logo

ಕೆ. ಎನ್. ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಾಸಲು ಸತೀಶ್ ಆಗ್ರಹ

ಸಾಮಾಜಿಕ ನ್ಯಾಯದ ಧ್ವನಿ, ಅಹಿಂದ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಾಯಕ ಕೆ. ಎನ್. ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಾಸಲು ಸತೀಶ್ ಆಗ್ರಹ

ಚಿಕ್ಕನಾಯಕನಹಳ್ಳಿ ಸ್ವಗೃಹದಲ್ಲಿ ನಡೆದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳ ಜೊತೆ ಮಾತನಾಡಿದ ಸಾಸಲು ಸತೀಶ್ ಹೇಳುವಾಗ, ಅಹಿಂದ ಸಮುದಾಯದ ಹಿಂದುಳಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ರಾಜಣ್ಣ ಅವರ ಪಾತ್ರ ಅಪಾರವಾಗಿದೆ ಎಂದರು.

ರಾಜಕೀಯದಲ್ಲಿ ದೀರ್ಘ ಅನುಭವ ಹೊಂದಿರುವ ರಾಜಣ್ಣ ಅವರನ್ನು ಸಂಪುಟಕ್ಕೆ ಸೇರಿಸುವ ಮೂಲಕ ಸರ್ಕಾರ ಸಾಮಾಜಿಕ ನ್ಯಾಯದತ್ತ ಗಂಭೀರವಾದ ಬದ್ಧತೆಯನ್ನು ತೋರಿಸಬಹುದು ಎಂದು ಮುಖಂಡರು ಅಭಿಪ್ರಾಯಪಟ್ಟರು.

ಅಹಿಂದ ಸಮುದಾಯಗಳ ಹಲವು ಬೇಡಿಕೆಗಳನ್ನು ಸರ್ಕಾರದವರೆಗೆ ತಲುಪಿಸುವಲ್ಲಿ ಅವರು ನಿರಂತರ ಹೋರಾಟ ನಡೆಸಿದ ಕಾರಣ, ಅವರಿಗೆ ಸಚಿವ ಸ್ಥಾನ ನೀಡುವುದು ನ್ಯಾಯಸಮ್ಮತ ಎಂದು ಮುಖಂಡರು ಒತ್ತಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹಲವಾರು ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

5
164 views