟಲ್ ಚಾನಲ್ ಸಹಯೋಗದಲ್ಲಿ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನ ದಡಿ ಈ ದಿನಾಚರಣೆ ನಿಮಿತ್ತವಾಗಿ ರಾಜ್ಯ ಪ್ರಶಸ್ತಿಯನ್ನು ಈ ಎಲ್ಲಾ ಸಾಧಕರಿಗೆ ನೀಡಲಾಯಿತು. ಮೊದಲನೆಯದಾಗಿ ಶ್ರೀಮತಿ ಸವಿತಾ ಅಶೋಕ ಛಲವಾದಿ ಸಮಾಜ ಸೇವಕರು ಇಳಕಲ್ಲ ಇವರಿಗೆ ಸಮಾಜ ಸೇವಾ ರತ್ನ ಹಾಗೂ ಶ್ರೀಮತಿ ಡಾ, ರಶ್ಮಿ ಬಸಯ್ಯ ಹಿರೇಮಠ. ವೈದ್ಯರು ಅಕ್ಕಿ ಆಸ್ಪತ್ರೆ ಇಳಕಲ್ಲ ಇವರಿಗೆ ವೈದ್ಯ ರತ್ನ ಹಾಗೂ
ಶ್ರೀ ಅರವಿಂದ ಚೌಡಪ್ಪ ಭಜಂತ್ರಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುನಗುಂದ ಅತ್ಯುತ್ತಮ ಕರ್ತವ್ಯ ಪಾಲನೆ, ಶ್ರೀ ಉಮಾಪತಿ ಮರಿಬಸಯ್ಯ ಹಂಪಿಹೊಳೆ ನಿವೃತ್ತ ಉಪನ್ಯಾಸಕರು ಇವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ , ಅಧ್ಯಕ್ಷರು/ಕಾರ್ಯದರ್ಶಿಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದ್ದಲಗಿ ಈ ಸಂಘಕ್ಕೆ ಅತ್ಯುತ್ತಮ ಕರ್ತವ್ಯ ಪಾಲನೆ ಶ್ರೀ ಶಿವಪ್ಪ ಹನಮಂತಪ್ಪ ರೂಡಗಿ ಸಾರಿಗೆ ನಿಯಂತ್ರಕರು ಅಮೀನಗಡ ಇವರಿಗೆ ಅತ್ಯುತ್ತಮ ಕರ್ತವ್ಯ ನಿರ್ವಹಣೆ, ಶ್ರೀ ಅಂದಾನಿಗೌಡ ಸಂಗನಗೌಡ ಸಿಂಗನಗುತ್ತಿ ಉಪನ್ಯಾಸಕರು ಇವರಿಗೆ ಶಿಕ್ಷಣ ಸೇವಾ ರತ್ನ ಡಾ, ರಾಜೇಂದ್ರ ಕೃಷ್ಣಪ್ಪ ಕಿಲಬನೂರ ವೈದ್ಯಾಧಿಕಾರಿಗಳು ಸೂರಿಬಾಣ ಇವರಿಗೆ ವೈದ್ಯ ರತ್ನ ಶ್ರೀ ಸಂಗಪ್ಪ ಬಸಪ್ಪ ಅಂಗಡಿ ಶಿಕ್ಷಕರು ಅಮೀನಗಡ ಸಾ, ಹುಲಗಿನಾಳ ಇವರಿಗೆ ಶಿಕ್ಷಣ ಸೇವಾ ರತ್ನ ಶ್ರೀ ಶೇಖರಯ್ಯ ಮೇಟಿಮಠ ಮುಖ್ಯ ಕಾರ್ಯ ನಿರ್ವಾಹಕರು ಪಿ.ಕೆ.ಪಿ.ಎಸ್ ಕೆಲೂರ ಇವರಿಗೆ ಅತ್ಯುತ್ತಮ ಕರ್ತವ್ಯ ನಿರ್ವಹಣೆ ಶ್ರೀ ಸಂಗನಗೌಡ ಸಿದ್ದನಗೌಡ ಗೌಡರ ಸಾರಿಗೆ ನಿಯಂತ್ರಕರು ಅಮೀನಗಡ ಇವರಿಗೆ ಅತ್ಯುತ್ತಮ ಕರ್ತವ್ಯ ಪಾಲನೆ ಶ್ರೀ ಅಶೋಕ ಶಿರಿಯಾನ ಹೋಟೆಲ್ ಉದ್ದೆಮಿದಾರರು ಅಮೀನಗಡ ಇವರಿಗೆ "ದಿ ಬೇಸ್ಟ್ ಮ್ಯಾನೇಜಮೆಂಟ್" ರಾಜ್ಯ ಪ್ರಶಸ್ತಿ,
