logo

ಜಾತಿ ಜನಾಂಗದ ಜನಸಂಖ್ಯೆಗೆ ತಕ್ಕ ಪಾಲು ಎಲ್ಲರಿಗೂ ಬೇಕು ಗೌರವದ ಬಾಳು ಬಹುಜನ ಆಂದೋಲನ: ಆಲ್ ಇಂಡಿಯಾ ಬಹುಜನ ಪಾರ್ಟಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್

ಜಾತಿ ಜನಾಂಗದ ಜನಸಂಖ್ಯೆಗೆ ತಕ್ಕ ಪಾಲು ಎಲ್ಲರಿಗೂ ಬೇಕು ಗೌರವದ ಬಾಳು ಬಹುಜನ ಆಂದೋಲನ: ಆಲ್ ಇಂಡಿಯಾ ಬಹುಜನ ಪಾರ್ಟಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ, ಸಂಘಟನೆಗೆ ಹೆಚ್ಚು ಒತ್ತು

ದೇವನಹಳ್ಳಿ: ಕರ್ನಾಟಕ ರಾಜ್ಯದ್ಯಂತ ಜಾತಿ ಜನಾಂಗದ ಜನಸಂಖ್ಯೆಗೆ ತಕ್ಕ ಪಾಲು ಎಲ್ಲರಿಗೂ ಬೇಕು ಗೌರವದ ಬಾಳು, ಬಹುಜನ ಆಂದೋಲನವನ್ನು ಮಾಡಲಾಗುತ್ತಿದೆ ಎಂದು. ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ, ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ದೇವನಹಳ್ಳಿ ತಾಲೂಕು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬ್ರಿಟಿಷರ ಭಾರತದಲ್ಲಿ ಹಿಂದುಳಿದ ಜಾತಿಗಳ, ಎಸ್ಸಿ ಎಸ್ಟಿ ಒಬಿಸಿ ಮುಸ್ಲಿಂ ಕ್ರೈಸ್ತ ಮತ್ತು ಸಿಖ್, ಪೈಕಿ ಮಹಾತ್ಮ ಜ್ಯೋತಿಬಾಪುಲೆ ಮಾತೆ ಸಾವಿತ್ರಿ ಬಾಪುಲೆ ಛತ್ರಪತಿ ಶಾಹು ಮಹಾರಾಜ್, ತಂದೆ ಪೆರಿಯಾರ್, ನಾರಾಯಣ ಗುರು ಬಾಬಾ ಸಾಹೇಬ್ ಅಂಬೇಡ್ಕರ್ ಮುಂತಾದ ನಾಯಕರು ಹುಟ್ಟಿದ್ದು ಈಗ ಇತಿಹಾಸವಾಗಿದೆ. ಇದೇ ರೀತಿ ಆ ದಿನಗಳಲ್ಲಿ ಹಿಂದುಳಿದ ವರ್ಗಗಳು ಉನ್ನತ ಶಿಕ್ಷಣ ಉದ್ಯೋಗ ಉದ್ಯಮ ಮತ್ತು ರಾಜಕೀಯದಲ್ಲಿ ಅವಕಾಶಗಳನ್ನು ಪಡೆದಿದ್ದು ನಮಗೆ ಗೊತ್ತಿದೆ. ಆದರೆ ಸ್ವತಂತ್ರ ಭಾರತದಲ್ಲಿ ಕಾನ್ಸಿರಾಮ್ ಅವರನ್ನು ಬಿಟ್ಟರೆ ಆ ಮಹಾ ನಾಯಕರುಗಳಿಗೆ ಸಮಾನನಾದ ಒಬ್ಬ ನಾಯಕರು ನಮಗೆ ಕಂಡಿಲ್ಲ. ಬ್ರಿಟಿಷ್ ಸರ್ಕಾರವು 10 ವರ್ಷಕ್ಕೊಮ್ಮೆ ನಡೆಸುತ್ತಿದ್ದ ಜಾತಿಗಣತಿಯನ್ನು ಸ್ವತಂತ್ರ ಭಾರತದ ಸರ್ಕಾರಗಳು ಕೈ ಬಿಟ್ಟಿರುವುದೇ ಇದಕ್ಕೆ ಮೂಲ ಕಾರಣವಾಗಿದೆ. ಜಾತಿ ಗಣತಿಯ ಮೂಲಕ ಹಿಂದುಳಿದ ಜಾತಿಗಳ ನಿಖರವಾದ ಜನಸಂಖ್ಯೆಯನ್ನು ತಿಳಿದುಕೊಳ್ಳುತ್ತಿದ್ದ ಬ್ರಿಟಿಷ್ ಸರ್ಕಾರವು ಅವರ ಅಭಿವೃದ್ಧಿಗಾಗಿ ಪರಿಣಾಮಕಾರಿಯಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದರು. ಆದರೆ ಸ್ವತಂತ್ರ ಭಾರತದಲ್ಲಿ ಜಾತಿಗಣತಿಯನ್ನು ಕೈ ಬಿಟ್ಟು ಧರ್ಮಧಾರಿತ ಜನಗಣತಿಯನ್ನು ಪ್ರಾರಂಭಿಸಲಾಗಿದೆ. ಬ್ರಿಟಿಷ್ ಭಾರತದಲ್ಲಿ ನಡೆದ 1931ರ ಜನ ಗಣತಿ ಅಂತಿಮ ಜಾತಿ ಜನ ಗಣತಿ ಯಾಗಿದೆ. ಎಂದು ಹೇಳಿದರು.

