logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬ್ಯಾರಿ ಅಕಾಡೆಮಿಯ ರಾಜ್ಯ ಮಟ್ಟದ ಚಮ್ಮನ ವಿದ್ಯಾರ್ಥಿ ಸಂಗಮ ಕಾರ್ಯಕ್ರಮದ: ಸ್ವಾಗತ ಸಮಿತಿ ರಚನೆ

ಅಧ್ಯಕ್ಷರಾಗಿ ಪಿ ಅಹ್ಮದ್ ಹಾಜಿ, ಸಂಚಾಲಕರಾಗಿ ಡಾ. ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು. ಪ್ರ. ಕಾರ್ಯದರ್ಶಿ ನೂರುದ್ದೀನ್ ಸಾಲ್ಮರ, ಸಹ ಸಂಚಾಲಕರಾಗಿ ಶಕೂರ್ ಹಾಜಿ ಕಲ್ಲೆಗ




ಪುತ್ತೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಡಿ. 7ರಂದು ಪುತ್ತೂರು ಪುರಭವನದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ 'ಬ್ಯಾರಿ ಅಕಾಡೆಮಿ ಚಮ್ಮನ' (ಗೌರವ ಪುರಸ್ಕಾರ) ಮತ್ತು 'ವಿದ್ಯಾರ್ಥಿ ಸಂಗಮ' ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿ ರಚಿಸಲಾಯಿತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಹೆಚ್. ಅವರ ಅಧ್ಯಕ್ಷತೆಯಲ್ಲಿ ಬೋಳುವಾರಿನ ಆಕರ್ಷನ್ ಬಿಲ್ಡರ್ಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಯ್ಕೆಯನ್ನು ನಡೆಸಲಾಯಿತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಬಿ.ಎಸ್. ಮುಹಮ್ಮದ್ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕಿ ಸಾರಾ ಅಲಿ ಪರ್ಲಡ್ಕ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕೆ.ಪಿ. ಅಹ್ಮದ್ ಹಾಜಿ, ಸಂಚಾಲಕರಾಗಿ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಸಹ ಸಂಚಾಲಕರಾಗಿ ಬಿ.ಎ.ಶಕೂರ್ ಹಾಜಿ ಕಲ್ಲೆಗ, ಉಪಾಧ್ಯಕ್ಷರುಗಳಾಗಿ ಎಲ್. ಟಿ. ಅಬ್ದುಲ್ ರಝಾಕ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಹಾಜಿ ಅಬ್ದುಲ್ ರಹಿಮಾನ್ ಆಝಾದ್ ಮತ್ತು ಇಬ್ರಾಹಿಂ ಗೋಳಿಕಟ್ಟೆ, ಕಾರ್ಯದರ್ಶಿಗಳಾಗಿ ವಿ.ಕೆ. ಶರೀಫ್ ಬಪ್ಪಳಿಗೆ ಮತ್ತು ಅಬ್ದುಲ್ ಹಮೀದ್ ಸೋಂಪಾಡಿ, ಪತ್ರಿಕಾ ಕಾರ್ಯದರ್ಶಿಯಾಗಿ ಶೇಖ್ ಝೈನುದ್ದೀನ್, ಸಂಘಟನಾ ಕಾರ್ಯದರ್ಶಿಯಾಗಿ ನ್ಯಾಯವಾದಿ ಕೆ.ಎಂ. ಸಿದ್ದೀಕ್, ಕೆ. ಉಮರ್ ಕರಾವಳಿ ಮತ್ತು ಹಾಜಿ ಆಶ್ರಫ್ ಕಲ್ಲೆಗ

ಅಲ್ಲದೆ ಸದಸ್ಯರುಗಳಾಗಿ ಮುಹಮ್ಮದ್ ಶಾಪಿ ಪಾಪೆತಡ್ಕ, ಪಿ ಮುಹಮ್ಮದ್ ತೆಂಕಿಲರವರನ್ನು ಆಯ್ಕೆ ಮಾಡಲಾಯಿತು.

ಸ್ಪರ್ಧಾ ಕಾರ್ಯಕ್ರಮದ ಬಗ್ಗೆ ಹೆಸರು ನೋಂದಾಯಿಸಲು ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಮತ್ತು ಸಾರಾ ಅಲಿ ಪರ್ಲಡ್ಕ ಹಾಗೂ ಸಾಂಪ್ರದಾಯಿಕ ಅಡುಗೆ ಪುಡ್ ಸ್ಟಾಲ್ ಬಗ್ಗೆ ಇಬ್ರಾಹಿಂ ಗೋಳಿಕಟ್ಟೆ ಮತ್ತು ಬಿ.ಎ.ಶಕೂರ್ ಹಾಜಿ ಕಲ್ಲೆಗೆ ಇವರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

51
1412 views

Comment