ಹುಳಿಯಾರು ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ವಿತರಣೆ ಸ್ಥಗಿತ – ಜನರ ಪರದಾಟ
ಹುಳಿಯಾರು: ನಗರದ ಬಡವರ ನಂಬಿಕೆಯಾದ ಇಂದಿರಾ ಕ್ಯಾಂಟೀನ್‌ನಲ್ಲಿ ಸೆಪ್ಟೆಂಬರ್ 5ರಂದು (ಶುಕ್ರವಾರ) ಬೆಳಗಿನ ತಿಂಡಿ ವಿತರಣೆ ಸ್ಥಗಿತಗೊಂಡಿದೆ. ಈಗಾಗಲೇ ನಾಲ್ಕು–ಐದು ದಿನಗಳಿಂದ ರಾತ್ರಿ ಊಟ ವಿತರಣೆ ಕೂಡ ನಿಲ್ಲಿಸಿದ್ದು, ಕಡಿಮೆ ದರದಲ್ಲಿ ಊಟ-ತಿಂಡಿ ಪಡೆಯುತ್ತಿದ್ದ ಬಡಜನ, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
₹10ಕ್ಕೆ ದೊರೆಯುತ್ತಿದ್ದ ಸವಿಯ ತಿಂಡಿ ಹಾಗೂ ಊಟ ಸಿಗದೆ ಜನರು ಹಸಿದ ಹೊಟ್ಟೆ ಹಿಡಿದು ಪರದಾಡುತ್ತಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ಸೇವೆಯ ಹಠಾತ್ ಸ್ಥಗಿತದಿಂದ ದಿನಗೂಲಿ ಕಾರ್ಮಿಕರು, ಹಿರಿಯರು, ಗರಿಬರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಸ್ಥಳೀಯರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಪ್ರಶ್ನಿಸಿ –
“ಕ್ಯಾಂಟೀನ್ ಸ್ಥಿತಿ ನೋಡಲು ಬರುವವರು ಯಾರೂ ಇಲ್ಲವೇ? ಜನರ ಕಷ್ಟ ಯಾರಿಗೂ ಗೋಚರಿಸದೆಯೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
🔹 ಕಡಿಮೆ ಬೆಲೆಯ ಊಟ-ತಿಂಡಿ ನಿಲ್ಲುವಿಕೆ ಬಡವರಿಗೆ ದೊಡ್ಡ ಹೊಡೆತವಾಗಿದೆ.
🔹 ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕ್ಯಾಂಟೀನ್ ಸೇವೆ ಪುನರ್‌ಾರಂಭಿಸಬೇಕು ಎಂದು ಆಗ್ರಹ ವ್ಯಕ್ತವಾಗಿದೆ.