ಭಾರತದ ಮಟ್ಟಿಗೆ ಬ್ರಾಹ್ಮಣ ಕ್ಷತ್ರಿಯ ವೈಶ್ಯರು ನಡೆಸುತ್ತಿರುವ ದಗಲ್ಬಾಜಿತನದ ರಾಜಕಾರಣವನ್ನೇ ಕರ್ನಾಟಕದಲ್ಲಿ ಒಕ್ಕಲಿಗ ಲಿಂಗಾಯಿತ ಬ್ರಾಹ್ಮಣರು ಮಾಡುತ್ತಿದ್ದಾರೆ. 1921 ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಜಾರಿ ಮಾಡಿದ ಶೇಕಡ 75ರಷ್ಟು ಮೀಸಲಾತಿಯಲ್ಲಿ ಅತಿಹೆಚ್ಚಿನ ಲಾಭವನ್ನು ಕಬಳಿಸಿದ ಒಕ್ಕಲಿಗ ಮತ್ತು ಲಿಂಗಾಯಿತರೇ ಇಂದು ನಮ್ಮ ರಾಜ್ಯದಲ್ಲಿ ನೇಮಕಗೊಂಡ ಹಿಂದುಳಿದ ವರ್ಗಗಳ ಆಯೋಗಗಳ ಎಲ್ಲಾ ವರದಿಗಳನ್ನು ವಿರೋಧಿಸುತ್ತಾ ಬಂದಿದ್ದಾರೆ. 2025ರಲ್ಲಿ ಮಂಡಿಸಲ್ಪಟ್ಟ ಕಾಂತರಾಜು ಆಯೋಗದ ವರದಿಯನ್ನು ಜಾರಿ ಯಾಗದಂತೆ ಮಾಡಿದ್ದಲ್ಲದೆ. ಇದೀಗ ನಡೆಯುತ್ತಿರುವ ಎರಡನೇ ಸಮೀಕ್ಷೆಯನ್ನು ಸಹ ತಡೆಯಲು ಬ್ರಾಹ್ಮಣ ಲಿಂಗಾಯಿತ ಒಕ್ಕಲಿಗದಲ್ಲಿರುವ ಜಾತಿಗಳಲ್ಲಿ ಮನುವಾದಿಗಳು ಪಿತೂರಿ ಮಾಡುತ್ತಿದ್ದಾರೆ. ಎಂದು ಆರೋಪಿಸಿದರು.
ಬಿಪಿ ಮಂಡಲ್ ಆಯೋಗದ ವರದಿಯ ಪ್ರಕಾರ ದೇಶದಲ್ಲಿ ಶೇಕಡ 52 ರಷ್ಟು ಜನಸಂಖ್ಯೆಯುಳ್ಳ 3,743 ಜಾತಿಗಳು ಇತರ ಹಿಂದುಳಿದ ವರ್ಗಗಳಾಗಿವೆ. ಓಬಿಸಿ ಅವರುಗಳಿಗೆ ಭಾರತ ಸರ್ಕಾರದ ನೌಕರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ 27 ರಷ್ಟು ಮೀಸಲಾತಿ ನೀಡಲು ಮಾಡಿದ ಶಿಫಾರಸು 1992ರಲ್ಲಿ ಜಾರಿ ಇದ್ದರೂ ಕೇವಲ ಶೇಕಡ 12ರಷ್ಟು ಹುದ್ದೆಗಳನ್ನು ಮಾತ್ರ ಈತನಕ ತುಂಬಲಾಗಿದೆ. ನಾವೆಲ್ಲರೂ ಹಿಂದೂ ನಾವೇ ಬಹುಸಂಖ್ಯಾತ ಆಗಿದ್ದೇವೆ ಎನ್ನುತ್ತಿರುವ ಶೇಕಡ 