logo

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ. ಮುದ್ದು ಗಂಗಾಧರ್ ರವರಿಗೆ ಅಭಿನಂದನಾ ಸಮಾರಂಭ

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಿತದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ನೂತನ ಅಧ್ಯಕ್ಷರಾದ ಡಾಕ್ಟರ್. ಮುದ್ದು ಗಂಗಾಧರ್ ರವರಿಗೆ ಅಭಿನಂದನೆ ಸಮಾರಂಭವನ್ನು ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೆನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಪಂಚ ನದಿಗಳ ನಾಡು ಪಂಚ ಶಿಖರಗಳ ಬೀಡು ಚಿಕ್ಕಬಳ್ಳಾಪುರ ಈ ಚಿಕ್ಕಬಳ್ಳಾಪುರ ವ್ಯಾಪ್ತಿಯ ತಿಪ್ಪೇನಹಳ್ಳಿ ಗ್ರಾಮದಲ್ಲಿ ಜನಿಸಿದಂತಹ ಮುದ್ದು ಗಂಗಾಧರವರು ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಚಿಕ್ಕಬಳ್ಳಾಪುರದಲ್ಲಿ ಪಡೆದು ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಾ ರಾಷ್ಟ್ರ ಮತ್ತು ರಾಜ್ಯದಲ್ಲಿ ಪ್ರಖ್ಯಾತಿಯಾದವರು ಇಂದು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ರಾಜಕೀಯ ಕೌಶಲ್ಯ ಮತ್ತು ವೃತ್ತಿಯ ನೈಪುಣ್ಯತೆಯಲ್ಲಿ ಪ್ರಸಿದ್ಧಿಯಾದವರು ಡಾಕ್ಟರ್ ಮುದ್ದು ಗಂಗಾಧರ್ ರವರು. ತಮ್ಮ ಸರಳತೆ ಮತ್ತು ಸಜ್ಜನತೆಯಿಂದ ಪ್ರಸಿದ್ಧಿಯಾದವರು. ಇವರ ಪಕ್ಷನಿಷ್ಠೆ ಮತ್ತು ಕಾರ್ಯ ವೈಕಾರಿಯನ್ನು ಗಮನಿಸಿದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಇವರನ್ನು ಕರ್ನಾಟಕ ರಾಜ್ಯ ಮಾವು ಬೆಳೆಗಾರರ ಮತ್ತು ಮಾರುಕಟ್ಟೆ ನಿಗಮದ ನೂತನ ಅಧ್ಯಕ್ಷರಾಗಿ ನೇಮಿಸಿದೆ. ವೃತ್ತಿಯಲ್ಲಿ ವೈದ್ಯರಾಗಿ, ಸಮಾಜ ಸೇವಕರಾಗಿ, ರಾಜಕೀಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮುದ್ದು ಗಂಗಾಧರ್ ರವರು ಕರ್ನಾಟಕದ ಕಣ್ಮಣಿಯಾಗಿದ್ದಾರೆ.
ಇವರು ನೂತನವಾಗಿ ನಿಗಮ ಮಂಡಳಿ ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದರು. ತಮ್ಮ ಮನೆಯ ದೇವರು ಮತ್ತು ಇಷ್ಟ ದೇವರಾದಂತಹ ಶ್ರೀ ರಂಗಸ್ಥಳದ ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸುತ್ತಾ ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕುತ್ತಾ ಈ ದೇವರ ಕೃಪೆ ಮತ್ತು ನನ್ನ ಗ್ರಾಮದ ಜನರ ಆಶೀರ್ವಾದದೊಂದಿಗೆ ಇಂದು ನಾನು ಒಂದು ಉನ್ನತ ಪದವಿಯನ್ನು ಪಡೆಯಲು ಸಾಧ್ಯವಾಗಿದೆ. ನನಗೆ ಈ ಉನ್ನತ ಪದವಿಯನ್ನು ನೀಡಲು ಕಾರಣಕರ್ತರಾದ ರಾಷ್ಟ್ರೀಯ ಕಾಂಗ್ರೆಸ್ನ ಪಕ್ಷದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಮತ್ತು ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರಿಗೆ ಆಭಾರಿಯಾಗಿರುತ್ತೇನೆ. ಕರ್ನಾಟಕ ರಾಜ್ಯ ಮಾವು ಬೆಳೆಗಾರರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಮತ್ತು