ವಿಷಯ:- ಬೆಳಗಾವಿ ಜಿಲ್ಲೆಯ ಅಧ್ಯಕ್ಷರ ನೇಮಕಾತಿ ಕುರಿತು.
ನ್ಯಾಷನಲ್ ಪೀಪಲ್ಸ್ ಪಾರ್ಟಿಯ ರಾಜ್ಯಾಧ್ಯಕ್ಷರಾದ ಶ್ರೀ ಡಾ|| ಅಶೋಕ್ ಕುಮಾರ್, ಎಂ.ಬಿ.ಬಿ.ಎಸ್. ರವರ ಆದೇಶದಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಭು ಬಾಸ್ಕೋ, ಅವರು ಶ್ರೀ ಸತೀಶ ಭೂಪಾಲ ಸನದಿ ಅವರನ್ನು ಎನ್.ಪಿ.ಪಿ. ಪಕ್ಷದ ಬೆಳಗಾವಿ ಜಿಲ್ಲೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ನನ್ನ ಮತ ಮಾರಾಟಕ್ಕಲ್ಲ. ನನ್ನ ಮತ ನನ್ನ ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಎಂಬ ಧೈಯವಾಕ್ಯದೊಂದಿಗೆ, ಹಾಗೂ ಎನ್.ಪಿ.ಪಿ. ಪಕ್ಷದ ಸಿದ್ಧಾಂತಗಳಾದ, 'ವಿದ್ಯೆ, ಆರೋಗ್ಯ, ಹಾಗೂ ಸೇವೆ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ' ಎಂಬ ಘೋಷಣೆಯೊಂದಿಗೆ ಪಕ್ಷದ ಸಿದ್ಧಾಂತಗಳನ್ನು ಮನೆ ಮನೆಗೆ ತಲುಪಿಸಲು ಶ್ರಮವಹಿಸುತ್ತಿರುವ ಶ್ರೀ ಸತೀಶ ಭೂಪಾಲ ಸನದಿ ಅವರನ್ನು ಬೆಳಗಾವಿ ಜಿಲ್ಲೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಾ ಬೆಳಗಾವಿ ಜಿಲ್ಲೆಯ ಜನತೆಗೆ ನಾಯಕನಾಗಿ ಅಲ್ಲ ಸೇವಕನಾಗಿ ಕೆಲಸ ಮಾಡಬೇಕೆಂದು ಹಾರೈಸುತ್ತೇನೆ.
ಹಾಗೂ ನೀವು ಕೈಗೊಳ್ಳುವ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಾಜ್ಯ ಕಛೇರಿಗೆ ಕಳುಹಿಸಿಕೊಡಬೇಕಾಗಿ ಆದೇಶಿಸುತ್ತೇನೆ.