logo

ಚಿರಾಗ ಪಾಸ್ವಾನ್ ದಲಿತರಲ್ಲಿ ಹೊಸ ರೀತಿಯ ರಾಜಕಾರಣಕ್ಕೆ ಬೆಳಕು ಚೆಲ್ಲಿ, ಯಶಸ್ವಿಯಾಗಿ ಮಾದರಿಯಾದವರು.

ನಾನು ಹಿಂದೂ, ಹಿಂದುತ್ವದ ದಾರಿಯಲ್ಲಿ ನಡೆಯುವವನು, ಈ ಮಣ್ಣಿನ ಸಂಸ್ಕೃತಿ, ಸಂಪ್ರದಾಯಗಳನ್ನು ಒಪ್ಪುವವನು ಎನ್ನುವುದು ಅಪರಾಧ ಎನ್ನುವಂತೆ ಬಿಂಬಿಸುವ ಕಾಲಘಟ್ಟದಲ್ಲಿ ಅದರಲ್ಲೂ ಒಬ್ಬ ದಲಿತ ಆ ವಿಷಯ ಮಾತನಾಡುವುದು ಎಂದರೆ ಮಹಾಪರಾಧ,ಎನ್ನುವಂತೆ ಬಿಂಬಿಸಿ ಯಶಸ್ವಿಯಾಗಿದ್ದ ಕಾಂಗ್ರೇಸ್, ಎಡಪಂಥಿಯರಿಗೆ ಚಿರಾಗ್ ಪಾಸ್ವನ್ ನುಂಗಲಾರದ ತುತ್ತಗಿದ್ದಾರೆ. ಅದರಲ್ಲೂ ಮೋದಿಯ ಬಗ್ಗೆ ಇವರಿಗೆ ಇರುವ ದ್ವೇಷ ಅಂತೂ ಹೇಳತೀರದು, ಬಹುಷಃ ಅಸುರರು ಕೂಡ ದೇವರ ಮೇಲೆ ಇಷ್ಟೊಂದು ದ್ವೇಷದ ಮಳೆಯನ್ನು ಸುರಿಸಿಲ್ಲ ಅಷ್ಟು ಈ ಕಾಂಗ್ರೇಸ್ ಎಡ ಪಂಥಿಯರು ಹಾಗೂ ಕೆಲವು ಜ್ಯಾತ್ಯಾತೀತ ಎಂದು ಬಡಾಯಿ ಕೊಚ್ಚಿಕೊಳ್ಳುವ ಪ್ರಾದೇಶಿಕ ಪಕ್ಷಗಳು ಅವರನ್ನು ದ್ವೇಶಿಸುವಾಗ ಇವರು ಮೋದಿಜಿಗೆ ನಾನು ಹನುಮಂತ ನಂತೆ ಸದಾ ಜೊತೆಗಿರುತ್ತೇನೆ ಎಂದು ಬಿಟ್ಟರು. ಮೋದಿಜಿಯ ನೀಲಿಕಣ್ಣಿನ ಹುಡುಗನಾಗಿ ಆಪ್ತರಾದರೂ ಹಾಗೆಯೇ ಒಂದು ಭಿನ್ನ ಸಿದ್ದಾಂತದಿಂದ ದಲಿತರನ್ನು ಮುನ್ನೆಲೆಗೆ ಕರೆತಂದು, ದಲಿತರಲ್ಲಿರುವ ಪೂರ್ವಗ್ರಹ ಪೀಡಿತ ಆತಂಕವನ್ನು ದೂರ ಮಾಡಿದರು.ಅಂಬೇಡ್ಕರರ ಆಶಯದಂತೆ ನಡೆದುಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಭಾರತ ದೇಶದಲ್ಲಿ ದಲಿತರಿಗೆ ಇರುವಷ್ಟು ಅಡ್ಡಿ, ಅಡಚಣೆ ಆತಂಕಗಳ ಜೊತೆಗೆ ಪವಿತ್ರತೆ ಹಾಗೂ Political Untouchability ಅನ್ನುವ ನೆಗೆಟಿವ್ ನರೇಟಿವನ್ನು ಸೆಟ್ ಮಾಡಿ ದಲಿತರು ಕೇವಲ ಒಂದು ರಾಜಕೀಯ ಪಕ್ಷದ ಮತ ಬ್ಯಾಂಕ್ ಆಗಿ ಉಳಿದುಕೊಂಡು ಅವರಿಗೆ ಮತಗಳನ್ನು ಹಾಕಿಕೊಂಡು ಒಂದಿಷ್ಟು ಮೀಸಲು ಕ್ಷೇತ್ರದಿಂದ ಸೀಟುಗಳನ್ನು ಗೆದ್ದುಕೊಂಡು ನಂತರ ಆ ಪಕ್ಷದಲ್ಲಿ ಬಾಯಿ ಕಟ್ಟಿಸಿಕೊಂಡು ಮೂಕ ಪ್ರೇಕ್ಷಕರಾಗಿ ಕೂರುವಂತೆ ಮಾಡುವ ಒಂದು ಪೂರ್ವ ನಿಯೋಜಿತ ರಾಜಕೀಯ ಆಟದಲ್ಲಿ ಕಳೆದುಹೋಗದೆ,ಇಂದು ಒಂದು ರಾಜಕೀಯ ಪಕ್ಷವನ್ನು ಚುನಾವಣಾಪೂರ್ವ ಮೈತ್ರಿಯ ರಾಜಕಾರಣದಿಂದ ರಾಜಕಾರಣದಲ್ಲಿ ಪ್ರಸ್ತುತವಾಗಿದ್ದುಕೊಂಡು ಗೆಲುವನ್ನು ಸಾಧಿಸಿಕೊಂಡು ಅಧಿಕಾರವನ್ನು ಕೈಗೆಟಿಕಿಸಿಕೊಂಡು ಅದರ ಮುಖಾಂತರ ಏನಾದರೂ ಮಾಡಬಹುದು ಎಂದು ತೋರಿಸುತ್ತಿರುವ ಚಿರಾಗ್ ಪಾಸ್ವಾನ್ ಬಹಳಷ್ಟು ದಲಿತ ರಾಜಕಾರಣಿಗಳಿಗೆ ಮಾದರಿಯಾಗ ಬೇಕಾಗಿದೆ.