ನಾನು ಒಬ್ಬ ರೈತನ ಮಗನಾಗಿ ರೈತರ ಸಮಸ್ಯೆಯನ್ನ ಬಹಳ ಚೆನ್ನಾಗಿ ತಿಳಿದಿರುವನಾಗಿರುತ್ತೇನೆ ವಿಶೇಷವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ನಾಡಿಮಿಡಿತವನ್ನ ತಿಳಿದವನಾಗಿದ್ದೇನೆ. ಗಡಿನಾಡಿನ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ವಿಶ್ವ ಮಾವು ಬೆಳೆಗಾರರ ಮಾರುಕಟ್ಟೆ ಕೇಂದ್ರವಾಗಿದೆ ಅತಿ ಹೆಚ್ಚು ಮಾವು ಬೆಳೆಯುವುದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾತ್ರ.. ಇಂದು ಮಾವು ಬೆಳೆಗಾರರು ತುಂಬಾ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ ಅವರ ಪರವಾಗಿ ಧ್ವನಿಯಾಗಿ ಕಾರ್ಯನಿರ್ವಹಿಸುವುದು ನನ್ನ ಕರ್ತವ್ಯವಾಗಿದೆ ಎಂದು ತಿಳಿಸಿದರು. ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದ ಪ್ರವಾಸದ ಕಾರ್ಯವನ್ನು ಕೈಗೊಂಡಿದ್ದೇನೆ ರೈತರ ಸಮಸ್ಯೆಗಳನ್ನು ಹಾಲಿಸುತ್ತಾ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದೇನೆ ಈ ದಿನವೂ ಸಹ ನನ್ನ ಪ್ರವಾಸವನ್ನ ಉತ್ತರ ಕರ್ನಾಟಕದ ಭಾಗದಲ್ಲಿ ನಿರ್ವಹಿಸಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ನನ್ನ ಹುಟ್ಟುವೂ ರಾದ ತಿಪ್ಪೇನಹಳ್ಳಿ ಮತ್ತು ರಂಗಸ್ಥಳದ ಗ್ರಾಮಸ್ಥರಿಗೆ ನಾನು ಆಭಾರಿಯಾಗಿರುತ್ತೇನೆ. ನನ್ನನ್ನು ಪ್ರೀತಿಯಿಂದ ಆಹ್ವಾನಿಸಿ, ಸನ್ಮಾನಸಿದ ನನ್ನ ಚಿಕ್ಕಬಳ್ಳಾಪುರ ಜನತೆಗೆ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ತಿಳಿಸಿದರು. ಚಿಕ್ಕಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್ ರವru ಮಾತನಾಡುತ್ತಾ ನಮ್ಮ ಚಿಕ್ಕಬಳ್ಳಾಪುರದ ಮಣ್ಣಿನ ಮಗ ಉನ್ನತ ವಿದ್ಯಾಭ್ಯಾಸದೊಂದಿಗೆ ಉನ್ನತ ಪದವಿಯನ್ನ ಗಳಿಸಿರುವುದು ನಮಗೆ ಸಂತಸ ತಂದಿದೆ ಚಿಕ್ಕಬಳ್ಳಾಪುರದ ಕೀರ್ತಿಪತಾಕೆಯನ್ನು ರಾಷ್ಟ್ರದ ಮಟ್ಟಕ್ಕೆ ಏರಿಸುವವರು ಎಂಬ ನಂಬಿಕೆ ನಮಗಿದೆ ಎಂದು ತಿಳಿಸಿದರು. ತಿಪ್ಪೇನಳ್ಳಿ ಗ್ರಾಮಸ್ಥರು ತಮ್ಮ ಊರಿನ ಮುದ್ದು ಮಗನನ್ನು ಪ್ರೀತಿಯಿಂದ ಸನ್ಮಾನಿಸುತ್ತಾ ಬಡವರ ಆಶಾ ಕಿರಣ ನೀನು ನಮ್ಮ ಬದುಕಿಗೆ ಆಶಾಕಿರಣವಾಗಲು ಬಂದಿದ್ದೀಯಾ ನಿನ್ನ ಜ್ಞಾನದ ದೀಪದೊಂದಿಗೆ ನಮಗೆ ದಾರಿದೀಪವಾಗುವ ಲಕ್ಷಣಗಳು ನಮಗೆ ಕಾಣಿಸುತ್ತಿವೆ ಆದರ್ಶಪ್ರಾಯವಾಗಿ ನೀವು ಕಾರ್ಯನಿರ್ವಹಿಸಿ ಎಂದು ಆಶೀರ್ವದಿಸಿ ಸನ್ಮಾನಿಸಿದರು. ಡಾಕ್ಟರ್ ಮುದ್ದು ಗಂಗಾಧರ್ ರವರು ತಮ್ಮ ಬಾಲ್ಯದ ನೆನಪುಗಳನ್ನು ಸ್ಮರಿಸುತ್ತಾ ನಾನು ನಿಮ್ಮ ಮಗ ನಿಮ್ಮ ನೋವು ನಲಿಗಳಲ್ಲಿ ಒಬ್ಬನಾಗಿದ್ದೇನೆ ಅಧಿಕಾರ ಶಾಶ್ವತವಲ್ಲ ನಾನು ಮಾಡುವ ಕಾರ್ಯ ಮಾತ್ರವೇ ಶಾಶ್ವತ.. ಪ್ರಾಮಾಣಿಕವಾಗಿ ದೀನ ದಲಿತ ಬಡವರ, ರೈತರ ಪರ ಧ್ವನಿಯಾಗಿ ನಾನು ನಿಲ್ಲುತ್ತೇನೆ ಎಂದು ತಿಳಿಸಿದರು.

36
367 views