logo

ದಸರಾ ಆನೆ ಬಾಲಣ್ಣನ ಕಿವಿ ಕೊಳೆತ:ತಪ್ಪಿತಸ್ಥರ ವಜಾ ಮಾಡಲು ತೇಜಸ್ವಿ ಆಗ್ರಹ

ದಸರಾ ಆನೆ ಬಾಲಣ್ಣನ ಕಿವಿ ಕೊಳೆತ:ತಪ್ಪಿತಸ್ಥರ ವಜಾ ಮಾಡಲು ತೇಜಸ್ವಿ ಆಗ್ರಹ

October 21, 2025 -

ಮೈಸೂರು: ಶಿವಮೊಗ್ಗ ಜಿಲ್ಲೆಯ ಸಕ್ಕರೆ ಬಯಲು ಆನೆ ಶಿಬಿರದಲ್ಲಿನ ವೈದ್ಯರ ಎಡವಟ್ಟಿನಿಂದ ಸಾಕಾನೆ ಬಾಲಣ್ಣನ ಆರೋಗ್ಯ ಗಂಭೀರವಾಗಿವಾದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ನಿರ್ಲಕ್ಷ್ಯ‌ ವಹಿಸಿದ ಅರಣ್ಯ ಇಲಾಖೆಯ‌‌ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಯನ್ನು ಸೇವೆಯಿಂದ ವಜಾಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬಾಲಣ್ಣ ಆನೆಗೆ ಈಗಾಗಲೇ ಕಾಲಿನ ಸಮಸ್ಯೆ ಇದೆ ಎಂದು ತಿಳಿದಿದ್ದರೂ ಸಹ ಅರಣ್ಯ ಅಧಿಕಾರಿಗಳು ಈ ಬಾರಿಯ ಶಿವಮೊಗ್ಗ ದಸರಾ ಉತ್ಸವದಲ್ಲಿ ಅಂಬಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಕರೆತಂದು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ತೇಜಸ್ವಿ ಬೇಸರ‌ ವ್ಯಕ್ತಪಡಿಸಿದ್ದಾರೆ.

ದಸರಾ ಸಮಯದಲ್ಲಿ ಬಾಲಣ್ಣ ನಿಗೆ ಕಾಲುನೋವು ಇದ್ದರು ಸಹ ಯಶಸ್ವಿ ಯಾಗಿ ಕಾರ್ಯ ನಿರ್ವಹಿಸಿತ್ತು, ಸಕ್ಕರೆ ಬಯಲಿಗೆ ಮರಳಿದ ನಂತರ ವಿಪರಿತವಾಗಿ ಕಾಲು ನೋವು ಕಾಡ ತೊಡಗಿತ್ತು ಅದಕ್ಕಾಗಿ ವೈದ್ಯರು ನೋವು ನಿವಾರಕ ಇಂಜೆಕ್ಷನ್ ಕಿವಿಗೆ ನೀಡಿದ್ದರು ಎಂದು ತಿಳಿದು ಬಂದಿದೆ
ಇದು ಆನೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು ಆನೆಯ ಕಿವಿ ಕೊಳೆಯುತ್ತಿದೆ, ಬಾಲಣ್ಣ ಸ್ಥಿತಿ ಚಿಂತಾಜನಕ ವಾಗಿದೆ ಎಂದು ಗೊತ್ತಾಗಿದೆ.

ಈಗಾಗಲೇ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಸಮಗ್ರ ತನಿಖೆ ನಡೆಸಲು ಆದೇಶ ನೀಡಿದ್ದಾರೆ.

ಆನೆ ಬಾಲಣ್ಣ ಆರೋಗ್ಯ ಸರಿ ಇಲ್ಲದಿರುವುದು ತಿಳಿದಿದ್ದರೂ ಕೂಡ ದಸರಾ ಉತ್ಸವಕ್ಕೆ ಕರೆತಂದ ಅಧಿಕಾರಿಗಳ ಮೇಲೆ ಮತ್ತು ಅವೈಜ್ಞಾನಿಕವಾಗಿ ಚುಚ್ಚುಮದ್ದು ನೀಡಿದ ವೈದ್ಯಾಧಿಕಾರಿಗಳನ್ನು ವಜಾಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.

15
986 views