logo

ಗೌರಿಹುಣ್ಣಿಮೆಗೆ ಸಕ್ಕರೆ ಗೊಂಬೆ ತಯಾರಿಕೆಯಲ್ಲಿ ನಿರತರಾಗಿರುವ ಕಂದಗಲ್ಲ ಗ್ರಾಮದ ವೀರೇಶ್ ಶಿಂಪಿ ಕುಟುಂಬ.

ಇಲಕಲ್ 30

ಗೌರಿಹುಣ್ಣಿಮೆಗೆ ಸಕ್ಕರೆ ಗೊಂಬೆ ತಯಾರಿಕೆಯಲ್ಲಿ ನಿರತರಾಗಿರುವ ಕಂದಗಲ್ಲ ಗ್ರಾಮದ ವೀರೇಶ್ ಶಿಂಪಿ ಕುಟುಂಬ.ಇಲಕಲ್ ತಾಲೂಕಿನ
ಕಂದಗಲ್ಲ. ಗ್ರಾಮೀಣ ಪ್ರದೇಶದ ಬಹುತೇಕ ಮನೆಗಳಲ್ಲಿ ದೀಪಾವಳಿ ಪಾಡ್ಯದಂದು ಸ್ಥಾಪಿತಗೊಳ್ಳುವ ಗೌರವ್ವಗೆ ಹೆಣ್ಣುಮಕ್ಕಳು ಸಕ್ಕರೆ ಗೊಂಬೆ ಆರತಿ ಮಾಡುವದರ ಮೂಲಕ ಗೌರವ ಸಲ್ಲಿಸುವ ಪರಂಪರಾಗತ ಪದ್ಧತಿ ಇಂದಿಗೂ ರೋಢಿಯಲ್ಲಿದೆ.
ಗೌರಿ ಹುಣ್ಣಿಮೆ ಬಂತೆಂದರೆ ಎಲ್ಲೆಡೆಯು ನಯನ ಮನೋಹರ್ ಸಕ್ಕರೆ ಗೊಂಬೆಗಳು ಗೌರವ್ವಳ ಪೂಜೆಗೆ ಆರತಿ ತಾಟುಗಳಲ್ಲಿ ಸೇರಲು ಸಿದ್ದವಾಗಿರುತ್ತವೆ.
ಗುಡಿ, ತೇರು, ಈಶ್ವರ್, ಬಸವಣ್ಣ, ಆನೆ, ಕುದುರೆ, ಸೇರಿದಂತೆ ನಾನಾ ಭಾವ ಭಂಗಿಯ ವರ್ಣರಂಜಿತ ಸಕ್ಕರೆ ಗೊಂಬೆಗಳು ಸಿದ್ದಗೊಳ್ಳುತ್ತವೆ. ಆರತಿ ತಾಟು ಇಡಿದು ಗೌರವ್ವ ಳ ಕಡೆ ಹೆಂಗಳೆಯರು ಮುಖ್ಯವಾಗಿ ಪುಟ್ಟ ಹೆಣ್ಣುಮಕ್ಕಳು ನಿತ್ಯ ಸಂಜೆ ಆರತಿ ಮಾಡುತ್ತಾ....
ಒಂದ ಸೇರಿ ಎಣ್ಣಿ ತಂದೆನಾ ಗೌರಿ ಒಂದಾ ದೀವಿಗೆ ಹಚ್ಚೇನಾ ಗೌರಿ ಅಲೋರ ಚನ್ನಮ್ಮ್ ಹವಳದ ಕೈ ಕೋಟ ಬಾರಕ್ಕ ಬಾರ ನಾವು ಹಾಡೋಣ ಹಾದಿಯ ಬಿದ್ಯಾಗ ಏಕಾದರತಿ ಗೌರಿ ಬೆಳಗಾದಾರತಿ.ಎಂದು ಓಣಿಯಲ್ಲಿ ಗೌರಿಯನ್ನು ಕೊಡಿಸಿರುವ ಮನೆಗಳಿಗೆ ಹೋಗಿ ಗೌರಿ ಮುಂದೆ ಕುಳಿತು ಹವರಿ ಹೂ ಚೆಂಡು ಹೂ ಇನ್ನಿತರ ಹೂ ಗಳನ್ನು ಗೌರಿಗೆ ಏರಿಸುತ್ತಾ ಸಂಭ್ರಮಿಸುತ್ತಾರೆ.
ಹೊಸದಾಗಿ ಮದುವೆ ಅಗಲಿರುವ ವಧುವಿಗೆ ಹಾಗೂ ಮದುವೆಯಾಗಿ ಗಂಡನ ಮನೆಗೆ ಹೋಗಿರುವ ಮಗಳಿಗೆ ಅಕ್ಕ ತಂಗಿಯರಿಗೆ ಸಕ್ಕರಿ ಆರತಿ ಕೊಡುವ ಸಂಪ್ರದಾಯ ಬಹಳ ಕಾಲದಿಂದಲೂ ಕಂಡು ಬರುತ್ತಿದೆ ಹುಣ್ಣಿಮೆ ದಿನ ಗೌರಿಗೆ ಆರತಿ ಬೆಳಗಿ ದೇವಸ್ಥಾನಕ್ಕೆ ಹೋಗಿ ಬರುವ ವಾಡಿಕೆ ಇದೆ.
ಸಕ್ಕರೆ ಗೊಂಬೆ ತಯಾರಿಕೆ ಕಂದಗಲ್ಲ ಗ್ರಾಮದ ವೀರೇಶ್ ಶಿಂಪಿ ಕುಟುಂಬದವರು, ಬಸವರಾಜ್ ವಿರಾಪುರ, ಮಡ್ಡಿಕಂಟಿ, ಶಂಕರ ಶಿಂಪಿ ಸೇರಿದಂತೆ ಇನ್ನಿತರರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸಕ್ಕರೆ ಗೊಂಬೆ ತಯಾರಿಕೆಯಲ್ಲಿ ನಿರತರಾಗಿದ್ದಾರೆ.
ಕಂದಗಲ್ಲ ಭಾಗದ ಗೋನಾಳ್ ಎಸ್ ಕೆ, ಸೋಮಲಾಪುರ್, ಮರಟಗೇರಿ, ಹಿರೇಒತಗೇರಿ, ನಂದವಾಡಗಿ, ಕೊಡಿಹಾಳ್, ಕರಡಿ ಹಿರೇಸಿಂಗನಗುತ್ತಿ ಸೇರಿದಂತೆ ಈ ಭಾಗದ ಎಲ್ಲ ಕಡೆಗಳಲ್ಲಿ ಸಕ್ಕರೆ ಆರತಿ ತಯಾರಿಕೆ ಭರ್ಜರಿ ನೆಡೆದಿದ್ದು ಮಾರಾಟವು ಜೋರಾಗಿದೆ.

96
5008 views