
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಕೇಟಿಂಗ್ ಕ್ರೀಡೆಗೆ ಅಗ್ರ ಸ್ಥಾನವಿದೆ- ಪ್ರಕಾಶ್‌ಗೌಡ
ಕೆಆರ್‌ಎಸ್‌ಎ ವತಿಯಿಂದ ರೋಲರ್ ಸ್ಕೇಟಿಂಗ್ ಚಾಂಪಿಯನ್ಸ್ ಆಯ್ಕೆ ಸ್ಪರ್ಧೆ
ದೇವನಹಳ್ಳಿ : ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ರೋಲರ್ ಸ್ಕೇಟಿಂಗ್ ವತಿಯಿಂದ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭೆಗಳನ್ನು ಗುರ್ತಿಸಿ ಜಿಲ್ಲಾಮಟ್ಟಕ್ಕೆ ಕಳುಹಿಸಿಕೊಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಪ್ರಧಾನ ಕಾರ್‍ಯದರ್ಶಿ ಪ್ರಕಾಶ್ ಗೌಡ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಶಾಂತಿನಗರದಲ್ಲಿರುವ ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಆಟದ ರಿಂಕ್ ನಲ್ಲಿ 2ನೇ ಬಾರಿಗೆ ಸ್ಕೇಟಿಂಗ್ ಚಾಂಪಿಯನ್ಸ್ ಆಯ್ಕೆ ಸ್ಪರ್ದೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಕೇಟಿಂಗ್ ಕ್ರೀಡೆಗೆ ಅಗ್ರ ಸ್ಥಾನವಿದೆ. ಗ್ರಾಮೀಣ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗಬೇಕು. ಜಿಲ್ಲೆಗೆ ಆಯ್ಕೆ ಮಾಡುವ ಹಿನ್ನಲೆಯಲ್ಲಿಸ್ಪರ್ಧೆ ಏರ್ಪಡಿಸಲಾಗಿದೆ. ಸುಮಾರು ೮೦ ಜನ ಸ್ಕೇಟಿಂಗ್ ಅಲ್ಲಿ ಭಾಗವಹಿಸಿದ್ದು, 30-40 ಜನ ಮಕ್ಕಳನ್ನು ರಾಜ್ಯಮಟ್ಟಕ್ಕೆ ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಅಧ್ಯಕ್ಷ ರಮೇಶ್ ಅವರು ಮಾತನಾಡಿ, ಕ್ರೀಡೆ ಯಾರೊಬ್ಬರ ಸ್ವತ್ತಲ್ಲ. ಗ್ರಾಮೀಣ ಭಾಗದಲ್ಲಿ ಯುವಕರು, ಮಕ್ಕಳು ದುಶ್ಚಟಗಳಿಗೆ ದಾಸರಾಗದೆ ಇಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ಪರ್ಧೆಗೆ ಸಹಕಾರ ನೀಡಿದ ತರಬೇತುದಾರರಾದ ಮೋಹನ್ ಮತ್ತು ಹೇಮಂತ್ ಕುಮಾರ್ ಅವರನ್ನು ಫೆಡರೇಷನ್ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ವಿಜೇತ ಸ್ಕೇಟ್ಸ್ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.
ಈ ವೇಳೆ ಅಸೋಸಿಯೇಷನ್‌ನ ಖಜಾಂಚಿ ಭಾರತಿ ನಾರಾಯಣಸ್ವಾಮಿ, ತರಬೇತುದಾರರಾದ ಮೋಹನ್, ಅಶೋಕ್, ಮದನ್, ಹೇಮಂತ್‌ಕುಮಾರ್, ಪದಾಧಿಕಾರಿಗಳು, ಕ್ರೀಡಾಪಟುಗಳು ಮತ್ತು ಪೋಷಕರು ಇದ್ದರು.
ವರದಿ: ಹೈದರ್‌ಸಾಬ್, ದೇವನಹಳ್ಳಿ