logo

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಧ್ವಜದ ಅರಿಶಿನ ಕುಂಕುಮ ಬಣ್ಣಗಳೊಂದಿಗೆ ಕಂಗೊಳಿಸಿದ ಸದ್ಗುರು ಸನ್ನಿಧಿ, ಬೆಂಗಳೂರಿನ ಅದಿಯೋಗಿ

ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, ಸದ್ಗುರು ಸನ್ನಿಧಿ ಬೆಂಗಳೂರಿನ ಪ್ರತಿಷ್ಠಿತ 112 ಅಡಿ ಎತ್ತರದ ಅದಿಯೋಗಿಯನ್ನು, ಕರ್ನಾಟಕ ರಾಜ್ಯ ಧ್ವಜದ ಅರಿಶಿನ ಕುಂಕುಮ ಬಣ್ಣಗಳಿಂದ ಬೆಳಗಲಾಗಿತ್ತು. ರಾಜ್ಯ ಸ್ಥಾಪನೆಯ ದಿನವನ್ನು ಸ್ಮರಿಸಲು, ಸನ್ನಿಧಿಯಲ್ಲಿ ಕರ್ನಾಟಕ ರಾಜ್ಯದ ಧ್ವಜಾರೋಹಣವನ್ನೂ ಮಾಡಲಾಯಿತು. ಅದಿಯೋಗಿಯನ್ನು ಬೆಳಗಿಸಿದ ಕರ್ನಾಟಕ ರಾಜ್ಯ ಧ್ವಜದ ವರ್ಣರಂಜಿತ ಪ್ರದರ್ಶನವು ರಾಜ್ಯದ ಶ್ರೀಮಂತ ಪರಂಪರೆ, ಸಾಂಸ್ಕೃತಿಕ ಹೆಮ್ಮೆ ಹಾಗೂ ಏಕತೆಯ ಸಂಕೇತವಾಗಿ ದೃಶ್ಯಮಾಧುರ್ಯಪೂರ್ಣ ಗೌರವ ಸಮರ್ಪಣೆಯಾಗಿತ್ತು.

ಸಂಪೂರ್ಣ ಮಾನವ ಜನಾಂಗಕ್ಕೆ “ಒಂದು ಹನಿ ಆಧ್ಯಾತ್ಮವನ್ನು” ಅರ್ಪಿಸುವಂತಹ “ಆಧ್ಯಾತ್ಮಿಕ ವಿಕಾಸಾತ್ಮಕ ಸೌಕರ್ಯ”ವನ್ನು ಜಗತ್ತಿನಾದ್ಯಂತ ನಿರ್ಮಿಸುವ ಸದ್ಗುರುಗಳ ಧ್ಯೇಯದ ಭಾಗವಾಗಿ ಸದ್ಗುರು ಸನ್ನಿಧಿ ಬೆಂಗಳೂರು ನಿರ್ಮಾಣಗೊಂಡಿದೆ. ಇಲ್ಲಿ 112 ಅಡಿ ಎತ್ತರದ ಅದಿಯೋಗಿ, ಯೋಗೇಶ್ವರ ಲಿಂಗ ಮತ್ತು ನಾಗ ಮಂಟಪಗಳನ್ನು ಪ್ರತಿಷ್ಠಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಲಿಂಗ ಭೈರವಿ ಸಾನ್ನಿಧ್ಯ, ನವಗ್ರಹ ಮಂಟಪ ಮತ್ತು ಎರಡು ತೀರ್ಥಕುಂಡಗಳು ಸಹ ಬರಲಿವೆ. ಸದ್ಗುರು ಸನ್ನಿಧಿ, ಬೆಂಗಳೂರಿಗೆ ಭೇಟಿ ನೀಡುವ ಜನರಿಗೆ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳನ್ನು ನಿರಂತರವಾಗಿ ನಿಯಮಿತ ಸಮಯದಲ್ಲಿ ಹೇಳಿಕೊಡಲಾಗುತ್ತದೆ.

5
562 views