15ಕ್ಕಿಂತಲೂ ಕಡಿಮೆ ಇರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ರಾಜಕೀಯ ಕೃಷಿ ಉದ್ಯೋಗ ಶಿಕ್ಷಣ ಉದ್ಯಮ ವ್ಯಾಪಾರ ಮುಂತಾದ ಎಲ್ಲಾ ಲಾಭದಾಯಕ ಕ್ಷೇತ್ರಗಳಲ್ಲಿ ಶೇಕಡ 80ಕ್ಕಿಂತ ಹೆಚ್ಚಿನ ಪಾಲು ಕಬಳಿಸಿದ್ದಾರೆ. ಆದರೆ ತಾವು ಹಿಂದುಗಳು ಎಂದುಕೊಂಡಿರುವ ಸಂಖ್ಯಾತ ಹಿಂದುಳಿದ ಜಾತಿಗಳು ಗ್ರಾಮ ಪಂಚಾಯಿತಿ ಸ್ಥಾನವನ್ನು ಪಡೆಯಲಾಗದೆ ಬಡತನ, ಹಸಿವು, ಅವಮಾನ, ಅನರಕ್ಷತೆ, ನಿರುದ್ಯೋಗಗಳಲ್ಲಿ ನರಳುತ್ತಿದ್ದಾರೆ. ಅದಕ್ಕಾಗಿ ಡಿಸೆಂಬರ್ 6ರಂದು ಕರ್ನಾಟಕ ಆದ್ಯಂತ ಬಹುಜನ ಆಂದೋಲನವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ನರಸಿಂಹಯ್ಯ, ತಾಲೂಕು ಸಂಯೋಜಕ ನಾರಾಯಣಸ್ವಾಮಿ, ದೇವರಾಜ್, ಮಹಿಳಾ ಜಿಲ್ಲಾಧ್ಯಕ್ಷೆ ರಾಧಮ್ಮ, ತಾಲೂಕು ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ವಿಜಯಪುರ ಟೌನ್ ಅಧ್ಯಕ್ಷ ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ತಾಲೂಕು ಉಪಾಧ್ಯಕ್ಷ ಮುನೇಂದ್ರ, ಪ್ರಧಾನ ಕಾರ್ಯದರ್ಶಿ
ದಾಳಪ್ಪ, ಮುಖಂಡರು, ಕಾರ್ಯಕರ್ತರು ಮತ್ತಿತರರು ಇದ್ದರು.

ಚಿತ್ರ: ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ದೇವನಹಳ್ಳಿ ತಾಲೂಕು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ಕಾರ್ಯಕರ್ತರ ಸಭೆಯಲ್ಲಿ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.

8
607 views