logo

ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದ ಬಂಜಾರ ಸಮುದಾಯದಿಂದ 20 ಮನೆಗಳ ಬಹಿಸ್ಕಾರ

ಕುಷ್ಟಗಿ

ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದ
ಬಂಜಾರ ಸಮುದಾಯದಿಂದ 20 ಮನೆಗಳ ಬಹಿಸ್ಕಾರ

20 ನೇ ಶತಮಾನದಲ್ಲಿಯು ಇಂಥ ಪ್ರಕರಣ

ಒಬ್ಬ ಮಹಿಳೆ ಮಾಡಿದ ತಪ್ಪಿಗೆ ಇಂಥ ಶಿಕ್ಷೆ

6 ಲಕ್ಷ 50 ಸಾವಿರ ದಂಡ ನೀಡಿದರು ಸಿಕ್ಕಿಲ್ಲ ನ್ಯಾಯ

ಹಲವಾರು ತಾಂಡಾ ಮುಖಂಡರಿಂದಲೂ ಬಗೆಹರಿಸಲು ಸಾಧ್ಯವಾಗಿಲ್ಲ

ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ


ಹೌದು, ವಿಕ್ಷಕರೇ 20 ನೇ ಶತಮಾನದಲ್ಲಿ ಸಹ ಇಂಥ ಪ್ರಕರಣಗಳು ಕರ್ನಾಟಕದಲ್ಲಿ ಬೆಳಕಿಗೆ ಬಂದಿರುವದು ನೋಡಿದರೆ ಅಚ್ಚರಿಯಾಗುತ್ತದೆ, ಇದು ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದಲ್ಲಿ ನಡೆದ ಘಟನೆ ಸುಮಾರು ಎರಡು ವರ್ಷದ ಹಿಂದೆ ಒಬ್ಬ ಮಹಿಳೆ ಪರಪುರುಷನ ಸಹವಾಸ ಮಾಡಿದ್ದಾಳೆ ಎಂದು ಸಮುದಾಯದಿಂದ 20 ಮನೆಗಳನ್ನು ಸಮುದಾಯದಿಂದ ಹೊರಯಿಡಲಾಯಿತು. ನಂತರ ಅವಳನ್ನು ಊರಿಂದ ಹೊರ ಹಾಕಿ 6 ಲಕ್ಷ 50 ಸಾವಿರ ರೂಪಾಯಿ ಸಮುದಾಯಕ್ಕೆ ದಂಡ ಕಟ್ಟಿದರೂ ಸಹ ಸಮುದಾಯದವರು ನಮ್ಮನ್ನು ಯಾವದೇ ಕಾರ್ಯಕ್ರಮಕ್ಕೆ ಸೇರಿಸಿಕೊಳ್ಳುವದಿಲ್ಲ, ನಮ್ಮ ಮಕ್ಕಳನ್ನು ಹಿಯಾಲಿಸುವದು, ಹೆಣ್ಣು ಮಕ್ಕಳನ್ನು ಅವ್ಯಾಚ್ಯ ಪದಗಳಿಂದ ಬೈದಾದಿವುದು ಮತ್ತು ಒಂದು ಮನೆಯಿಂದ 1 ಲಕ್ಷ ರೂಪಾಯಿ ಕೊಟ್ಟರೆ ಮಾತ್ರ ಸಮುದಾಯದಲ್ಲಿ ಸೇರಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಅಲ್ಲಿ ನೊಂದ ಸಾರವಜನಿಕರು ಆರೋಪಿಸಿದ್ದಾರೆ. ಸಂಬಂದಪಟ್ಟ ಅಧಿಕಾರಿಗಳು ಮತ್ತು ಅಲ್ಲಿರುವ ಮುಖಂಡರು ಸೇರಿ ನ್ಯಾಯ ಕೊಡಿಸಬೇಕೆಂದು ನೊಂದವರು ಮನವಿ ಮಾಡಿದ್ದಾರೆ.

27
1238 views