logo

ವಾಟದಹೊಸಹಳ್ಳಿ ಕೆರೆ ಹೋರಾಟಕ್ಕೆ ನೇರವಾಗಿ ರಾಜಕೀಯ ಬಣ್ಣ ಕಟ್ಟಿದ ಶಾಸಕ ಪುಟ್ಟಸ್ವಾಮಿ ಗೌಡ.

ಗೌರಿಬಿದನೂರು ತಾಲ್ಲೂಕು ಕಚೇರಿ ಮುಂದೆ ಸುಮಾರು 30 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟವನ್ನು ಮಾಜಿ ಶಾಸಕ ಶಿವಶಂಕರ ರೆಡ್ಡಿ ಕೃಪಾ ಪೋಷಿತ ನಾಟಕ ಮಂಡಳಿ ಎಂದ ಹಾಲಿ ಶಾಸಕ ಕೆ,ಎಚ್,ಪುಟ್ಟಸ್ವಾಮಿಗೌಡ.

ಹೌದು ನಗರದ ತಮ್ಮ ಕಚೇರಿಯ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೂರು ವರ್ಷದ ಹಿಂದೆ ನಗರದ ಜನತೆ ಕುಡಿಯುವ ನೀರಿಗೆ ಎಷ್ಟು ಕಷ್ಟಪಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ. ಒಂದು ವರ್ಷ ನಮ್ಮ ಸಂಸ್ಥೆಯಿಂದಲೇ ಇಡೀ ನಗರಕ್ಕೆ ಉಚಿತ ನೀರು ಪೂರೈಸಲಾಗಿತ್ತು. ಅದರಿಂದ ಈ ಸಮಸ್ಯೆಯನ್ನು ನೀಗಿಸಲು ಸರ್ಕಾರದಿಂದ 70 ಕೋಟಿ ರೂ. ಅನುದಾನ ತಂದು ವಾಟದಹೊಸಹಳ್ಳಿ ಕೆರೆಯಿಂದ ನಗರಕ್ಕೆ ನೀರು ಹರಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಆದರೆ ಕೆರೆಗೆ ಎತ್ತಿನ ಹೊಳೆ ಯೋಜನೆಯಿಂದ ನೀರು ಹರಿಸಿ 120 ಎಂಸಿಎಫ್‌ಟಿ ಯಷ್ಟು ನೀರನ್ನು ಮಾತ್ರ ನಗರಕ್ಕೆ ಹರಿಸಲು ಮೊದಲಿಗೆ ಯೋಜನೆ ರೂಪಿಸಲಾಗಿತ್ತು. ಸ್ಥಳೀಯರ ಬೇಡಿಕೆಗೆ ಮಣಿದು ಈಗ ಕೇವಲ 70 ಎಂಸಿಎಫ್‌ಟಿಯಷ್ಟು ನೀರನ್ನು ಮಾತ್ರ ಆ ಕೆರೆಯಿಂದ, ತೆಗೆದುಕೊಂಡು ಉಳಿಕೆ ನೀರನ್ನು ಕಲ್ಲೂಡಿ ಹಾಗೂ ಗೊಟಕನಾಪುರ ಕೆರೆಗಳಿಂದ ನಗರಕ್ಕೆ ತರಲು ಯೋಜನೆ ಬದಲು ಮಾಡಲಾಗಿದೆ.

ಎತ್ತಿನಹೊಳೆ ನೀರನ್ನು ವಾಟದಹೊಸಹಳ್ಳಿ ಕೆರೆಗೆ ಹರಿಸದೆ ಒಂದು ಹನಿ ನೀರನ್ನೂ ನಗರಕ್ಕೆ ತರುವುದಿಲ್ಲ. ಆ ರೀತಿಯಾದರೆ ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಆದರೂ ಅರ್ಥ ಮಾಡಿಕೊಳ್ಳದೆ ಹೋರಾಟ ಮಾಡುತ್ತಿದ್ದಾರೆ ನಾನು ಏನು ಮಾಡಲಿ ಅವರು ಹಸಿರು ಶಾಲು ಹೊತ್ತು ಹೋರಾಟ ಮಾಡಿದ್ದರೆ ನಾನು ಹೋಗಿ ಭಾಗಿಯಾಗುತ್ತಿದ್ದೆ. ಆದರೆ, ಹಸಿರು ಶಾಲು ಒಳಗೆ ರಾಜಕೀಯದ ಶಾಲು ಹೊತ್ತು ಕೊಂಡಿದ್ದಾರೆ. ಇದು ಮಾಜಿ ಶಾಸಕ ಶಿವಶಂಕರ ರೆಡ್ಡಿ ಅವರ ಕೃಪಾ ಪೋಷಿತ ನಾಟಕ ಮಂಡಳಿ ನಿದ್ದೆ ಮಾಡುತ್ತಿರುವವರನ್ನು ಎಬ್ಬಿಸಬಹುದು ನಿದ್ದೆ ಮಾಡುವವರಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ ನಿಮಗೆ ಮೋಸ ಮಾಡಿ ಕೆಟ್ಟ ಎಂ,ಎಲ್‌,ಎ ಎಂದು ಹೆಸರು ತೆಗೆದುಕೊಳ್ಳಲು ನಾನು ಸಿದ್ದವಿಲ್ಲ ಎಂದರು.

ಈ ಸೇರ್ಪಡೆ ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ಟಿ.ಕೆ.ವಿಜಯರಾಘವ, ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಮುಖಂಡರಾದ ಆರ್.ಅಶೋಕ್ ಕುಮಾರ್, ವೆಂಕಟರಾಮರೆಡ್ಡಿ . ಆರ್, ಆರ್, ರೆಡ್ಡಿ, ಕೆ ಎಚ್ ಪಿ ಬಣದ ಕಾರ್ಯಕರ್ತರು ಇತರರು ಭಾಗಿಯಾಗಿದ್ದರು.

49
4724 views