logo

ಹುಲಿಗೆಪ್ಪ ಪ್ರೌಢಶಾಲೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಜನ್ಮ ದಿನ ಆಚರಣೆ

ಯಾದಗಿರಿ : ನಗರದ ಹುಲಿಗೆಪ್ಪ ಪ್ರೌಢಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮ ದಿನ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಯಾದಗಿರಿ ನಗರದ ಅಭಿವೃದ್ಧಿಯ ಪ್ರಾಧಿಕಾರ ಯೊಜನ ಅಧ್ಯಕ್ಷರಾದ ಬಾಬುರಾವ್ ಕಾಡ್ಲೂರು ಅವರು ಪ್ರಿಯಾಂಕ ಖರ್ಗೆ ಅವರು ವ್ಯಕ್ತಿತ್ವದಲ್ಲಿ, ಜನಸೇವೆ, ಪ್ರಾಮಾಣಿಕತೆ, ವೈಚಾರಿಕತೆ, ಮತ್ತು ಹೊಸತನಕ್ಕೆ ಅರ್ಥ ತುಂಬುವ ಗುಣಗಳಿವೆ. ಇವತ್ತಿನ ಯುವನುಡಿಗೆಯವರಿಗೆ ಅವರು ಪ್ರೇರಣಾದಾಯಕರಾಗಿದ್ದಾರೆ ಎಂದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಘವೆಂದ್ರಗೌಡ ಮಾನಸಗಲ್, ಬಾಸಮಿಯ ವಡಿಗೇರಾ, ಶಿವುಕುಮಾರ ಕರದಳ್ಳಿ, ಧರ್ಮಣ್ಣ ಗಿರೇಪ್ಪನೋರ್, ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳು,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.​

14
995 views