ಅದರಲ್ಲೂ ದಲಿತ ರಾಜಕಾರಣಿಗಳು ಕೂಡ ಕುಟುಂಬ ರಾಜಕಾರಣವನ್ನೇ ಮಾಡುತ್ತಾ ಬಹುತೇಕ ದಲಿತರ ರಾಜಕೀಯ ಹಕ್ಕನ್ನು ಕಿತ್ತುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು ಅದಕ್ಕೆ ಸಾಕಷ್ಟು ಉದಾಹರಣೆ ಕೊಡಬಹದು ಈಗ AiCC ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು 50 ವರ್ಷಗಳ ಕಾಲ ಮೀಸಲು ಕ್ಷೇತ್ರದಲ್ಲಿ ರಾಜಕೀಯ ಲಾಭವನ್ನುಂಡು ಮುಂದೆ ತಮ್ಮ ಉತ್ತರಾಧಿಕಾರಿಯಾಗಿ ತಮ್ಮ ಮಗನನ್ನೇ ರಾಜಕೀಯಕ್ಕೆ ತಂದು ಹಲವು ಸಮರ್ಥ ನಾಯಕರನ್ನು ಕಡೆಗಣಿಸಿ ಮಂತ್ರಿಯನ್ನಾಗಿ ಮಾಡಿದರು.
ಸ್ವಾತಂತ್ರ ನಂತರ ಈ ದೇಶದಲ್ಲಿ ಜಾತಿಯತೆ ಎನ್ನುವ ಜಾಡ್ಯ ತುಸು ತುಸು ಕಡಿಮೆಯಾಗುತ್ತಾ, ಸಾಕಷ್ಟು ಬದಲಾವಣೆಯಾದರು ಕೂಡ ಇನ್ನು ಮನುವಾದಿ, ಬ್ರಾಹ್ಮಣ್ಯ ಎನ್ನುವ ಗುಮ್ಮಾ ತೋರಿಸುತ್ತ ದಲಿತರನ್ನು ಇನ್ನು ಬೆಳೆಯಲು ಬಿಡದೆ ಒಂದು ವ್ಯೂಹದಲ್ಲಿ ಬಂಧಿಸಿದ್ದಾರೆ ಎಂದರೆ ತಪ್ಪಾಗಲಾರದು. ಅದಕ್ಕೆ ಚಿ. ನಾ. ರಾಮು ಅವರು ಬರೆದ " ಬಲಿತ ದಲಿತ " ಪುಸ್ತಕವನ್ನು ಓದಿದರೆ ವಾಸ್ತವ ತಿಳಿಯುತ್ತದೆ. ಹಾಗೆ ನೋಡಿದರೆ ಇಡಿ ದೇಶದಲ್ಲಿ ಬಿಜೆಪಿಯ ಪಕ್ಷದಲ್ಲಿಯೇ ಅತಿಹೆಚ್ಚು MLA, MP ಗಳಾಗಿದ್ದಾರೆ ಅತಿಹೆಚ್ಚು ರಾಜಕೀಯ ಪ್ರಾಧಾನ್ಯತೆ ಕೂಡ ಪಡೆದುಕೊಂಡಿದ್ದಾರೆ ಹಾಗಿದ್ದು ಬಿಜೆಪಿ ಸಂವಿಧಾನ ಬದಲಾಯಿಸುತ್ತಾರೆ ಮೀಸಲಾತಿ ತೆಗೆಯುತ್ತಾರೆ ದಲಿತರಿಗೆ ಅನ್ಯಾಯ ಮಾಡುತ್ತಾರೆ ಎನ್ನುವದನ್ನು ಹಸಿ ಸುಳ್ಳನ್ನು ತುಂಬುತ್ತಿದ್ದಾರೆ. ವಾಸ್ತವವನ್ನು ಮರೆಮಾಚುತ್ತಿದ್ದಾರೆ. ಇನ್ನಾದರೂ ದಲಿತರು ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಚಿರಾಗ್ ಪಾಸ್ವಾನರಂತೆ ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸಬೇಕು. ಮನದ ದುಗುಡವನ್ನು ದೂರಗೊಳಿಸಿ, ಹಿಂದೂ ನಾವೆಲ್ಲ ಒಂದೇ ಎಂಬ ಭಾವದಲ್ಲಿ ಬಾಳಬೇಕು.

0
57 views