logo

ಕರ್ನಾಟಕ ವೀರಶೈವ ಲಿಂಗಾಯತ ಮಹಾ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ‌‌‍ ‍ಕಂದಕೂರ ಆಯ್ಕೆ

ಬೆಂಗಳೂರು : ಕರ್ನಾಟಕ ವೀರಶೈವ ಲಿಂಗಾಯತ ಮಹಾ ಫೌಂಡೇಶನ್ ಸಹಯೋಗದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ವೀರಶೈವ ಲಿಂಗಾಯತ ಮಹಾ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಡಾ ಸಿದ್ಧಲಿಂಗರೆಡ್ಡಿ ಪಾಟೀಲ್ ಕಂದಕೂರ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವೀರಶೈವ ಲಿಂಗಾಯತ ಧರ್ಮವು ಸಮಾನತೆ, ಶರಣತ್ವ, ಕಾಯಕವೇ ಕೈಲಾಸ ಎಂಬ ತತ್ವ, ಹಾಗೂ ಅಂತರರಹಿತ ಸಮಾಜ ನಿರ್ಮಾಣದ ಮಹೋದ್ದೇಶವನ್ನು ಹೊಂದಿದೆ ಬಸವಣ್ಣನವರ, ಶರಣರ ವಚನಸಾಹಿತ್ಯ ನಮ್ಮ ಧರ್ಮಗ್ರಂಥ ಅದು ಶ್ರಮಜೀವಿಯ ಗೌರವ, ಸತ್ಯ, ಅಹಿಂಸಾ ಮತ್ತು ನೈತಿಕ ಜೀವನದ ಮಾರ್ಗದರ್ಶನ ನೀಡುತ್ತದೆ ಎಂದರು. ನನ್ನ ಮೇಲೆ ವಿಶ್ವಾಸ ಇಟ್ಟು ಈ ಜವಾಬ್ದಾರಿಯನ್ನು ನೀಡಿದ ಪರಿಷತ್ತಿನ ಹಿರಿಯರಿಗೆ, ಎಲ್ಲಾ ಘಟಕಗಳ ಪ್ರತಿನಿಧಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಇದು ಹುದ್ದೆಯ ಗೌರವಕ್ಕಿಂತಲೂ, ಸಮಾಜ ಸೇವೆ ಮಾಡುವ ಪವಿತ್ರ ಅವಕಾಶವೆಂದು ನಾನು ಕಾಣುತ್ತಿದ್ದೇನೆ ಎಂದು ಹೇಳಿದರು.

11
868 views