logo

ಮಾಜಿ ಶಾಸಕರು ಹಾಗೂ ಬೆಂಗಳೂರು ಮಹಾನಗರ ಜನತಾದಳ ಜಾತ್ಯತೀತ ಪಕ್ಷದ ಅಧ್ಯಕ್ಷರಾದ *ಸನ್ಮಾನ್ಯ ಶ್ರೀ ಎಚ್ಎಂ ರಮೇಶ್ ಗೌಡ* ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಮಾನ್ಯರೇ

ಮಾಜಿ ಶಾಸಕರು ಹಾಗೂ ಬೆಂಗಳೂರು ಮಹಾನಗರ ಜನತಾದಳ ಜಾತ್ಯತೀತ ಪಕ್ಷದ ಅಧ್ಯಕ್ಷರಾದ *ಸನ್ಮಾನ್ಯ ಶ್ರೀ ಎಚ್ಎಂ ರಮೇಶ್ ಗೌಡ* ರವರ ಹುಟ್ಟುಹಬ್ಬದ ಪ್ರಯುಕ್ತ ದಿನಾಂಕ:15-9-2025ನೇ ಸೋಮವಾರದಂದು ಬೆಳಗ್ಗೆ 9.30 ಗಂಟೆಗೆ ಮಲ್ಲೇಶ್ವರದ ಶ್ರೀ ಕಾಡು ಮಲ್ಲಿಕಾರ್ಜುನ (ಕಾಡು ಮಲ್ಲೇಶ್ವರ) ದೇವಸ್ಥಾನದಲ್ಲಿ ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯವನ್ನು ಏರ್ಪಡಿಸಲಾಗಿದೆ.

ಅಂತೆಯೇ ಅದೇ ದಿನ ಬೆಳಿಗ್ಗೆ 11:30 ಗಂಟೆಗೆ ಮಲ್ಲೇಶ್ವರದ ಕೆ ಸಿ ಜನರಲ್ ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ದಾಖಲಾಗಿರುವ ಬಾಣಂತಿಯರು ಹಾಗೂ ಗರ್ಭಿಣಿ ಸ್ತ್ರೀಯರಿಗೆ ಸೀರೆಗಳನ್ನು ವಿತರಿಸಲಾಗುವುದು.

ಆದ್ದರಿಂದ ಪಕ್ಷದ ಮುಖಂಡರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರು, ಮಹಿಳಾ ವಿಭಾಗ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ಕೋರುತ್ತೇವೆ.

ಇಂತಿ
*ಶ್ರೀಮತಿ ಶೈಲಾ ಸಂತೋಜಿ ರಾವ್*
ಅಧ್ಯಕ್ಷರು, ಮಹಿಳಾ ವಿಭಾಗ, ಬೆಂಗಳೂರು ನಗರ
*ಕೆ. ವಿ. ನಾರಾಯಣಸ್ವಾಮಿ*
ಕಾರ್ಯಧ್ಯಕ್ಷರು, ಬೆಂಗಳೂರು ನಗರ
*ಎಸ್. ರಮೇಶ*
ಮಹಾಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ
*ಎ. ಎಂ. ಪ್ರವೀಣ್ ಕುಮಾರ್*
ಅಧ್ಯಕ್ಷರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ
*ಟಿ. ಆರ್. ತುಳಸಿರಾಮ್*
ಅಧ್ಯಕ್ಷರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
*ಎ. ನಾಗೇಶ್ವರರಾವ್*
ಅಧ್ಯಕ್ಷರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ

53
1156 views