logo

ಕೋಲಾರ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಕಾರ್ಯಕರ್ತರಿಂದ ಕನಕ ದಾಸರ ಜಯಂತಿ ಆಚರಣೆ..

ಕೋಲಾರ ಜಿಲ್ಲಾ ಅಧ್ಯಕ್ಷರು ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ಜಿಲ್ಲಾ ಪಕ್ಷದ ಕಚೇರಿಯಲ್ಲಿ ಕನಕದಾಸರ ಜಯಂತಿಯನ್ನು ಮಾಡಲಾಯಿತು. ಅಧ್ಯಕ್ಷರು ಮಾತನಾಡಿ   ಕನಕದಾಸರಾಗಲಿ ಕೆಂಪೇಗೌಡರ ಆಗಲಿ ಇನ್ನೂ ಅನೇಕ ಮಹಾನ್ ಪುರುಷರು ಮಹಾನ್ ನಾಯಕರು ದೈವಭಕ್ತರು ಎಲ್ಲರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು.ಜಾತಿ, ಮತ, ಭಾಷೆ, ಧರ್ಮ — ಇವುಗಳನ್ನೆಲ್ಲ ಮೀರಿಸಿ,
“ಮನುಜನೇ ಮಾನವನೇ!” ಎಂಬ ಮಾತಿನ ಅರ್ಥ ತಿಳಿಯಬೇಕು.
ಅವರು ಬರೆದ ಅಮರ ಪದ್ಯಗಳು ಕೇವಲ ದೇವರ ಭಜನೆ ಅಲ್ಲ,
ಅವು ಜೀವನದ ಪಾಠಗಳು, ನೈತಿಕ ಮೌಲ್ಯಗಳ ಪಾಠಗಳು.
ಇಂದು ಅವರ ಜಯಂತಿಯಂದು ನಾವು ಎಲ್ಲರೂ ಕನಕದಾಸರ ಸಂದೇಶವನ್ನು ನೆನೆದು,
ನಮ್ಮ ಬದುಕಿನಲ್ಲಿ ಸಮಾನತೆ, ಸತ್ಯ, ಶಾಂತಿ, ಭಕ್ತಿ ಮತ್ತು ಮಾನವೀಯತೆ ಎನ್ನುವ ಮೌಲ್ಯಗಳನ್ನು ಪಾಲಿಸೋಣ ಎಂದು ನುಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರುಗಳು ಮುಖಂಡರುಗಳು ಭಾಗವಹಿಸಿದ್ದರು,

1
99 views