ಶ್ರೀ ಪಾಂಡುರಂಗ ಹೋಟಿ ಮುಖ್ಯ ಕಾರ್ಯ ನಿರ್ವಾಹಕರು ಕಮತಗಿ ಇವರಿಗೆ ಅತ್ಯುತ್ತಮ ಕರ್ತವ್ಯ ಪಾಲನೆ
ಶ್ರೀಮತಿ ಸವಿತಾ ಬಾಲಚಂದ್ರ ವಂದಾಲ ಪ್ರಾಚಾರ್ಯರು ಇಳಕಲ್ಲ ಇವರಿಗೆ ಶಿಕ್ಷಣ ಸೇವಾ ರತ್ನ ಶ್ರೀಮತಿ ನೇಹಾ ಲಾಹೋಟಿ ಸಂಸ್ಥಾಪಕ ಕಾರ್ಯಾಧ್ಯಕ್ಷರು ಹುನಗುಂದ ಇವರಿಗೆ ಶಿಕ್ಷಣ ಸೇವಾ ರತ್ನ ಶ್ರೀ ಉಸ್ತಾದ್‌ಖಾನ್ ಇಲಾಳ ಅಧ್ಯಕ್ಷರು ಮಹಾತ್ಮ ಗಾಂಧಿ ಕ್ರೀಡೆ ಮತ್ತು ಸಂಸ್ಕೃತಿಕ ಸೇವಾ ಸಂಸ್ಥೆ ಇಳಕಲ್ಲ ಇವರಿಗೆ ಸಮಾಜ ಸೇವಾ ರತ್ನ
ಶ್ರೀ ರಾಘವೇಂದ್ರ ಬಸವರಾಜ್ ಹಡಪದ ಅಧ್ಯಕ್ಷರು ಹಡಪದ ಸಮಾಜ ಇವರಿಗೆ ಅಮೀನಗಡ ಸಮಾಜ ಸೇವಾ ರತ್ನ, ಈ ರೀತಿಯಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದ ಸಾಧಕರಿಗೆ ರಾಜ್ಯ ಅಧ್ಯಕ್ಷರು ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಎಸ್.ಜಿ ನಂಜಯ್ಯನಮಠ ಹಾಗೂ ರಾಜ್ಯ ಸಮಿತಿ ಸದಸ್ಯೆ ರಾಜೇಂದ್ರ ದೇಶಪಾಂಡೆ, ಕಲ್ಯಾಣ ಕರ್ನಾಟಕದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮುಂಡಲಿಕ ಮುರಾಳ, ರಾಜ್ಯ ಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಶಂಕರ್ ಕುದರಿಮೊತಿ ,ಜಿಲ್ಲಾ ಕೆ,ಪಿ,ಸಿ,ಸಿ ಎಸ್ ಸಿ ಮೊರ್ಚಾ ಅಧ್ಯಕ್ಷ ರಾಜು ಮಣ್ಣಿಕೇರಿ, ಜಿಲ್ಲಾ ಕೆ,ಪಿ.ಎಸ್ ಅಧ್ಯಕ್ಷ ಡಿ.ಬಿ ವಿಜಯಶಂಕರ್, ಜಿಲ್ಲಾ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಪ್ರಭುದೇವ ರುದ್ರಾಕ್ಷಿ ಹಾಗೂ ಕಾರ್ಯದರ್ಶಿ ಕಿರಣರಾಜ್ ಕಾಳಗಿ, ಆಪ್ತ ಸಹಾಯಕ ಭೀಮಸಿಂಗ್ ರಾಠೋಡ ಹುಲ್ಲಪ್ಪ ಹುಲಗೇರಿ, ಬಸವರಾಜ್ ಕಾಳಗಿ, ಮುಂತಾದವರು ಉಪಸ್ಥಿತರಿದ್ದರು.

ವರದಿ ದಾವಲ್ ಶೇಡಂ

7
247 views