logo

ಅಂಬೇಡ್ಕರ್ ಸೇವಾ ಸಮಿತಿ ಹತ್ತಿಕುಣಿ ಹೋಬಳಿ ಪಧಾದಿಕಾರಿಗಳ ಆಯ್ಕೆ

ಯಾದಗಿರಿ : ಅಂಬೇಡ್ಕರ್ ಸೇವಾ ಸಮಿತಿಯ ಹತ್ತಿಕುಣಿ ಹೋಬಳಿ ಘಟಕದ ಪದಾಧಿಕಾರಿಗಳ ಆಯ್ಕೆ ಸಮಾರಂಭ ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ|| ಕೆ.ಎಂ.ಸಂದೇಶ್ ರವರ ಆದೇಶದ ಮೇರೆಗೆ ಹಾಗೂ ರಾಹುಲ್ ಕೊಲ್ಲೂರ್‌ಕರ್ ಜಿಲ್ಲಾಧ್ಯಕ್ಷರು ಯಾದಗಿರಿ ರವರ ಆದೇಶದ ಮೇರೆಗೆ,‌ ಸಾಮಾಜಿಕ ಕಳಕಳಿಯಿಂದ ಶೋಷಿತರಿಗೆ, ದೀನದಲಿತರಿಗೆ, ಬಹುಜನರ, ಏಳಿಗೆಗಾಗಿ ಪ್ರಾಮಾಣಿಕ ಮತ್ತು ನಿಷ್ಠೆಯಿಂದ, ಶ್ರದ್ಧೆಯಿಂದ ನ್ಯಾಯಕ್ಕಾಗಿ ಹೋರಾಟಗಳನ್ನು ಮಾಡಿ ಸಾರ್ವಜನಿಕರಿಗೆ ಯಶಸ್ಸು ದೊರಕಿಸಿ, ಸಂಘನೆಗೆ ಕೀರ್ತಿ ತರುವ ಸಾಮಾಜಿಕ ಕಾರ್ಯಗಳನ್ನು ಮಾಡಬೇಕೆಂದು ಅದೇರೀತಿ, ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸಭೆ ಸಮಾರಂಭಕ್ಕೆ, ಸಮಾಜಿಕ ಕಾರ್ಯಕ್ರಮಗಳನ್ನು, ಸಮ್ಮೇಳಗಳನ್ನು ಉತ್ತಮವಾಗಿ ಒಗ್ಗಟ್ಟಿನಿಂದ ಪ್ರೀತಿ-ವಿಶ್ವಾಸದಿಂದ ಬೆಳೆಸುತ್ತೀರಿ, ಸಂಘಟನೆ ಶ್ರೇಯೋಭಿವೃದ್ಧಿ ಮಾಡಲು ಶ್ರಮಿಸಬೇಕೆಂದು ಶುಭ ಹಾರೈಸಿ ಅಧಿಕಾರ ನೀಡಿ ಆದೇಶಿಸಿ ಜಿಲ್ಲಾಧ್ಯಕ್ಷರಾದ ರಾಹುಲ್ ಕೊಲ್ಲೂರಕರ್ ಮಾತನಾಡಿದರು.
ಪದಾಧಿಕಾರಿಗಳ ಆಯ್ಕೆ ವಿವರ : ಅಧ್ಯಕ್ಷರು ಮರಿಲಿಂಗ, ಉಪಾಧ್ಯಕ್ಷರು,‌ ಮಲ್ಲಪ್ಪ, ಕಜೆನ್ಸಿ ಆಂಜನೇಯ ಕಾರ್ಯದರ್ಶಿ, ದಶರಥ ಪ್ರದಾನ ಕಾರ್ಯದರ್ಶಿ, ಶಿವಪ್ಪ ಕೊಟ್ರಿಕಿ, ಏಳುಕೋಟೆಪ್ಪ ಸದಸ್ಯರು, ಜ್ಯೋತಿಲಿಂಗ ಸದಸ್ಯರು, ನಾಗಪ್ಪ ಸದಸ್ಯರು, ದೇವಪ್ಪ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಂಬ್ರೆಷ್ ಕೂಲೂರ್, ಬಾಲಪ್ಪ ಕೂಲೂರ್, ಮೌನೇಶ್ ಗಿರೆಪ್ಪನೋರ್, ರಮೇಶ್ ಗಣಪುರ, ಮಲ್ಲು ಕೌಳೂರ್, ರಾಧಾಕೃಷ್ಣ ಕೌಳೂರ್, ದಶರಥ ಕೂಲೂರ್, ಅಂಜು ಮುದ್ನಾಳ್, ಅನೇಕ ಉಪಸ್ಥಿತರಿದ್ದರು.​

13
1996 views