logo

ಸದ್ಗುರು, ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಂಡಾವಿಯಾ ಮತ್ತು ಬ್ಯಾಡ್ಮಿಂಟನ್ ಖ್ಯಾತಿಯ ಸೈನಾ ನೆಹ್ವಾಲ್ ಉಪಸ್ಥಿತಿಯಲ್ಲಿ 2025ರ ಈಶ ಗ್ರಾಮೋತ್ಸವದ ಗ್ರ್ಯಾಂಡ್‌ ಫಿನಾಲೆ

ಚಿಕ್ಕಬಳ್ಳಾಪುರ: ಸದ್ಗುರು, ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಂಡಾವಿಯಾ, ಬ್ಯಾಡ್ಮಿಂಟನ್ ಖ್ಯಾತಿಯ ಸೈನಾ ನೆಹ್ವಾಲ್, ಚೆಸ್ಸ್ ಗ್ರ್ಯಾಂಡ್‌ಮಾಸ್ಟರ್ ವೈಶಾಲಿ ರಮೇಶ್‌ಬಾಬು ಮತ್ತು ಪ್ಯಾರಾ-ಒಲಿಂಪಿಯನ್ ಭಾವಿನಾ ಪಟೇಲ್ ಅವರು ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾದ ಈಶ ಗ್ರಾಮೋತ್ಸವದ 17ನೇ ಆವೃತ್ತಿಯ ಗ್ರ್ಯಾಂಡ್‌ ಫಿನಾಲೆಗೆ ಶೋಭೆ ತರಲಿದ್ದಾರೆ. 21 ಸೆಪ್ಟೆಂಬರ್ 2025 ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಪ್ರತಿಷ್ಠಿತ ಆದಿಯೋಗಿಯ ಬಳಿ ನಡೆಯಲಿರುವ ಗ್ರ್ಯಾಂಡ್‌ ಫಿನಾಲೆ, ಈಶ ಫೌಂಡೇಶನ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ.

ಕರ್ನಾಟಕದಿಂದ ಇಬ್ಬನಿ ತಂಡ(ಹೆಗ್ಗಡಿಹಳ್ಳಿ, ಬೆಂಗಳೂರು ಗ್ರಾಮಾಂತರ) ಮತ್ತು ಅಪ್ಪು ಬಾಯ್ಸ್ ತಂಡ(ಮರಸನಹಳ್ಳಿ ಪಂಚಾಯತ್, ಚಿಕ್ಕಬಳ್ಳಾಪುರ ಗ್ರಾಮಾಂತರ) ಪುರುಷರ ವಾಲಿಬಾಲ್ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ, ಬ್ಲ್ಯಾಕ್ ಪ್ಯಾಂಥರ್ಸ್ ತಂಡ(ಮರಗೋಡು, ಕೊಡಗು) ಮತ್ತು ಶಾಸ್ತರ ಪಡುಮಲೆ–ಕುಡ್ಲಾ ಸ್ಟ್ರೈಕರ್ಸ್ ತಂಡ(ಬಡಗನ್ನೂರು, ದಕ್ಷಿಣ ಕನ್ನಡ) ಮಹಿಳೆಯರ ಥ್ರೋಬಾಲ್ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಈ ವರ್ಷದ ಉತ್ಸವದಲ್ಲಿ ಕರ್ನಾಟಕದ 18 ಜಿಲ್ಲೆಗಳಿಂದ 7,200 ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ದಾಖಲೆಯ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ .

2025ರ ಆವೃತ್ತಿಯು ಆಗಸ್ಟ್ 16 ರಂದು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಮತ್ತು ಮೊದಲ ಬಾರಿಗೆ ಒಡಿಶಾ ಸೇರಿದಂತೆ ಆರು ರಾಜ್ಯಗಳಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಿತು. ಈ ಬಾರಿಯ ಉತ್ಸವವು 183 ಸ್ಥಳಗಳು, 5,472 ತಂಡಗಳು, 12,000 ಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡಂತೆ ಒಟ್ಟು 63,220 ಆಟಗಾರರು, ಮತ್ತು 35,000ಕ್ಕೂ ಹೆಚ್ಚು ಹಳ್ಳಿಗಳ ಪ್ರಾತಿನಿಧ್ಯಕ್ಕೆ ಸಾಕ್ಷಿಯಾಯಿತು.

2004ರಲ್ಲಿ ಸದ್ಗುರುಗಳು ಚಾಲನೆ ನೀಡಿದ ಈಶ ಗ್ರಾಮೋತ್ಸವವು ಗ್ರಾಮೀಣ ಜನರ ಜೀವನದಲ್ಲಿ ಕ್ರೀಡೆ ಮತ್ತು ಆಟದ ಮನೋಭಾವವನ್ನು ತರುವ ಉದ್ದೇಶದಿಂದ ಆರಂಭಿಸಲಾಗಿದೆ. ತನ್ನ ವಿಶಿಷ್ಟ ರೂಪದಲ್ಲಿ ಈಶ ಗ್ರಾಮೋತ್ಸವವು ವೃತ್ತಿಪರರಿಗಲ್ಲದೇ, ಜನಸಾಮಾನ್ಯ ಗ್ರಾಮೀಣ ಜನರಾದ ದಿನಗೂಲಿ ಕಾರ್ಮಿಕರು, ಮೀನುಗಾರರು ಮತ್ತು ಗೃಹಿಣಿಯರು ಸೇರಿದಂತೆ ಇತರರಿಗೆ ತಮ್ಮ ದೈನಂದಿನ ಕಾರ್ಯಗಳಿಂದ ಬಿಡುಗಡೆ ಪಡೆದು ಕ್ರೀಡೆಯ ಸಂಭ್ರಮ ಮತ್ತು ಐಕ್ಯತೆಯ ಶಕ್ತಿಯನ್ನು ಆನಂದಿಸಲು ವೇದಿಕೆಯಾಗಿದೆ.

9
276 views