logo

ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣ ದಿಂದೆತ್ತ ಸಂಬಂಧ ವಯ್ಯಾ... ದಕ್ಷಿಣ ಸುಡಾನ್ - ಬೀದರ್ - ಬವೇರಿಯಾ

ವಿಶ್ವ ಸಂಸ್ಥೆಯ ದಕ್ಷಿಣ ಸುಡಾನ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಲ್ಲಿ ವಿವಿಧ ದೇಶಗಳ ಮಹಿಳಾ ಪೊಲೀಸ್ ಅಧಿಕಾರಿಗಳು ಆಂತರಿಕ ಗಲಭೆ ಪೀಡಿತ ದಕ್ಷಿಣ ಸುಡಾನನಲ್ಲಿ ಮಹಿಳೆಯರ ಮತ್ತು ಮಕ್ಕಳ ಭದ್ರತೆಗಾಗಿ ಒಟ್ಟಾಗಿ ಶ್ರಮಿಸುತ್ತಿದ್ದ ಅವರ ಸೇವಾ ಮನೋಭಾವವೇ 2023 ರಲ್ಲಿ ಬೀದರನ ಅಕ್ಕ ಪಡೆಯ ಸೃಷ್ಟಿಗೆ ಸ್ಫೂರ್ತಿ...

ನಿನ್ನೆ ಅಕಾಡೆಮಿಗೆ ಆಗಮಿಸಿದ ಜರ್ಮನಿ ದೇಶದ ಪಾರ್ಲಿಯಮಂಟ್ ಅಧ್ಯಕ್ಷೆಯಾದ Ms Ilsa Aigner ಅವರ ವ್ಯಕ್ತಿತ್ವ (ಅತ್ಯಂತ ಜನಪ್ರಿಯ ಮತ್ತು ನಿರಂತರ 20 ವರ್ಷಗಳ ಕಾಲ ಆಯ್ಕೆಗೊಂಡಿರುವ ಮೂಲತಃ ಇಂಜಿನೀಯ‌ರ್ ಅಗಿರುವ ಅಪರೂಪದ ಮಹಿಳಾ ಮುತ್ಸದ್ದಿ ರಾಜಕಾರಣಿ) ನಮ್ಮನ್ನೆಲ್ಲ ಪ್ರಭಾವಿಸಿತು... ಅವರೊಂದಿ ಗೆ ಮಾತನಾಡುವಾಗ ತಾವು ಇಷ್ಟೊಂದು ಯಶಸ್ವಿ ಮಹಿಳೆ ಹೇಗೆ ಆದಿರಿ ಎಂದು ನಾನು ಕೇಳಿದಾಗ ಅವರು ಹೇಳಿದ್ದು ನಾನು ಯಾವತ್ತಿಗೂ ನನ್ನನ್ನು ನಾನು "ನನ್ನಿಂದ ಇದು ಸಾಧ್ಯವೇ?" ಎಂದು ನನ್ನ ಸಾಮರ್ಥ್ಯ ಕುರಿತು ಪ್ರಶ್ನಿಸಿ ಕೊಂಡಿಲ್ಲ ಎಂದು ಆತ್ಮವಿಶ್ವಾಸದಿಂದ ನುಡಿದರು... ತಮ್ಮ ದೇಶದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯತೆ ಹೆಚ್ಚಿಗೆ ಮಾಡಲು ಪ್ರಯತ್ನಿಸುತ್ತಿರುವದಾಗಿ ತಿಳಿಸಿದರು.. ಮತ್ತು ಅಕ್ಕ ಪಡೆಯ ಸಾಧನೆ ಕೇಳಿ ಸಂತೋಷ್ ಪಟ್ಟರು.

ಅಕ್ಕ ಪಡೆಯ ಅಧಿಕಾರಿಗಳಿಗೆ ಇಂತಹ ಸಾಧಕರ ಮಾತು ಸ್ಫೂರ್ತಿ ಅಲ್ಲವೇ?

0
35 views