logo

ಎಂ.ಎಸ್ಸಿ ಯೋಗದಲ್ಲಿ ಹರಿಪ್ರಸಾದ್ ಗೆ ಚಿನ್ನದ ಪದಕ ಪ್ರಧಾನ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 2022-23ನೇ ಸಾಲಿನ ವಿದ್ಯಾರ್ಥಿ ಹರಿಪ್ರಸಾದ್.ಎಂ ಅವರಿಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ 60ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಪ್ರಧಾನ ಮಾಡಲಾಯಿತು.

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಪತಿ ಥಾವರ್ ಚಂದ್ ಗೆಹ್ಲೋಟ್ ಅವರು ಚಿನ್ನದ ಪದಕವನ್ನು ನೀಡಿ ಪ್ರೋತ್ಸಾಹಿಸಿದರು.

ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಮಂತ್ರಿ ಹಾಗೂ ಸಹಕುಲಪತಿ ಡಾ.ಎಂ.ಸಿ.ಸುಧಾಕರ್ ಸಮಾರಂಭದಲ್ಲಿ ಉಪಸಿಸ್ಥರಿದ್ದರು.

ಡಾ.ಜಯಕರ.ಎಸ್.ಎಂ, ಕುಲಪತಿಗಳು
ಬೆಂಗಳೂರು ವಿಶ್ವವಿದ್ಯಾಲಯ ಇವರು ವಿಶ್ವವಿದ್ಯಾಲಯದ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ವರದಿ ಪ್ರಸ್ತುತಪಡಿಸುವರು .

ಹರಿಪ್ರಸಾದ್.ಎಂ ರವರು ಮೂಲತಃ ಗ್ರಾಮೀಣ ಭಾಗದವರಾಗಿದ್ದು, ತಂದೆ ಹಾಗೂ ತಾಯಿ ರೈತ ಕುಟುಂಬದಿಂದ ಬಂದಿದ್ದು, ತಂದೆ ಮತ್ತು ತಾಯಿಯ ಜೊತೆಗೆ ಪದವಿಯನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.

ಈ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿ ಹರಿಪ್ರಸಾದ್.ಎಂ ಮಾತನಾಡಿ, ಪದವಿ ಪಡೆಯಲು ಕಾರಣವಾದ ಯೋಗ ವಿಭಾಗದ ಸಂಯೋಜಕ ಎಸ್.ಶಿವಣ್ಣ ಹಾಗೂ ಎಲ್ಲಾ ಉಪನ್ಯಾಸಕರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ವರದಿ: ಹೈದರ್ ಸಾಬ್, ದೇವನಹಳ್ಳಿ

18
2564 views