logo

ಇಕ್ಬಾಲ್ ಖಾಸಿಂ ಅವರಿಗೆ ಪಿ.ಹೆಚ್.ಡಿ ಪದವಿ ಪ್ರಧಾನ

ಯಾದಗಿರಿ : ಜವಾಹರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಇಕ್ಬಾಲ್ ಖಾಸಿಂ ಇವರು 2024-25 ಶೈಕ್ಷಣಿಕ ಸಾಲಿನಲ್ಲಿ '' "ಅಲ್ಪಸಂಖ್ಯಾತ ಪ್ರೌಢಶಾಲೆಗಳ ಅರ್ಹ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಮೇಲೆ ವ್ಯಕ್ತಿತ್ವ, ಬುದ್ಧಿವಂತಿಕೆ ಮತ್ತು ಸೃಜನಶೀಲತೆಯ ಪರಿಣಾಮದ ಕುರಿತು ತುಲನಾತ್ಮಕ ಅಧ್ಯಯನ"ಎನ್ನುವ ವಿಷಯದ ಮೇಲೆ ಡಾ: ಅಂಜುಮರಾ ಶೇಕ್ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಪದವಿಯನ್ನು ನೀಡಲಾಗಿದೆ. ಇವರ ಶೈಕ್ಷಣಿಕ ಸಾಧನೆಯನ್ನು ಜವಾಹರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎ ಸಿ ಕಾಡ್ಲೂರರವರು ಹಾಗೂ ಸಹದ್ಯೋಗಿಗಳು, ಬೋಧಕೇತರ ಶಿಬ್ಬಂದಿಗಳು, ಜವಾಹಾರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ. ಪದವಿ ಪೂರ್ವ, ಶಿಕ್ಷಣ ಮಹಾವಿದ್ಯಾಲಯ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಕುಟುಂಬದ ಸದಸ್ಯರು ಅಭಿನಂದಿಸಿದ್ದಾರೆ.

4
10 views