logo

ತಾಳಿಕೋಟೆ ಹೇಮರಡ್ಡಿ ಮಲ್ಲಮ್ಮ ಸಂಘದಲ್ಲಿ ಅಧ್ಯಕ್ಷ ರಾಗಿ ಬಿ.ಎನ್. ಹಿಪ್ಪರಗಿ–ಉಪಾಧ್ಯಕ್ಷರಾಗಿ ರವಿಂದ್ರನಾಥಗೌಡ ಪಾಟೀಲ ಅವಿರೋಧವಾಗಿ – ಆಯ್ಕೆ

ಪಟ್ಟಣದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನೇಮಕವು ಶುಕ್ರವಾರ ಸಂಘದ ಸಭಾಭವನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯ ಮೂಲಕ ಶಾಂತಿಯುತವಾಗಿ ನೆರವೇರಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಇವರು ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ, ಇಬ್ಬರೂ ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಚುನಾವಣಾಧಿಕಾರಿ ವಿಜಯಕುಮಾರ ಉತ್ನಾಳ ಅಧಿಕೃತವಾಗಿ ಘೋಷಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಬಿ.ಎನ್. ಹಿಪ್ಪರಗಿ, ಉಪಾಧ್ಯಕ್ಷ ಸ್ಥಾನಕ್ಕೆ ರವಿಂದ್ರನಾಥಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಚಿನ್ನಪ್ಪಗೌಡ ಮಾಳಿ, ಹಣಮಗೌಡ ಗೂಗಲ್ಲ, ಪ್ರಭುಗೌಡ ಮದರಕಲ್ಲ, ಸುಭಾಸಚಂದ್ರ ಗುರಡ್ಡಿ, ಶರಣಗೌಡ ಇಬ್ರಾಹಿಂಪೂರ, ಶಾಂತಗೌಡ ಪಾಟೀಲ, ಶಾಂತಾ ಕಂತಲಗಾವಿ, ಸುಜಾತಾ ಮಂಗಳೂರು, ರಾಮಪ್ಪ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಮಾಜದ ಮುಖಂಡರಾದ ಶಂಕರಗೌಡ ಕಂತಲಗಾವಿ, ಸಿದ್ದನಗೌಡ ಮಂಗಳೂರು, ಬ್ಯಾಂಕಿನ ವ್ಯವಸ್ಥಾಪಕ ಚಂದ್ರಶೇಖರ ಮಾಲಿಪಾಟೀಲ, ಸಿಬ್ಬಂದಿ ಸ್ವಾಲೀಹಾ ತಾಳಿಕೋಟಿ, ವಾಣಿ ಕೊಡಗಾನೂರ, ಪ್ರಶಾಂತ ಮಡಿವಾಳ ಮೊದಲಾದವರು ಹೊಸ ಆಡಳಿತ ಮಂಡಳಿಗೆ ಶುಭಹಾರೈಸಿದರು.

ಸಂಘದ ಅಭಿವೃದ್ಧಿಗೆ ನೂತನ ತಂಡ ಪರಿಣಾಮಕಾರಿ ಯೋಜನೆಗಳನ್ನು ರೂಪಿಸುವ ವಿಶ್ವಾಸವನ್ನು ಬ್ಯಾಂಕಿನ ಶೇರುದಾರರು ವ್ಯಕ್ತಪಡಿಸಿದರು.
ವರದಿ: ಸಂಗನಗೌಡ ಗಬಸಾವಳಗಿ

26
993 views