ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಕರ್ಮ ಕಾಂಡ?
ಮೋಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಿದ್ದೇಶ್ವರ್ ದೇವರ ಪವಿತ್ರ ಜಾಗದಲ್ಲಿ ಪ್ರತಿ ವರ್ಷ ದಸರಾ ನಿಮಿತ್ಯ ಬನ್ನಿ ಮುರಿಯುವ ಕಾರ್ಯಕ್ರಮ ಮಾಡುತ್ತಾರೆ. ಬರಿ ಈ ವರ್ಷ ಅಧಿಕಾರಿಗಳ ದುರಾದೃಷ್ಟಓ ಮರದ ದುರಾದುಸ್ಟ್ಓ ಗೊತ್ತಿಲ ದಿನ ಬೆಳ್ಳಿಗೆ 3 ಘಂಟೆಗೆ ಗ್ರಾಮದ ಹೆಣ್ಣು ಮಕ್ಕಳು ಪೂಜೆ ಮಾಡೋದಕ್ಕೆ ಬರುತ್ತಾರೆ. ಮರದ್ ಸುತ್ತ ಕೊಳಚೆ ನೀರು ರಾಡಿ ಸರಿಯಾಗಿ ನಿಂತ್ತು ಪೂಜೆ ಮಾಡಕ್ಕ ಆಗಲ್ಲ.. ಕೊಳಚೆ ನೀರಲ್ಲಿ ನಿಂತ್ತು ಪೂಜೆ ಮಾಡುತ್ತಿದ್ದಾರೆ .
ಎಷ್ಟೋ ಸಲ ಪಂಚಾಯತಿಯವರಿಗೆ ಹೇಳಿದರು ಕೂಡ ಅವರು ದೇವರ ಬನ್ನಿ ಮರದ್ ಜಾಗದ ಕಡೆ ಗಮನ ಹರಿಸತಾ ಇಲ್ಲ. ಇನ್ನು 4.5 ದಿನದ ನಂತರ್ ಸಿದ್ದೇಶ್ವರ್ ದೇವರ ಪಾಲಖಿ ಬರುತ್ತೆ ಬನ್ನಿ ಮರದ್ ಪೂಜೆಗೆ ಗ್ರಾಮದ ಜನರು ಬರುತ್ತಾರೆ.. ಈಗಲಾದರೂ ಪಂಚಾಯತಿಯವರು ಗಮನ ಹರಿಸಿ ಗರಸ್ (ಮುರುಮ ) ಹಾಕಿ ಕೊಡುತ್ತಾರೋ ಅಥವಾ ಇಲ್ಲವೋ ಗೊತ್ತಿಲ್ಲ ಆದರೆ ನೆರೆಗ ಯೋಜನೆ ಅಡಿಯಲ್ಲಿ ಕಳಪೆ ಮಾಡಿರುವ ಹಾಗೆ ಇಲ್ಲಿಯೂ ಕಳಪೆ ಮಾಡಿರುತ್ತಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ್ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ತಾಲೂಕ್ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮೋಳೆ ಗ್ರಾಮದ ಕಡೆ ನೋಡಿ ಕೊಳ್ಳುತ್ತಾರೋ ಇಲ್ಲವೂ ಕಾದು ನೋಡಬೇಕಾಗಿದೆ.
ಋಷಿವಾಣಿ ಕನ್ನಡ ದಿನ ಪತ್ರಿಕೆ ಸಂಪಾದಕರು : ಮಹಾದೇವ ಮಗದುಮ್