logo

ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನೀಡಲು : ಬಸ್ಸುನಾಯಕ ಮನವಿ

ಯಾದಗಿರಿ : ರಾಮಾಯಣ ಮಹಾಕಾವ್ಯದ  ಕತೃ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಅಕ್ಟೋಬರ್ 07 ರಂದು ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಹಾಗೂ ಶಾಲೆಗಳಲ್ಲಿ ವಾಲ್ಮೀಕಿ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಗೌರವ ನೀಡಲು ವಾಲ್ಮೀಕಿ ಸಂಘದ ಯಾದಗಿರಿ ತಾಲ್ಲೂಕ ಉಪಾಧ್ಯಕ್ಷ ಬಸ್ಸುನಾಯಕ ಕೂಡ್ಲೂರ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು ವಾಲ್ಮೀಕಿ ತಮ್ಮ ರಾಮಾಯಣದ ಮೂಲಕ ಭಗವಾನ್ ಶ್ರೀರಾಮನ ಜೀವನ ಮತ್ತು ಮೌಲ್ಯಗಳನ್ನು ವಿವರಿಸಿದರು. ಇದು 24,000 ಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದೆ , ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದಾಗಿದೆ. ಈ ದಿನದಂದು ಜನರು ವಾಲ್ಮೀಕಿಯ ಜೀವನ ಮತ್ತು ಬೋಧನೆಗಳನ್ನು ಗೌರವಿಸುತ್ತಾರೆ. ಮೆರವಣಿಗೆಗಳು, ಪ್ರಾರ್ಥನೆಗಳು ಮತ್ತು ರಾಮಾಯಣದ ಪಠಣೆಯೊಂದಿಗೆ ಈ ಜಯಂತಿಯನ್ನು ಆಚರಿಸಲಾಗುತ್ತದೆ. ಇಂತಹ ಮಹಾನ್ ಋಷಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಕಡ್ಡಾಯವಾಗಿ ಸರ್ಕಾರಿ ಕಛೇರಿಯಲ್ಲಿ, ಸರ್ಕಾರಿ/ಖಾಸಗಿ ಶಾಲಾ ಕಾಲೇಜುಗಳಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದರು.​

20
952 views