logo

ಸೆಪ್ಟಂಬರ್ 13ರಂದು ಚಿಕ್ಕಬಳ್ಳಾಪುರದಲ್ಲಿ ಶ್ರೀ ಕೃಷ್ಣ ಜಯಂತಿ

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮತ್ತು ಯಾದವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೆಪ್ಟೆಂಬರ್ 13ರಂದು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯಾದವ ಜನಾಂಗದ ಮುಖಂಡರು ಹಾಗೂ ನಂದಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಆಗು ವಕೀಲ ಕೆಎ ಮುನೇಗೌಡ ತಿಳಿಸಿದರು.
ಶ್ರೀ ಕೃಷ್ಣ ಜಯಂತಿ ಎಂದು ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಸಬೇಕಾಗಿತ್ತು ಆದರೆ ತಾಲೂಕಿನಲ್ಲಿ ಯಾದವ ಜನಾಂಗದ ಮುಖಂಡರೊಬ್ಬರು ದೈವಾಧೀನರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿ ಕಾರ್ಯಕ್ರಮವನ್ನು ಹತ್ತು ಹಲವು ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳೊಂದಿಗೆ ಸೆಪ್ಟೆಂಬರ್ 13ರಂದು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಸೆಪ್ಟೆಂಬರ್ 13ರ ಬೆಳಗ್ಗೆ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ನಗರದ ಎಂಜಿ ರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನಂತರ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಊರಿನಲ್ಲಿ ವೈಭವಕ್ಕೆ ಮೆರವಣಿಗೆ ನಡೆಸಲಾಗುವುದು ನಂತರ ರಾಷ್ಟ್ರೀಯ ಹೆದ್ದಾರಿ 40 ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಿಷ್ಟಾಚಾರದ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ಯಾದವ ಜನಾಂಗದ ಗಣ್ಯರುಗಳು ಹಾಜರಿರುವರು ನಂತರ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪೌರಾಣಿಕ ನಾಟಕವನ್ನು ಪ್ರದರ್ಶಿಸಲಾಗುವುದು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ
ಚಿಕ್ಕಬಳ್ಳಾಪುರ ಜಿಲ್ಲಾ ಯಾದವ ಕ್ಷೇಮಭಿವೃದ್ಧಿ ಸಂಘದ ಅಧ್ಯಕ್ಷರು ಹಾಗು ವಕೀಲರಾದ
ಮುನಿಕೃಷ್ಣ

ಕೆಳಗಿನ್ ತೋಟದ ವೆಂಕಟೇಶ್
ಸಿ.ಎಂ.ಶ್ರೀನಿವಾಸ್
ನರಸಿಂಹಯ್ಯ
ರವಿಕುಮಾರ್ ನಾರಾಯಣಸ್ವಾಮಿ ಪ್ರಕಾಶ್ ಒಳಗೊಂಡಂತೆ ಮತ್ತೆ ಹಾಜರಿದ್ದರು..

12
275 views