logo

ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಸ್ಲಂ ಜನರಿಗೆ ಹಕ್ಕುಪತ್ರ ವಿತರಣೆಗೆ* *ಆಗ್ರಹ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ* *ಪ್ರತಿಭಟನೆ* ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಸ್ಲಂ ಜನರಿಗೆ ಹಕ್ಕು

*ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಸ್ಲಂ ಜನರಿಗೆ ಹಕ್ಕುಪತ್ರ ವಿತರಣೆಗೆ* *ಆಗ್ರಹ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ* *ಪ್ರತಿಭಟನೆ*

ಇಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ತುಮಕೂರು ಜಿಲ್ಲೆಯಲ್ಲಿರುವ ಸ್ಲಂ ನಿವಾಸಿಗಳಿಗೆ ಸರ್ಕಾರದ ಮಹತ್ವಕಾಂಶೆಯ ಭೂ ಹಕ್ಕು ನೀಡುವ ಭರವಸೆ ಈಡೇರಿಕೆಗಾಗಿ ತುಮಕೂರು ನಗರಕ್ಕೆ ನವೆಂಬರ್ 7ರಂದು ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಸ್ಲಂ ನಿವಾಸಿಗಳಿಗೆ ವಿತರಣೆ ಮಾಡಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಂಬಂಧ ಕಳೆದ ಅಕ್ಟೋಬರ್ ನಲ್ಲಿ ಸ್ಲಂ ಬೋರ್ಡ್ ಮುತ್ತಿಗೆ ಹಾಕಿ ಎಚ್ಚರಿಕೆ ನೀಡಲಾಗಿತ್ತು.

*ಸ್ಲಂ ನಿವಾಸಿಗಳಿಗೆ ಸರ್ಕಾರದ ಆದೇಶದಂತೆ ಹಕ್ಕುಪತ್ರ ವಿತರಣೆ* - *ಜಿಲ್ಲಾಧಿಕಾರಿ ಶುಭಕಲ್ಯಾಣ್*

ಪ್ರತಿಭಟನಕಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಜಿಲ್ಲೆಯಲ್ಲಿ ಸರ್ಕಾರದ ಆದೇಶದನ್ವಯ ಇದುವರೆಗೂ ಹಕ್ಕುಪತ್ರಗಳಿಲ್ಲದ 5816 ಕುಟುಂಬಗಳ ಪೈಕಿ 3643 ಕುಟುಂಬಗಳನ್ನು ಸಮೀಕ್ಷೆ ಮಾಡಿದ್ದು ಇದರಲ್ಲಿ 1493 ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕಿದೆ. ಕೆಲವೊಂದು ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದ್ದು ಸ್ಥಳೀಯ ಸಂಸ್ಥೆಗಳಿಂದ ಮಂಡಳಿಗೆ ಮಾಲೀಕತ್ವವನ್ನು ಹಸ್ತಾಂತರಿಸಿದರೇ ಮಾತ್ರ ನೊಂದಣಿಯಾಗಲು ಸಾಧ್ಯ ಮತ್ತು ನವೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿಗಳು ಹಕ್ಕುಪತ್ರ ವಿತರಣೆ ಮಾಡುತ್ತಿದ್ದು ಅಂದೇ ಜಿಲ್ಲಾ ಉಸ್ತುವಾರಿ ಸಚಿವರ ಸಮುಖದಲ್ಲಿ ಅರ್ಹ ಕುಟುಂಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ ನಾಳೆ ಕಾರ್ಯಕ್ರಮದಲ್ಲಿ ಸ್ಲಂ ನಿವಾಸಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಜಿಲ್ಲೆಗೆ ಒಟ್ಟು 7178 ಪಿಎಂಎವೈ ಮನೆಗಳು ಮಂಜೂರಾಗಿದ್ದು ಇವುಗಳಲ್ಲಿ 2525 ಮನೆಗಳಲು ಪೂರ್ಣಗೊಂಡಿದ್ದು ಹಸ್ತಾಂತರ ಮಾಡಬೇಕಿದೆ ಎಂದರು. ಈ ಸಂದರ್ಭದಲ್ಲಿ ಸ್ಲಂ ಬೋಡ್ ಇಂಜಿನಿಯರ್ ಬಾನುಪ್ರತಾಪ್ ಸಿಂಹ ಹಾಜರಿದ್ದರು.

*ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದ ಆಶಯದಂತೆ* *ನಡೆದುಕೊಳ್ಳಲಿ-ಎ. ನರಸಿಂಹಮೂರ್ತಿ*

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕರಾದ ಎ.ನರಸಿಂಹಮೂರ್ತಿ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಅಂದರೇ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಭರವಸೆ ನೀಡಿರುವಂತೆ ನಗರದಲ್ಲಿರುವ ಬಡವರು ಸ್ಲಂ ಜನರಿಗೆ ಸಾಮಾಜಿಕ ನ್ಯಾಯದ ಖಾತ್ರಿಯನ್ನು ಮುಖ್ಯಮಂತ್ರಿಗಳು ಮಾಡಬೇಕಿದೆ, ಸರ್ಕಾರ ಅಸ್ಥಿತ್ವಕ್ಕೆ ಬಂದು 2.5 ವರ್ಷಗಳು ಕಳೆಯುತ್ತ ಬಂದರು ಸ್ಲಂ ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸಿಲ್ಲ ಪ್ರಸ್ತುತ ಬಜೆಟ್ ನಲ್ಲಿ ನಮ್ಮ ಜನಸಂಖ್ಯೆಗನುಗುಣವಾಗಿ ಹಣ ಮೀಸಲಿಡುವುದು ಸೇರಿದಂತೆ ಖಾಸಗೀ ಮಾಲೀಕತ್ವದ ಸ್ಲಂಗಳ ಸ್ವಾಧೀನಕ್ಕೆ ಮುಂದಾಗಬೇಕು ಹಾಗೂ ಸರ್ಕಾ ಜಾಗದ ಸ್ಲಂಗಳಿಗೆ ನೀಡುತ್ತಿರುವ ಹಕ್ಕುಪತ್ರವನ್ನು ನೊಂದಣಿಯನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಪ್ರತಿಭಟನಾ ನೇತೃತ್ವವನ್ನು ತಿರುಮಲಯ್ಯ, ಶಂಕ್ರಯ್ಯ, ಜಾಬೀರ್ಖಾನ್,ಶಾರದಮ್ಮ, ಗುಲ್ನಾಜ್, ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಅನುಪಮಾ, ಪದಾಧಿಕಾರಿಗಳಾದ ಅರುಣ್, ಕೃಷ್ಣಮೂರ್ತಿ, ರಾಮಕೃಷ್ಣ, ಮಂಗಳಮ್ಮ, ಕೆಂಪಣ್ಣ, ಮಾಣಿಕ್ಯಮ್ಮ, ಪೂರ್ಣಿಮಾ, ಮುಬಾರಕ್, ಧನಂಜಯ್, ಅಬಿಬುನ್ನೀಸಾ, ಅಶ್ವತ್, ರಂಗನಾಥ್, ಸಮಾಜ ಸೇವಕ ಮಕ್ದೂಮ್ಆಲಿ, ನಿವೇಶನ ಹೋರಾಟ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

4
36 views