logo

ಅಮ್ ಆದ್ಮಿ ಪಕ್ಷಕ್ಕೆ 13 ವರ್ಷಗಳು ತುಂಬಿದ ಸಂತಸ

ಸ್ವತಂತ್ರ ಭಾರತ ದೇಶದ ಡಾ. ಬಾಬಾ ಸಾಹೇಬರ ಅಧ್ಯಕ್ಷತೆಯಲ್ಲಿ ರಚಿತವಾದ ಮತ್ತು ಅಂಗೀಕಾರವಾದ ಸಂವಿಧಾನ ಹಾಗೂ ಸಂವಿಧಾನಕ್ಕೆ ನಾವೆಲ್ಲರೂ ನಮಸ್ಕರಿಸುತ್ತಾ ಸಂವಿಧಾನದ ಪೀಠಿಕೆಯನ್ನು ಅಳವಡಿಸಿಕೊಂಡು ಈ ದಿನ ಆಮ್ ಆದ್ಮಿ ಪಕ್ಷವು ಸ್ಥಾಪನೆಯಾಗಿ 13 ವರ್ಷಗಳನ್ನು ಪೂರೈಸಿರುವುದು ಸಂತಸದ ವಿಷಯ 2012 ನವಂಬರ್ 26ರಂದು ಸ್ಥಾಪನೆಯಾದ ಆಮ್ ಆದ್ಮಿ ಪಕ್ಷವು ಉತ್ತಮ ಸಾಧನೆಯನ್ನು ಮಾಡಿ ಈ ದಿನ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 10 ರಾಜ್ಯ ಸಭಾ ಸದಸ್ಯರು ಮೂರು ಲೋಕಸಭಾ ಸದಸ್ಯರು 131 ವಿಧಾನಸಭಾ ಸದಸ್ಯರ ನಡುಗೊಂಡು ಪಂಜಾಬ್ ರಾಜ್ಯದಲ್ಲಿ ಹಾಗೂ ಚಂಡಿಗಡದಲ್ಲಿ ಅಧಿಕಾರವನ್ನು ನಡೆಸುತ್ತಿದ್ದು ದಿಲ್ಲಿಯಲ್ಲಿ ಅಧಿಕಾರವನ್ನು ಕಳೆದುಕೊಂಡು ಜಮ್ಮು ಕಾಶ್ಮೀರ ಗುಜರಾತ್ ಗೋವಾ ರಾಜ್ಯಗಳಲ್ಲಿ ವಿಧಾನಸಭಾ ಸದಸ್ಯರನ್ನು ಒಳಗೊಂಡು ದೇಶಾದ್ಯಂತ ತನ್ನ ಚಾಪನ್ನು ಇಂದಿನ ಭ್ರಷ್ಟಾಚಾರ ಸೃಜನ ಪಕ್ಷಪಾತ ಕುಟುಂಬ ರಾಜಕಾರಣ ಗಳಿಗೆಪರ್ಯಾಯ ಎಂಬಂತೆ ಜನಸಾಮಾನ್ಯರು ಜನಸಾಮಾನ್ಯರಿಗೋಸ್ಕರ ಜನಸಾಮಾನ್ಯರೇ ಈ ಪಕ್ಷದ ಮುಖಾಂತರ ಸ್ಪರ್ಧಿಸಿ ಆಡಳಿತವನ್ನು ಸಾಮಾನ್ಯರಿಗೆ ನೀಡುವ ಭರವಸೆಯೊಂದಿಗೆ ಮುನ್ನುಗ್ಗುತ್ತಿರುವ ಪಕ್ಷ ಆಮ್ ಆದ್ಮಿ ಪಕ್ಷ ಎಂದರೆ ತಪ್ಪಾಗಲಾರದು ಈ ಸಂದರ್ಭದಲ್ಲಿ ರಾಜ್ಯದ ಮತ್ತು ದೇಶದ ಯುವಕರು ಪ್ರಸ್ತುತ ರಾಜಕಾರಣದ ಸ್ಥಿತಿಗತಿಗಳನ್ನು ಅರಿತು ಬಡವರು ಸಾಮಾನ್ಯರು ಅಧಿಕಾರವನ್ನು ಪಡೆಯಲು ಸಾಧ್ಯವಾಗದೇ ಇರುವ ಸಂದರ್ಭ ಇದಾಗಿದ್ದು ಇದನ್ನು ಅರಿತು ಮುಂದಿನ ದಿನಗಳಲ್ಲಿ ಯುವಕರು ಈ ಪಕ್ಷವನ್ನು ಬೆಂಬಲಿಸಿ ಅಧಿಕಾರವನ್ನು ಪಡೆದುಕೊಂಡು ಸಂವಿಧಾನದ ಆಶಯಗಳಿಗೆ ಹೊತ್ತು ಕೊಡಬೇಕೆಂದು ಕೋರುತ್ತಾ ಈ ದಿನ ಪಕ್ಷ ಚಿಕ್ಕಬಳ್ಳಾಪುರ ಘಟಕದಿಂದ ಸಂಸ್ಥಾಪನ ದಿನಾಚರಣೆಗಳ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಆದ್ಯಂತ ಸಿಹಿ ಲಾಡು ವಿತರಿಸಿ ಸಂಭ್ರಮಾಚರಣೆಯನ್ನು ಮಾಡುತ್ತಿರುವುದು ಹೆಮ್ಮೆಯಾಗಿದೆ ಅಲ್ಲದೆ ಇದೇ ದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಆಮ್ ಆದ್ಮಿ ಪಕ್ಷವನ್ನು ಹಲವಾರು ಯುವಕರು ಸೇರ್ಪಡೆಯಾಗಿರುವುದು ಸಂತಸದ ವಿಚಾರವಾಗಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯುವ ಸಮುದಾಯ ನಮ್ಮ ಪಕ್ಷವನ್ನು ಸೇರಿಕೊಂಡು ಜನಸಾಮಾನ್ಯರು ದೀನದಲಿತರು ಬಡವರು ಅಧಿಕಾರದತ್ತ ಮುನ್ನುಗ್ಗಿ ಪ್ರಜಾಪ್ರಭುತ್ವ ಎತ್ತಿ ಹಿಡಿಯಲು ಪ್ರಯತ್ನಿಸುತ್ತಾರೆ ಎಂಬ ನಂಬಿಕೆಯಿಂದ ಈ ದಿನ ಭರವಸೆಯನ್ನು ಮೂಡಿಸುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಪಾರ್ಥ ಯಾದವ್ ತಿಳಿಸಿದರು

10
784 views