logo

ಚೌಡಯ್ಯ ಮೂರ್ತಿ ಭಗ್ನ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಗಡಿ ಪಾರು ಮಾಡಿ : ದೇವು ಅಚ್ಚೋಲಿ ಆಗ್ರಹ

ಯಾದಗಿರಿ : ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಮುತಗಾ ಗ್ರಾಮದಲ್ಲಿ  ಶರಣಸಾಹಿತ್ಯದ ಶ್ರೇಷ್ಠ ಶರಣ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಗೆ ಭಗ್ನ ಮಾಡಿರುವುದು ಖಂಡನೀಯ.ಈ ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಹನುಮಾನ ನಗರ ಅಧ್ಯಕ್ಷ ದೇವು ಅಚ್ಚೋಲಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡುತ್ತಾ – “ಅಂಬಿಗರ ಚೌಡಯ್ಯನವರು ನಮ್ಮ ಸಮಾಜದ ಆದರ್ಶಪುರುಷರು. ಅವರ ಮೂರ್ತಿಯನ್ನು ಹಾಳುಮಾಡಿದ ಕೃತ್ಯವು ಕೇವಲ ಮೂರ್ತಿಗೆ ಮಾತ್ರವಲ್ಲ, ಸಂಪೂರ್ಣ ಸಮಾಜದ ಗೌರವಕ್ಕೆ ಅವಮಾನವಾಗಿದೆ,” ಎಂದು ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆ ಮುತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಅಸ್ಥಾಪನೆ ಮಾಡಲಾಗಿತ್ತು. ಆದರೆ ಕೆಲವರು ಕೆಸರಿನ ಕಲ್ಲುಗಳನ್ನು ಎಸೆದು ಮೂರ್ತಿಯ ಎಡಗೈ ಮುರಿದಿದ್ದಾರೆ ಎಂಬ ದಾರುಣ ಘಟನೆ ನಡೆದಿದೆ. “ಇಂತಹ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು. ಸಮಾಜದ ಶಾಂತಿ ಹಾಳುಮಾಡುವ ಇಂತಹ ದೇಶದ್ರೋಹಿ ಮನೋಭಾವದ ವ್ಯಕ್ತಿಗಳನ್ನು ಗಡಿಪಾರು ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದ್ದಾರೆ.

16
231 views