ಚಿಕ್ಕನಾಯಕನಹಳ್ಳಿಯಲ್ಲಿ ದೂರೆ ರಾಜವೀರ ಮದಕರಿನಾಯಕರ ಜಯಂತಿ ಸಾಂಕೇತಿಕವಾಗಿ ಆಚರಣೆ
ಚಿಕ್ಕನಾಯಕನಹಳ್ಳಿ: ಚಿತ್ರದುರ್ಗದ ವೀರ ಪುರುಷ, ಧೈರ್ಯ ಮತ್ತು ಶೌರ್ಯಕ್ಕೆ ಪ್ರತೀಕವಾದ ದೂರೆ ರಾಜವೀರ ಮದಕರಿನಾಯಕರ ಜಯಂತಿಯನ್ನು ಇಂದು ಚಿಕ್ಕನಾಯಕನಹಳ್ಳಿಯಲ್ಲಿ ಸಮಾಜದ ಬಾಂಧವರು ಸೇರಿ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿಂಗದಹಳ್ಳಿ ರಾಜ್ ಕುಮಾರ್ ಅವರು ಮಾತನಾಡಿ, “ಇತಿಹಾಸದ ಪುರುಷರನ್ನು ಸ್ಮರಿಸುವ ಕೆಲಸ ಮುಂದುವರಿಯಬೇಕು. ಇತಿಹಾಸದ ಜೊತೆಗೆ ಸಾಗುವ ಈ ಸಮಯದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ, ಉದ್ಯೋಗ ಸೃಷ್ಟಿಗೆ ಮಾರ್ಗ ಮಾಡಬೇಕು. ಸಮಾಜ ಆರ್ಥಿಕವಾಗಿ ಸಬಲವಾಗಬೇಕು. ಇತರೆ ಜಯಂತಿಗಳಂತೆ ಮದಕರಿನಾಯಕರ ಜಯಂತಿಯೂ ಸರ್ಕಾರಿ ಜಯಂತಿಯಾಗಿ ಘೋಷಣೆ ಆಗಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಶಿಕುಮಾರ್, ರಾಮು, ರಾಕೇಶ್, ಗಂಗಣ್ಣ, ಯೋಗೀಶ್, ಪಾಂಡು, ಮುನಿಯಪ್ಪ, ಶರತ್, ಶಿವಣ್ಣ, ತಿಮ್ಮರಾಜು, ರಂಗಸ್ವಾಮಿ ಸೇರಿದಂತೆ ಅನೇಕ ಸಮಾಜ ಬಾಂಧವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮದಕರಿನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ತ್ಯಾಗ ಮತ್ತು ಶೌರ್ಯವನ್ನು ಸ್ಮರಿಸಲಾಯಿತು.