logo

ಚಿಕ್ಕೋಡಿ :- ಗಂಡನ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ

ಗಂಡನ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ..!

ಇಂದು ಬೆಳಗಿನ ಜಾವದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಪತ್ನಿ ಹಾಗು ಸಂಬಂಧಿಕರ ಮೆಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಪತ್ನಿ ರಾಜಶ್ರೀಯ ಮೇಲೆ ಗಂಡ ರಾಕೇಶ ಮತ್ತು ಆತನ ಸಂಬಂಧಿಕರಿಂದ ಮಾರಣಾಂತಿಕ ಹಲ್ಲೆ ನಡೆಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾಯಿದೆ.

ಗಂಡನ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ ಹೆಂಡತಿಯ ಮೇಲೆ ಗಂಡ ಕೋಪಗೊಂಡು ಹಲ್ಲೆ ಮಾಡಿದ್ದಾನೆ.

ದೀಪಾವಳಿ ಹಬ್ಬದ ಪೂಜೆಗೆ ಬಾ ಎಂದು ಕರೆದು ನಯವಾಗಿ ವಂಚಿಸಿ, ಹೆಂಡತಿ ಮತ್ತು ಹೆಂಡತಿಯ ಸಂಬಂಧಿಕರ ಮೇಲೆ ಗಂಡ ಮತ್ತು ಗಂಡನ ಸಂಬಂಧಿಕರು ಮನಸೋ ಇಚ್ಛೆ ತಳಿಸಿದ್ದಾರೆ.

ಹೆಂಡತಿ ರಾಜಶ್ರೀ ಮತ್ತು ಗಂಡ ರಾಕೇಶ್ ಹೊಸಮನಿ ಇವರ ಮಧ್ಯ ಹಲವಾರು ಬಾರಿ ರಾಕೇಶನ (ಗಂಡ) ಅನೈತಿಕ ಸಂಬಂಧದ ಜಗಳ ಆಗಿತ್ತು.

ಆ ಸಂದರ್ಭದಲ್ಲಿ ರಾಜಶ್ರೀ ತನ್ನ ಗಂಡನ ವಿರುದ್ಧ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಳು ಆದರೆ ನ್ಯಾಯ ಸಿಗದ ಹಿನ್ನೆಲೆ, ಹಿಂದಿಲ್ಲ ನಾಳೆ ಗಂಡ ಸುಧಾರಿಸುತ್ತಾನೆ ಎಂದು ಹಿರಿಯರ ಮಾತಿಗೆ ಗೌರವ ಕೊಟ್ಟು ಜೀವನ ಮಾಡುತ್ತಿದ್ದಳು.

ಇಂದು ತನ್ನ ಪತಿರಾಯನ ದೌರ್ಜನ್ಯ ಮತ್ತು ಹಲ್ಲೆಯಿಂದ ಪತ್ನಿ ಹಾಗೂ ತಾಯಿ ಗಂಭೀರವಾಗಿ ಗಾಯಗೊಂಡು ಗೋಕಾಕದ ಸರಕಾರಿ ಆಸ್ಪತ್ರೆ ಗೆ ಸೇರಿದ್ದಾರೆ.

ಮುಸ್ಲಿಂ ಯುವತಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಪತ್ನಿ ರಾಜಶ್ರೀ ಪ್ರಶ್ನಿಸುತ್ತಿದ್ದಳು. ಈ ಕಾರಣಕ್ಕೆ ಪತಿರಾಯ ರಾಕೇಶನು ತನ್ನವರ ಬೆಂಬಲದಿಂದ ಪತ್ನಿ ರಾಜ್ಯಶ್ರೀ ಹಾಗೂ ಅವಳ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಎದೆ, ಕುತ್ತಿಗೆ, ತಲೆಗೆ ಗಂಭೀರ ಗಾಯಗೊಳಿಸಿ ವಿಕೃತ ಮೆರೆದಿದ್ದಾನೆ.
ಸದ್ಯ ಹಲ್ಲೆಗೊಳಗಾದ ರಾಜಶ್ರೀ ಮತ್ತು ತಾಯಿ ಗೋಕಾಕ ಸರ್ಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊನೆಗೆ ತನ್ನ ಹೆಂಡತಿಯನ್ನು ಸಾಯಿಸುವ ಉದ್ದೇಶದಿಂದ ಈ ಹಲ್ಲೆ ಮಾಡಲಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ರಾಕೇಶನಂತಹ ಪುಂಡ ಗಂಡನ ಪಡೆದ ಎಷ್ಟೊ ಮಹಿಳೆಯರು ಕಾನೂನಿನ ನೆರವು ಸಿಗದೇ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ.
ದೌರ್ಜನ್ಯ ಒಳಗಾಗಿ ಅಬಯಲೆಯರಾದ ಮಹಿಳೆಯರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌದರಿ ಅವರು ಬೆಂಬಲಕ್ಕೆ ನಿಂತು ಇಂತಹ ಘಟನೆಗಳು ಮರುಕಳಿಸಿದಂತೆ ಕ್ರಮ ತೆಗೆದುಕೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಇನ್ನೂ ಕಾನೂನು ಕೈಗೆ ತೆಗೆದುಕೊಂಡು ಪತ್ನಿಯನ್ನು ಮನಸೋ ಇಚ್ಛೆ ತಳಿಸಿ ಕೊಲೆ ಮಾಡಲು ಯತ್ನಿಸಿದ ರಾಕೇಶ ಮತ್ತು ಆತನ ಅಣ್ಣ ತಮ್ಮಂದಿರ ಹೆಡೆಮುರಿ ಕಟ್ಟಿ ಕಾನೂನಿನ ಬಿಸಿ ಮುಟ್ಟಿಸಲು ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿಯವರು ಮುಂದಾಗಬೇಕೆಂಬುದು ರಾಜ್ಯದ ಮಹಿಳೆಯರ ಬೇಡಿಕೆಯಾಗಿದೆ.
ಬೀರೋ ರಿಪೋರ್ಟ್ ಶಿವಾನಂದ ಪಾಟೀಲ ಬೆಳಗಾವಿ

293
13551 views