logo

ಸಚಿವ ಪ್ರಿಯಾಂಕ ಖರ್ಗೆ ಜನ್ಮ ದಿನ || ಅಭಿಮಾನಿಗಳಿಂದ ಅರ್ಥಪೂರ್ಣ ಆಚರಣೆ

ಯಾದಗಿರಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆರವರ 47ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳಿಂದ ನಗರದ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್, ರೋಗಿಗಳಿಗೆ ಅಗತ್ಯವಾದ ವಸ್ತುಗಳನ್ನು ವಿತರಿಸುವ ಮೂಲಕ ಖರ್ಗೆ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಧರ್ಮು ಗಿರೆಪ್ಪನೋರ್ ಮಾತನಾಡಿ ನಮ್ಮ ನಾಯಕರಾದ ಪ್ರಿಯಾಂಕ ಖರ್ಗೆ ಅವರು ಅತ್ಯಂತ ಸರಳ ಸ್ವಭಾವದ ನಾಯಕರು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಗತಿಪರ ಭಾವನೆಗಳತ್ತ ಸದಾ ಉತ್ಸಾಹದಿಂದಾಗಿ ಅವರು ಯುವಜನತೆಯಲ್ಲಿ ಪ್ರಚಲಿತ ನಾಯಕರಾಗಿದ್ದಾರೆ. ದುಂದು ವೆಚ್ಚದ ಆಚರಣೆ ನಮ್ಮ ನಾಯಕರು ಇಷ್ಟವಾಗುವುದಿಲ್ಲ ಸರಳವಾಗಿ ಆಸ್ಪತ್ರೆಯ ರೋಗಿಗಳಿಗೆ ಅಗತ್ಯವಾದ ವಸ್ತುಗಳನ್ನು ವಿತರಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮರೆಪ್ಪ ಚಟ್ಟೆರಕರ್, ಚಂದಪ್ಪ ಮುನಿಯಪ್ಪನೋರ್, ಶರಣು ನಾಟೇಕರ್, ಬಸವರಾಜ ಗಿರೆಪ್ಪನೋರ್, ಮರೆಪ್ಪ, ಸೈದಪ್ಪ ಕುಯಿಲೂರ, ತಾಯಪ್ಪ ಭಂಡಾರಿ, ಶೀವು ಗಿರಿಪ್ಪನೋರ್, ಪರಶುರಾಮ ಚಲವಾದಿ, ನರೇಶ್ ಗಿರೆಪ್ಪನೋರ್, ಶಾಂತಪ್ಪ, ರಾಕೇಶ್, ಮೌನೇಶ್,ಭೀಮು ಈಟೇ, ಸಂತೋಷ ಇನ್ನಿತರರಿದ್ದರು.

8
519 views