logo

36ನೇ ಶರಣ ನವರಾತ್ರಿ ಪೂಜಾ ಮಹೋತ್ಸವವು ದಿನಾಂಕ 21.9.2025 ರಿಂದ 06.10.2025

ಬೆಂಗಳೂರು:
ಬೆಂಗಳೂರು ನಗರದ ವಿದ್ಯಾಪುರಂನಲ್ಲಿರುವ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ 36ನೇ ಶರಣ ನವರಾತ್ರಿ ಪೂಜಾ ಮಹೋತ್ಸವವು ದಿನಾಂಕ 21-09-2025ರಿಂದ 06-10-2025ರವರೆಗೆ ಭಕ್ತಿಭಾವದಿಂದ ನೆರವೇರಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಆರ್. ವಸಂತಕುಮಾರ್ ಶಾಸ್ತ್ರಿ ಅವರು ಪ್ರೇಮ್ 5 ನ್ಯೂಸ್ ವರದಿಗಾರರಿಗೆ ಮಾಹಿತಿ ನೀಡಿದರು.

ಮಹೋತ್ಸವದ ಅವಧಿಯಲ್ಲಿ ಪ್ರತಿದಿನವೂ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ಪುರೋಹಿತರು ತಿಳಿಸಿದರು. ನವರಾತ್ರಿ ಆಚರಣೆಯನ್ನು ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಅವರು ಕರೆ ನೀಡಿದರು. ಇದರಿಂದ ದೇವಿಯ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಿದರು.

ವರದಿ: ಪ್ರೇಮ್ 5 ಸುದ್ದಿ ವರದಿಗಾರ
ಸಿ. ರಾಜೇಂದ್ರ ಕುಮಾರ್, ಬೆಂಗಳೂರು ನಗರ.

19
3352 views